August 12, 2026
Wednesday, August 12, 2026
spot_img

ಹಸಿವೆಂದು ಸಿಕ್ಕಾಪಟ್ಟೆ ಊಟ ಆರ್ಡರ್‌ ಮಾಡಿತಿಂದು, ಪಶ್ಚಾತ್ತಾಪ ಪಡ್ತೀರಾ? ಈ app ಬಗ್ಗೆ ತಿಳಿದುಕೊಳ್ಳಿ..

ಫೋನ್‌ನಲ್ಲಿರುವ ಫುಡ್‌ ಡೆಲಿವರಿ app ಓಪನ್‌ ಮಾಡೋದು, ನಿಮ್ಮಿಷ್ಟದ ರೆಸ್ಟೋರೆಂಟ್‌ನಿಂದ ನಿಮ್ಮಿಷ್ಟದ ಊಟ ಆರ್ಡರ್‌ ಮಾಡೋದು, ಆನಂತರ ಡೆಲಿವರಿ ಸಿಬ್ಬಂದಿ ಗಾಡಿಯಲ್ಲಿ ಬರ್ತಿರುವ ಚಿತ್ರಣವನ್ನು ನೋಡಿ ಖುಷಿ ಪಡೋದು, ಫೈನಲಿ ಊಟ ತಮ್ಮ ಕೈಗೆ ತಲುಪಿದಾಗ ಖುಷಿಯಲ್ಲಿ ಗಬಗಬ ತಿಂದುಬಿಡೋದು, ಆನಂತರ ತೂಕ ಹೆಚ್ಚಾಯ್ತು, ತಿನ್ನಬಾರದಿತ್ತು, ಡೆಲಿವರಿ app ಇರಲಿಲ್ಲ ಎಂದಾಗಿದ್ದರೆ ನಾನು ಆರ್ಡರ್‌ ಮಾಡ್ತಾ ಇರಲಿಲ್ಲ, ಮನೆಯಲ್ಲೇ ಏನೋ ಹೆಲ್ತಿ ಮಾಡಿಕೊಂಡು ತಿನ್ನುತ್ತಿದ್ದೆ ಎಂದು ಡೆಲಿವರಿ appನ್ನು ಬೈಕೊಳ್ಳೋದು..

ಇದನ್ನು ನಿಮ್ಮಲ್ಲಿ ಎಷ್ಟು ಮಂದಿ ಈಗಾಗಲೇ ಮಾಡಿದ್ದೀರಿ? ಒಪ್ಪಿಕೊಳ್ಳೋದಿಲ್ಲ ಅಂದ್ರು ಮಾಡಿಯೇ ಮಾಡಿರ್ತೀರಿ. ಈ ರೀತಿ ಮಾಡೋದು ದೊಡ್ಡ ಕ್ರೈಮ್‌ ಅಲ್ಲ ಇದು ಸಾಮಾನ್ಯ. ಆದರೆ ಸಾಧ್ಯವಾದಷ್ಟು ಮನೆಯ, ಹೆಲ್ತಿ ಊಟ ಮಾಡೋದು ನಮ್ಮ ಆರೋಗ್ಯಕ್ಕೆ ಉತ್ತಮ. ಜೊತೆಗೆ ಅನಾವಶ್ಯಕವಾಗಿ ಹಣ ಖರ್ಚು ಮಾಡೋದು ಕೂಡ ತಪ್ಪುತ್ತದೆ. ನಿಜವಾಗಿಯೂ ಹುಷಾರಿಲ್ಲ, ಆಫೀಸಿಗೆ ಒಂದು ದಿನ ಬಾಕ್ಸ್‌ ತೆಗೆದುಕೊಂಡು ಹೋಗಿಲ್ಲ ಎಂದಾಗ ಇದನ್ನೆಲ್ಲಾ ಆರ್ಡರ್‌ ಮಾಡೋದು ತಪ್ಪಲ್ಲ. ಆದರೆ ಕ್ರೇವಿಂಗ್ಸ್‌ ಕಂಟ್ರೋಲ್‌ ಮಾಡೋಕಾಗದೇ ಸ್ನಾಕ್ಸ್‌ ಆರ್ಡರ್‌ ಮಾಡೋ ಅಡಿಕ್ಷನ್‌ ಬೆಳೆಸಿಕೊಳ್ಳೋದು ನಿಮ್ಮ ದೇಹಕ್ಕೆ ತಪ್ಪೆನಿಸುತ್ತದೆ!

