October 12, 2026
Monday, October 12, 2026
spot_img

ಸಿಎಂ ಡಿಕೆಶಿ ಸಂಪುಟದ ಸಚಿವರಿಗೆ ಖಾತೆ ಹಂಚಿಕೆ: ಯಾರಿಗೆ ಯಾವ ಖಾತೆ? ಇಲ್ಲಿದೆ ಡೀಟೇಲ್ಸ್‌

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಹಲವು ಸುತ್ತಿನ ಸಭೆ, ಹೈಕಮಾಂಡ್‌ ಭೇಟಿ ನಂತರ ಇದೀಗ ಸಿಎಂ ಡಿ.ಕೆ. ಶಿವಕುಮಾರ್‌ ಸಂಪುಟದ ಮಂತ್ರಿಗಳಿಗೆ ಖಾತೆ ಹಂಚಿಕೆ ಮಾಡಲಾಗಿದೆ.

ಪ್ರಮಾಣವಚನ ಸ್ವೀಕರಿಸಿದ 19 ಮಂದಿ ಪೈಕಿ 13 ಮಂದಿಗೆ ಮಾತ್ರ ಇದೀಗ ಖಾತೆ ಹಂಚಿಕೆ ಮಾಡಲಾಗಿದ್ದು, ಕೆಲವು ದಿನಗಳ ನಂತರ ಉಳಿದ ಸಚಿವರಿಗೆ ಖಾತೆ ಹಂಚಿಕೆಯ ಲಿಸ್ಟ್‌ ಹೊರಬೀಳಲಿದೆ. ಎಲ್ಲವೂ ಅಂತಿಮವಾದ ನಂತರ ಸಿಎಂ ಸಚಿವರ ಪಟ್ಟಿಯನ್ನು ಲೋಕಭವನಕ್ಕೆ ಕಳುಹಿಸಲಿದ್ದಾರೆ.

ನಾಳೆಯಿಂದ ಆಗಸ್ಟ್ 27ರವರೆಗೆ ವಿಧಾನಮಂಡಲ ಮುಂಗಾರು ಅಧಿವೇಶನ ನಿಗದಿಯಾಗಿದ್ದರೂ ನೂತನ ಸಚಿವರಿಗೆ ಖಾತೆ ಹಂಚಿಕೆ ನಡೆಯದಿರೋದು ವಿಪಕ್ಷಗಳ ತೀವ್ರ ಟೀಕೆಗೆ ಗುರಿಯಾಗಿತ್ತು. ಈ ನಡುವೆ ಅಧಿವೇಶನ ಆರಂಭದ ಮುನ್ನಾ ದಿನವೇ ನೂತನ ಸಚಿವರಿಗೆ ಇಲಾಖಾವಾರು ಜವಾಬ್ದಾರಿ ಹಂಚಿಕೆ ನಡೆದಿದೆ.

ಯಾವ ಸಚಿವರಿಗೆ ಯಾವ ಖಾತೆ?

ಚಲುವರಾಯಸ್ವಾಮಿ – ಕೃಷಿ ಇಲಾಖೆ

ರಿಜ್ವಾನ್‌ ಅರ್ಷದ್‌ – ಆಹಾರ ಹಾಗೂ ನಾಗರಿಕ ಸರಬರಾಜು

ಮುನಿಯಪ್ಪ – ಸಮಾಜ ಕಲ್ಯಾಣ ಇಲಾಖೆ

ಸಂತೋಷ್‌ ಲಾಡ್‌ – ಕಾರ್ಮಿಕ ಇಲಾಖೆ

ಬಸಂತಪ್ಪ – ಮೀನುಗಾರಿಕೆ, ಬಂದರು ಮತ್ತು ಒಳನಾಡು ಇಲಾಖೆ

ಮಧು ಬಂಗಾರಪ್ಪ – ಪ್ರಾಥಮಿಕ ಶಿಕ್ಷಣ, ಸಾಕ್ಷರತಾ ಇಲಾಖೆ

ರಾಯರೆಡ್ಡಿ – ಉನ್ನತ ಶಿಕ್ಷಣ ಇಲಾಖೆ

ಜಮೀರ್‌ ಅಹ್ಮದ್‌ ಖಾನ್‌ – ವಸತಿ ಇಲಾಖೆ

ಲಕ್ಷ್ಮಣ ಸವದಿ – ಸಹಕಾರ ಇಲಾಖೆ

ಡಾ. ಅಜಯ್‌ ಸಿಂಗ್‌ – ಅರಣ್ಯ ಇಲಾಖೆ

ಎಸ್‌.ಎಸ್‌. ಮಲ್ಲಿಕಾರ್ಜುನ – ಗಣಿ ಮತ್ತು ಭೂ ವಿಜ್ಞಾನ ಇಲಾಖೆ

ಹೆಚ್‌. ಸಿ. ಬಾಲಕೃಷ್ಣ- ಸಣ್ಣ ನೀರಾವರಿ ಇಲಾಖೆ

ಪುಟ್ಟರಂಗ ಶೆಟ್ಟಿ – ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ

Must Read