October 12, 2026
Monday, October 12, 2026
spot_img

ಮೈಸೂರಿನಲ್ಲಿ ಭಾರತದ ಮೈಕಲ್ ಜಾಕ್ಸನ್ : ತಾಯಿ ಜೊತೆ ಸುತ್ತೂರು ಮಠಕ್ಕೆ ಭೇಟಿ ನೀಡಿದ ನಟ ಪ್ರಭುದೇವ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಭಾರತದ ಮೈಕಲ್‌ ಜ್ಯಾಕ್ಸನ್‌ ಎಂದೇ ಖ್ಯಾತಿ ಪಡೆದಿರುವ ನಟ, ನಿರ್ದೇಶಕ ಪ್ರಭುದೇವ ಸುತ್ತೂರು ಮಠಕ್ಕೆ ತಮ್ಮ ತಾಯಿಯ ಜೊತೆ ಆಗಮಿಸಿದ್ದಾರೆ. ಸುತ್ತೂರು ಶ್ರೀಗಳನ್ನು ಭೇಟಿ ಮಾಡಿ ಆಶೀರ್ವಾದ ಪಡೆದಿದ್ದಾರೆ. ಪ್ರಭುದೇವ ಅವರು ಆಗಮಿಸಿರುವ ಸುದ್ದಿ ತಿಳಿದು ಸಾಕಷ್ಟು ಅಭಿಮಾನಿಗಳು ಸುತ್ತೂರಿನ ಬಳಿ ಆಗಮಿಸಿದ್ದಾರೆ. ನಾನು ಮಠದ ನಿಷ್ಠಾವಂತ ಅನುಯಾಯಿ ಎಂದು ಪ್ರಭುದೇವ ಹೇಳಿದ್ದಾರೆ.

ಈಗಾಗಲೇ ನಾಡಹಬ್ಬ ದಸರಾ ಸಂಭ್ರಮ ಎಲ್ಲೆಡೆ ಮನೆಮಾಡಿದ್ದು, ಸಾಂಸ್ಕೃತಿಕ ನಗರಿ ಮೈಸೂರು ಯುವ ದಸರಾಕ್ಕೆ ತಯಾರಾಗಿದೆ. ಇಂದು ಸಂಜೆ ಯುವ ದಸರಾ ಕಾರ್ಯಕ್ರಮಕ್ಕೆ ಪ್ರಭುದೇವ ಅವರು ಚಾಲನೆ ನೀಡಲಿದ್ದಾರೆ. ಮಹಾರಾಜ ಕಾಲೇಜು ಮೈದಾನ ಮತ್ತು ಅರಮನೆ ಆವರಣದಲ್ಲಿ ಇಂದಿನಿಂದ ಅ.18 ರವರೆಗೂ ಕಾರ್ಯಕ್ರಮಗಳು ನಡೆಯಲಿವೆ.

ಈ ಹಿನ್ನೆಲೆಯಲ್ಲಿ ಮೈಸೂರಿಗೆ ಇಂದು ಆಗಮಿಸಿದ ಪ್ರಭುದೇವ ಅವರು, ಸುತ್ತೂರು ಮಠಕ್ಕೆ ಭೇಟಿ ನೀಡಿದ್ದಾರೆ. ಈ ವೇಳೆ ಮಾತನಾಡಿದ ಪ್ರಭುದೇವ, ಯುವ ದಸರಾ ಉದ್ಘಾಟಿಸುವುದಕ್ಕೆ ತುಂಬಾ ಖುಷಿಯಾಗುತ್ತಿದೆ. ನಾನು ಇಲ್ಲಿಯವರೆಗೆ ಕಣ್ಣಾರೆ ದಸರಾ ನೋಡೇ ಇರಲಿಲ್ಲ. ಈ ಬಾರಿ ಯುವದಸರಾಗೆ ಆಹ್ವಾನ ಬಂದ ತಕ್ಷಣವೇ ಯಾವುದೇ ಯೋಚನೆ ಮಾಡದೆ ಒಪ್ಪಿಕೊಂಡೆ. ನನಗೆ ಬಹಳ ಸಂತೋಷವಾಗುತ್ತಿದೆ. ದಸರಾದಲ್ಲಿ ಇಷ್ಟು ಅದ್ಭುತವಾದ ಕಾರ್ಯಕ್ರಮಗಳು ಇರುತ್ತವೆ ಅಂತಾ ನನಗೆ ಇಲ್ಲಿ ಬಂದ ಮೇಲೆಯೇ ಗೊತ್ತಾಗಿದ್ದು ಎಂದು ಹೇಳಿದ್ದಾರೆ.

Must Read