ಕೊರಿಯಾದಲ್ಲಿ ಇರೋ app ಯಾವುದು? ಇದಕ್ಕೂ ನಮಗೂ ಏನು ಸಂಬಂಧ?

ಕೊರಿಯಾದಲ್ಲಿ ಒಂದು ಇಂಟ್ರೆಸ್ಟಿಂಗ್‌ app ಇದೆ. ಈ app ಪ್ರತೀ ಯುವ ಪೀಳಿಗೆಯ ಫೋನ್‌ನಲ್ಲೂ ಇರುತ್ತದೆ. ಬೋರಾದಾಗ, ಹಸಿವಾದಾಗ, ಕಂಟ್ರೋಲ್‌ ಮಾಡಲು ಆಗದಾಗ ಜನ ಇದರ ಮೂಲಕ ಊಟ ಆರ್ಡರ್‌ ಮಾಡುತ್ತಾರೆ. ಆದರೆ ಊಟ ಮಾತ್ರ ನಿಮ್ಮನ್ನು ತಲುಪೋದೇ ಇಲ್ಲ. ಯಾಕಂದ್ರೆ ಇದೊಂದು ಫೇಕ್‌ ಫುಡ್‌ ಡೆಲಿವರಿ app!

ಆರ್ಡರ್‌ ಮಾಡಿದ ನಂತರ ಪಶ್ಚಾತ್ತಾಪ ಪಡ್ತೀರಾ?

ಎಂದಾದರೂ ಅನಿಸಿದ್ಯಾ? ಊಟದ ನಂತರ ಸಿಹಿ ತಿನ್ನಲೇಬೇಕು ಎನಿಸಿ ಒಂದು ಕೇಕ್‌ ಆರ್ಡರ್‌ ಮಾಡಿದ್ದೀರಿ ಎಂದುಕೊಳ್ಳಿ. ನಿಮಗೆ ಕೇಕ್‌ ಅಷ್ಟೇನೂ ಇಷ್ಟವಿಲ್ಲ ಆದರೆ ಇವತ್ತು ತಿನ್ನಬೇಕು ಎನಿಸಿದೆ. ಸ್ವಲ್ಪ ದೂರವಿರುವ ಬೇಕರಿಯಿಂದ ಇದನ್ನು ಆರ್ಡರ್‌ ಮಾಡಿರುತ್ತೀರಿ. ಹಾಗಾಗಿ ಅದು ನಿಮ್ಮನ್ನು ತಲುಪೋದಕ್ಕೆ ಅರ್ಧ ಗಂಟೆ ಬೇಕಾಗಬಹುದು. ಫೈನಲಿ ಅರ್ಧಗಂಟೆಯ ನಂತರ ಕೇಕ್‌ ನಿಮ್ಮ ಮನೆಗೆ ಬಂದಾಗ ಯಾಕಾದ್ರೂ ಆರ್ಡರ್‌ ಮಾಡಿದೆ? ಹಣ ವೇಸ್ಟ್‌, ತಿನ್ನೋದೂ ಉತ್ತಮವಲ್ಲ, ಈಗ ತಿನ್ನಬೇಕು ಅನಿಸ್ತಾ ಇಲ್ಲ ಎನ್ನುವ ಭಾವನೆ ಬಂದಿದ್ಯಾ? ಇದು ನಿಮಗೊಬ್ಬರಿಗೆ ಬರುವ ಭಾವನೆ ಅಲ್ಲ, ಇದು ನಿಮ್ಮ ಮೆದುಳು ಕೆಲಸ ಮಾಡುವ ರೀತಿ.

