ಹೊಸದಿಗಂತ ವರದಿ ವಿಜಯಪುರ:
ಖಾತೆ ಹಂಚಿಕೆ ಇದೆಲ್ಲವೂ ಹೈಕಮಾಂಡ್ ನಿರ್ಧರಿಸುತ್ತೆ ಎಂದು ಕೈಗಾರಿಕಾ ಸಚಿವ ಎಂ.ಬಿ. ಪಾಟೀಲ ಹೇಳಿದರು.
ಖಾತೆ ಹಂಚಿಕೆ, ಕೆಲ ಸಚಿವರ ಬದಲಾವಣೆ ವಿಚಾರದ ಕುರಿತು ನಗರದಲ್ಲಿ ಪ್ರತಿಕ್ರಿಯಿಸಿ, ನನಗೆ ಅದು ಯಾವುದೂ ತಿಳಿದಿಲ್ಲ. ಮಂತ್ರಿಮಂಡಲ ಯಾರನ್ನ ಮಂತ್ರಿ ಮಾಡಬೇಕು. ಯಾರನ್ನ ಬಿಡಬೇಕು, ಯಾಕೆ ಮಾಡಬೇಕು, ಯಾಕೆ ಬಿಡಬೇಕು ಇದೆಲ್ಲವೂ ಕೂಡ ಕಾಂಗ್ರೆಸ್ ಪಕ್ಷದ ಹೈಕಮಾಂಡ್ ನಿರ್ಧಾರ ಮಾಡ್ತಾರೆ ಎಂದರು.
ಸಿಎಂ ಡಿ.ಕೆ.ಶಿವಕುಮಾರ, ಮಾಜಿ ಸಿಎಂ ಸಿದ್ದರಾಮಯ್ಯನವರು, ಎಐಸಿಸಿ ಅಧ್ಯಕ್ಷರು ನಮ್ಮ ರಾಜ್ಯದವರೇ ಇದ್ದಾರೆ. ಹಿರಿಯರಾದ ಮಲ್ಲಿಕಾರ್ಜುನ ಖರ್ಗೆಯವರು. ಅವರಿಗೆ ನಮ್ಮ ವಯಸ್ಸು ಎಷ್ಟಿದೆ ಅಷ್ಟು ರಾಜಕೀಯ ಅನುಭವ ಇದೆ. ಈಗ ಅವರು ಯಾರಿಗೆ ಏನು ಮಾಡಬೇಕು, ಕಾಲಕಾಲಕ್ಕೆ ಅವರು ಮಾಡಿಕೊಂಡು ಹೋಗ್ತಿರ್ತಾರೆ ಎಂದರು.
ಈಗ ಸ್ವಾಭಾವಿಕವಾಗಿ ನಮ್ಮಲ್ಲಿ 136 ಜನ ಏನು ಶಾಸಕರಿದ್ದೀವಿ ಎಲ್ಲರೂ ಕೂಡ ಮಂತ್ರಿಯಾಗಲಿಕ್ಕೆ ಅರ್ಹತೆ ಹೊಂದಿದ್ದಾರೆ. ಆದರೆ ಈಗ ಗೊತ್ತಿದೆಯಲ್ಲ, ಓನ್ಲಿ ಶೇ.15 ರಷ್ಟು ಆಗಿದೆ. 2018 ರಲ್ಲಿ ನಾನು ಮಂತ್ರಿ ಆಗಲಿಲ್ಲವಲ್ಲ? ಆರು ತಿಂಗಳ ಕಾಲ ಎಂದರು.
ಇದನ್ನೂ ಓದಿ:
2013ರಂದ 2018ವರೆಗೆ ಜಲಸಂಪನ್ಮೂಲ ಸಚಿವನಾಗಿದ್ದೆ. ಅದಾದಮೇಲೆ ಸಮ್ಮಿಶ್ರ ಸರ್ಕಾರದಲ್ಲಿ ನಾನು ಮೊದಲು ಆರು ತಿಂಗಳು ಮಂತ್ರಿ ಆಗಲಿಲ್ಲ. ಹೈಕಮಾಂಡ್ ನಿರ್ಧಾರಗಳಿಗೆ ನಾವು ತಲೆಬಾಗಬೇಕಾಗುತ್ತದೆ. ಪರೋಕ್ಷವಾಗಿ ಇಂಡಿ ಶಾಸಕ ಯಶವಂತರಾಯಗೌಡ ಪಾಟೀಲ್, ಮುದ್ದೇಬಿಹಾಳ ಶಾಸಕ ಅಪ್ಪಾಜಿ ಸಿ.ಎಸ್. ನಾಡಗೌಡ ಗೆ ತಿರುಗೇಟು ನೀಡಿರು.
ವಿಜಯಪುರ ಜಿಲ್ಲೆಗೆ ಇನ್ನೊಂದು ಸಚಿವ ಸ್ಥಾನ ಕೇಳಿದ್ದ ವಿಚಾರಕ್ಕೆ, ನಾನು ಕೇಳಿದ್ದೆ, ಇನ್ನೊಂದು ಸ್ಥಾನ ಸಿಗಬೇಕು ಅಂತ ಬಹಳ ಕೇಳಿದ್ದೆ. ಮುಖ್ಯಮಂತ್ರಿ ಡಿ. ಕೆ. ಶಿವಕುಮಾರ್ ಅವರಿಗೆ, ರಾಜ್ಯ ಉಸ್ತುವಾರಿ ಸುರ್ಜೇವಾಲ ಅವರಿಗೆ ಬಹಳ ಮುಕ್ತವಾಗಿ ಹೇಳಿದ್ದೀನಿ. ಬೇಕಾದರೆ ಯಾರ ಬಳಿ ಹೋಗಿ ಕೇಳಿಕೊಳ್ಳಬೇಕೋ ಅವರಿಗೆ ಕೇಳಿಕೊಳ್ಳಿ ಎಂದರು.
ವಿಜಯಪುರ ಜಿಲ್ಲೆಗೆ ಮತ್ತೊಂದು ಸಚಿವ ಸ್ಥಾನ ಕೈತಪ್ಪಿದ್ದಕ್ಕೆ ಎಂ.ಬಿ. ಪಾಟೀಲ್ ಮೇಲೆ ಆರೋಪ ವಿಚಾರಕ್ಕೆ, ನೋಡಿ, ಮಂತ್ರಿ ಮಾಡುವುದು ಬಿಡುವುದು ಯಾರು?, ಮುಖ್ಯಮಂತ್ರಿಗಳು ಮತ್ತು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಹಾಗೂ ಎಐಸಿಸಿ ಅಧ್ಯಕ್ಷರು, ವೇಣುಗೋಪಾಲ್ , ಸುರ್ಜೇವಾಲ , ರಾಹುಲ್ ಗಾಂಧಿ ಅವರು ನನಗೇನು ಸಂಬಂಧ ರೀ? 2018 ರಲ್ಲಿ ನಾನು ಮಂತ್ರಿಯಾಗಿದ್ದೆನಲ್ಲಪ್ಪ, ಅವರು ಮಾಡ್ತಾರೆ. ಆ ಆರೋಪ ನಾನು ಮೊನ್ನೆನೇ ಹೇಳಿದ್ದೀನಿ. ನಾನು ಪದೇ ಪದೇ ಇದರ ಬಗ್ಗೆ ಕಾಮೆಂಟ್ ಮಾಡೋಕೆ ಹೋಗಲ್ಲ. ಮೊನ್ನೆನೇ ನಾನು ಬೆಂಗಳೂರಿನಲ್ಲಿ ಒಂದು ಮಾತು ಹೇಳಿದ್ದೀನಿ. ನಿಮಗೆ ಮಂತ್ರಿ ಯಾಕೆ ಮಾಡಿಲ್ಲ ಅನ್ನೋದನ್ನ ಹೋಗಿ ಯಾರಿಗೆ ಕೇಳಬೇಕು?, ಮುಖ್ಯಮಂತ್ರಿಗಳನ್ನು ಕೇಳಿಕೊಳ್ಳಿ, ನಿಮ್ಮನ್ನ ಯಾಕೆ ಮಂತ್ರಿ ಮಾಡಿಲ್ಲ’ ಅಂತ. ಸುರ್ಜೇವಾಲ ಅವರಿಗೆ ಹೋಗಿ ಕೇಳಿಕೊಳ್ಳಿ ನಿಮ್ಮನ್ನ ಯಾಕೆ ಮಂತ್ರಿ ಮಾಡಿಲ್ಲ. ಅಂತ. ನಾನು ಕಾಂಗ್ರೆಸ್ ಪಕ್ಷದ ಹೈಕಮಾಂಡ್ ಅಲ್ಲ. ನಾನು ಎರಡು ಸ್ಥಾನ ಕೊಡಿ ಅಂತ ಕೇಳಿದ್ದೀನಿ ಮತ್ತು ನನ್ನ ಅಭಿಪ್ರಾಯವನ್ನು ಕೂಡ ನಾನು ಹೇಳಿದ್ದೀನಿ ಎಂದರು.



