September 27, 2026
Sunday, September 27, 2026
spot_img

ಚಿಂತೆ ಬಿಡಿ, ತಿಂಡಿ ಮಾಡಿ‌ 56 | ಸ್ವಲ್ಪ ದಪ್ಪ ಆಗಬೇಕು ಅನ್ನೋದು ನಿಮ್ಮ ಗುರಿಯಾಗಿದ್ರೆ ಮಿಸ್ ಮಾಡದೇ ನಿತ್ಯವೂ ಮೆಂತ್ಯೆ ಮುದ್ದೆ ತಿನ್ನಿ

ಸಾಮಾನ್ಯವಾಗಿ ಮೊದಲ ಬಾರಿ ಋತುಮತಿಯಾದ ಹೆಣ್ಣುಮಕ್ಕಳಿಗೆ, ಬಾಣಂತಿಯರಿಗೆ ಮೆಂತ್ಯೆಯ ಪದಾರ್ಥಗಳನ್ನು ನೀಡಲಾಗುತ್ತದೆ. ಇದರಿಂದ ಮೂಳೆಗಳ ಆರೋಗ್ಯ ಚೆನ್ನಾಗಿರುತ್ತದೆ. ಮಕ್ಕಳಿಗೆ ಹೆಚ್ಚು ಹಾಲುಣಿಸಲಿ ಎನ್ನುವ ಕಾರಣಕ್ಕೆ ಬಾಣಂತಿಯರಿಗೆ ಮೆಂತ್ಯೆಯ ಪದಾರ್ಥಗಳಾದ ಕಡುಬು, ಮುದ್ದೆಯನ್ನು ಮಾಡಿಕೊಡಲಾಗುತ್ತದೆ. ಈ ಮೆಂತ್ಯೆಮುದ್ದೆಯನ್ನು ತುಪ್ಪ ಹಾಗೂ ಬೆಲ್ಲ ಅಥವಾ ಸಕ್ಕರೆಯೊಂದಿಗೆ ಸವಿಯಬಹುದು. ಮೆಂತ್ಯೆಯ ಮುದ್ದೆ ತಯಾರಿಸೋಕೆ ಮೆಂತ್ಯೆಯ ಹಿಟ್ಟನ್ನು ಮಾಡಿಸಬೇಕಾಗುತ್ತದೆ.

ಹಿಟ್ಟನ್ನು ಹೇಗೆ ಮಾಡೋದು?

ಒಂದು ಕೆಜಿ ಮೆಂತ್ಯ
ಒಂದು ಕೆಜಿ ಅಕ್ಕಿ
ಒಂದು ಕೆಜಿ ಗೋಧಿಯನ್ನು ಮಿಕ್ಸ್‌ ಮಾಡಿ ಪುಡಿ ಮಾಡಿಸಿಕೊಂಡರೆ ಹಿಟ್ಟು ರೆಡಿ

ಮುದ್ದೆ ಮಾಡುವ ವಿಧಾನ

ಮೊದಲು ಬಾಣಲೆಗೆ ಒಂದು ಲೋಟ ನೀರು ಹಾಕಿ ಬಿಸಿ ಮಾಡಿ, ಅದಕ್ಕೆ ಒಂದು ಸ್ಪೂನ್‌ ಹಿಟ್ಟನ್ನು ಹಾಕಿ ಮಿಕ್ಸ್‌ ಮಾಡಿ

ನಂತರ ಇದಕ್ಕೆ ಅರ್ಧ ಲೋಟದಷ್ಟು ಹಿಟ್ಟನ್ನು ಹಾಕಿ ಹದಿನೈದು ನಿಮಿಷ ಬೇಯಲು ಬಿಡಿ

ಆನಂತರ ಗಂಟಿಲ್ಲದಂತೆ ಕಲಸಿ ಮುದ್ದೆಯನ್ನು ತಯಾರು ಮಾಡಿ. ಸಕ್ಕರೆ ತಿನ್ನೋದಿಲ್ಲ ಎನ್ನುವುದಾದರೆ ನೀರಿಗೆ ಬೆಲ್ಲವನ್ನು ಹಾಕಿಕೊಳ್ಳಿ

ಇಲ್ಲವಾದರೆ ಮುದ್ದೆ ಜೊತೆ ಸಕ್ಕರೆ ತುಪ್ಪ ಹಾಕಿಕೊಂಡು ತಿನ್ನಿ, ಇದರ ರುಚಿಯೂ ಅದ್ಭುತವಾಗಿರುತ್ತದೆ ಹಾಗೂ ದೀರ್ಘಕಾಲದವರೆಗೂ ಹಸಿವಾಗುವುದಿಲ್ಲ.

Must Read