ಕ್ಷಣಿಕ ಸುಖ ಕೊಟ್ಟು ನಿಮ್ಮನ್ನು ಶಾಂತವಾಗಿಸುತ್ತದೆ

ಈ appನಲ್ಲಿ ನೀವು ನಿಮ್ಮ ಸುತ್ತ ಮುತ್ತ ಇರುವ ಹೊಟೇಲ್‌ಗಳ ಮೆನ್ಯುವನ್ನೇ ನೋಡ್ತೀರಿ. ಹಾಗಾಗಿ ನಿಮ್ಮ ಇಷ್ಟದ ರೆಸ್ಟೋರೆಂಟ್‌ನಿಂದ ಬರ್ಗರ್‌ ಆರ್ಡರ್‌ ಮಾಡಿದ್ದೇನೆ ಎನ್ನುವ ಖುಷಿ ನಿಮಗೆ ಸಿಗುತ್ತದೆ. ಊಟ ಆರ್ಡರ್‌ ಮಾಡಿದ ನಂತರ ಡೆಲಿವರಿ ಬಾಯ್‌ ಎಲ್ಲಿದ್ದಾರೆ, ಮನೆಯ ಹತ್ತಿ ಬರ್ತಿದ್ದಾರಾ ಎಂದು ನೋಡುತ್ತೀರಿ. ಅದರ ಮೇಲೆ ಹದಿನೈದು ನಿಮಿಷ ಫೋಕಸ್‌ ಮಾಡಿದ ನಂತರ ನಿಮ್ಮ ಕ್ರೇವಿಂಗ್ಸ್‌ ಹಿಡಿತಕ್ಕೆ ಬರುತ್ತದೆ. ನಿಮಗೆ ಕ್ಷಣಿಕ ಸುಖ ಕೊಟ್ಟು ಶಾಂತವಾಗಿಸುತ್ತದೆ. ಹಣ, ಆರೋಗ್ಯ ಎಲ್ಲವನ್ನೂ ಉಳಿಸಿ ಮಾನಸಿಕ ನೆಮ್ಮದಿಯನ್ನು ನೀಡುತ್ತದೆ.

ಈ app ಹೇಗೆ ಕೆಲಸ ಮಾಡುತ್ತದೆ?

ಈ appನಲ್ಲಿ ಆರ್ಡರ್‌ ಮಾಡೋದಕ್ಕೆ ಹಣ ಬೇಕಿಲ್ಲ. ನಾನೇ ಆರ್ಡರ್‌ ಮಾಡಿದ್ದೇನೆ ಎನ್ನುವ ಫೀಲಿಂಗ್‌ ನೀಡುತ್ತದೆ. ಮಾನಸಿಕ ಡೋಪಮೈನ್‌ ರಶ್‌ ಹೆಚ್ಚಿಸುತ್ತದೆ ಅಂದರೆ ಸಂತಸದ ಹಾರ್ಮೋನ್‌ನ್ನು ಉತ್ಪಾದಿಸುತ್ತದೆ. ಒತ್ತಡದಿಂದಲೋ, ಬೇಸರದಿಂದಲೋ, ಬೋರ್‌ ಆಗ್ತಿದೆ ಎಂದು ಊಟ ಆರ್ಡರ್‌ ಮಾಡುವವರಿಗೆ ಈ app ಅತ್ಯುತ್ತಮವಾಗಿದೆ.

ನಮ್ಮ ಭಾರತದಲ್ಲಿಯೂ ಇಂತಹ ಅಪ್ಲಿಕೇಷನ್‌ನ ಅವಶ್ಯಕತೆ ಇದೆಯಾ? ಟೆಕ್‌ ಸ್ಟಾರ್ಟ್‌ಅಪ್‌ ಮಾಡುವವರಿಗೆ ಇದು ಒಂದೊಳ್ಳೆ ಐಡಿಯಾ! ಅಲ್ವಾ?

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !