August 12, 2026
Wednesday, August 12, 2026
spot_img

ದಿನಭವಿಷ್ಯ: ಇತರರ ಉತ್ತಮ ಕೆಲಸಗಳನ್ನು ಹೊಗಳುವುದನ್ನು ಕಲಿಯಿರಿ, ನಿಮ್ಮ ವರ್ತನೆ ಎಲ್ಲರಿಗೂ ಇಷ್ಟವಾದೀತು!

ಮೇಷ
ವೃತ್ತಿ ಕ್ಷೇತ್ರದ ಕೆಲವು ಬೆಳವಣಿಗೆಯಿಂದ ಅಸಮಾಧಾನ. ಕೆಲವರನ್ನು ತಿದ್ದಲು ಹೋಗಬೇಡಿ. ಕುಟುಂಬ ಸದಸ್ಯರ ಸಂಗದಲ್ಲಿ ನೆಮ್ಮದಿ.  
ವೃಷಭ
ಸಣ್ಣ ವಿಷಯಕ್ಕೂ ರೇಗುವ ಸನ್ನಿವೇಶ ಉಂಟಾದೀತು. ತಾಳ್ಮೆ ವಹಿಸಿ. ನಿಮ್ಮ ಕೆಲಸದಲ್ಲಿ ಬೇಕೆಂದೇ ಕೆಲವರು ತಪ್ಪು ಹುಡುಕುವರು.      
ಮಿಥುನ
ಸಂಗಾತಿಯ ವರ್ತನೆ ಅಸಮಾಧಾನ ಉಂಟು ಮಾಡಬಹುದು. ವಾಗ್ವಾದ ಸಂಭವ. ನಿಮ್ಮಿಂದ ತಾಳ್ಮೆಯ ನಡೆ ಅವಶ್ಯ. ಖರ್ಚು ಹೆಚ್ಚಲಿದೆ.  
ಕಟಕ
ಸಮಯಕ್ಕೆ ತಕ್ಕಂತೆ ಸೂಕ್ತ ನಿರ್ಧಾರ ತಾಳಿ. ಹಳೆಯ ನಿರ್ಧಾರಕ್ಕೇ ಅಂಟಿಕೊಂಡು ಕೂರದಿರಿ. ಆಪ್ತರಿಂದ ಶುಭ ಸುದ್ದಿ ಕೇಳಿಬಂದೀತು.  
ಸಿಂಹ
ಅನಿಯಂತ್ರಿತ  ಖರ್ಚು ಚಿಂತೆ ತಂದೀತು. ಹಿತೈಷಿಗಳ ಬೇಕುಬೇಡ ವಿಚಾರಿಸಿ. ಅವರನ್ನು ಅವಗಣನೆ ಮಾಡಬೇಡಿ. ಪ್ರೀತಿಯಲ್ಲಿ ಯಶಸ್ಸು.    
ಕನ್ಯಾ
ವೃತ್ತಿಯಲ್ಲಿ ಕೆಲವು ಬೆಳವಣಿಗೆ ನಿರಾಶೆ ತರುವುದು. ಬಂಧುವಿನ ಜತೆ ವಿರಸ. ಯಶಸ್ಸಿನ ದಾರಿಯಲ್ಲಿ ವಿಘ್ನ ತಲೆದೋರಲಿದೆ.    
ತುಲಾ
ಸಂಬಂಧಪಡದ ವಿವಾದದಲ್ಲಿ ಸಿಲುಕುವ ಸಾಧ್ಯತೆಯಿದೆ. ಅದರಿಂದ ದೂರವಿರಿ.  ಮಕ್ಕಳ ಸಾಧನೆ ಹೆಮ್ಮೆ ತರುವುದು. ಕೌಟುಂಬಿಕ ಸಹಕಾರ.      
ವೃಶ್ಚಿಕ
ಇತ್ತೀಚಿನ ಪ್ರತಿಕೂಲ ಪರಿಸ್ಥಿತಿಯ ಕಾರಣದಿಂದ ಧಾರ್ಮಿಕ ಭಾವ ಹೆಚ್ಚಬಹುದು. ಕಷ್ಟ ಮರೆಯಲು ದೇವರ ಮೊರೆ ಹೋಗುವಿರಿ.        
ಧನು
ನಿಮ್ಮ ಸಾಧನೆಯ ಶ್ರೇಯಸ್ಸು ಇತರರು ಕಸಿದುಕೊಂಡಾರು. ಎಚ್ಚರ ದಿಂದಿರಿ. ಕೌಟುಂಬಿಕ ಬಿಕ್ಕಟ್ಟು.  ಅತಿರೇಕದ ಪ್ರತಿಕ್ರಿಯೆ ತೋರದಿರಿ.  
ಮಕರ
ವ್ಯವಹಾರದ ಒತ್ತಡ ಮಧ್ಯೆಯೂ ಖುಷಿ ಪಡುವ ಪ್ರಸಂಗ ಉಂಟಾಗಲಿದೆ. ಆರ್ಥಿಕ ಉನ್ನತಿ.  ವೈವಾಹಿಕ ಸಂಬಂಧ ಕೂಡಿಬಂದೀತು. ಆರೋಗ್ಯ ವೃದ್ಧಿ.  
ಕುಂಭ
ಇತರರ ಒಳ್ಳೆಯ ಕೆಲಸ ಶ್ಲಾಸಿರಿ. ನಿಮ್ಮ ವರ್ತನೆಯಿಂದ ಇತರರ ಮೆಚ್ಚುಗೆ ಗಳಿಸುವಿರಿ. ಕೌಟುಂಬಿಕ ಸಂತೋಷ. ಬಂಧುಗಳ  ಭೇಟಿ.  
ಮೀನ
 ಎಲ್ಲರನ್ನು ಕುರುಡಾಗಿ ನಂಬದಿರಿ. ನಿಮ್ಮನ್ನು ವಂಚಿಸುವ ಯತ್ನ ನಡೆದೀತು. ಪ್ರೀತಿಯ ವಿಚಾರದಲ್ಲಿ ಗುಣಾತ್ಮಕ ಸ್ಪಂದನೆ ಸಿಗಲಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !