August 12, 2026
Wednesday, August 12, 2026
spot_img

ನಾಳೆ ಕರ್ನಾಟಕ ಬಂದ್‌: ಶಾಲೆ ಇರುತ್ತದಾ? ಯಾವೆಲ್ಲ ಸೌಲಭ್ಯ ಸಿಗುತ್ತವೆ? ಇಲ್ಲಿದೆ ಡೀಟೇಲ್ಸ್‌

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಕಾವೇರಿ ನದಿ ನೀರಿನ ಹಂಚಿಕೆ ವಿವಾದ ಹಾಗೂ ರಾಜ್ಯದಲ್ಲಿ ನೆನೆಗುದಿಗೆ ಬಿದ್ದಿರುವ ನೀರಾವರಿ ಯೋಜನೆಗಳ ಅನುಷ್ಠಾನಕ್ಕೆ ಒತ್ತಾಯಿಸಿ ನಾಳೆ ಕರ್ನಾಟಕ ರಾಜ್ಯ ಸಂಘಟನೆಯು ಕರ್ನಾಟಕ ಬಂದ್‌ಗೆ ಕರೆ ನೀಡಿದೆ.

ನಾಳೆ ಶಾಲೆಗಳಿಗೆ ರಜೆ ಇದೆಯಾ?

ಕರ್ನಾಟಕ ಬಂದ್‌ ಇರುವ ಕಾರಣ ಈ ಹಿಂದೆ ಶಾಲಾ ಕಾಲೇಜುಗಳಿಗೆ ರಜೆ ಘೋಷಣೆ ಮಾಡಲಾಗಿತ್ತು. ಆದರೆ ಈ ರಜೆಯನ್ನು ಕರ್ನಾಟಕ ಅನುದಾನಿತ ಮತ್ತು ಅನುದಾನರಹಿತ ಶಾಲೆಗಳ ಆಡಳಿತ ಮಂಡಳಿ ಒಕ್ಕೂಟ ಹಿಂದಕ್ಕೆ ಪಡೆದಿದೆ. ಬಂದ್‌ ದಿನ ಶಾಲಾ ಕಾಲೇಜು ಮಕ್ಕಳಿಗೆ ರಜೆ ನೀಡುವುದರಿಂದ ವಿದ್ಯಾರ್ಥಿಗಳಿಗೆ ನಷ್ಟ ಉಂಟಾಗಲಿದೆ ಎನ್ನುವುದು ಒಕ್ಕೂಟದ ಅಭಿಪ್ರಾಯವಾಗಿದೆ.

ಏನೆಲ್ಲಾ ಸೌಲಭ್ಯ ಇರುತ್ತದೆ?

ಆಸ್ಪತ್ರೆ, ಶಾಲಾ-ಕಾಲೇಜು, ಕೆಎಸ್‌ಆರ್‌ಟಿಸಿ, ಬಿಎಂಟಿಸಿ, ಮೆಟ್ರೋ, ಆಟೋ, ಟ್ಯಾಕ್ಸಿ, ಖಾಸಗಿ ಬಸ್‌, ಅಂಗಡಿಗಳು, ಮೆಡಿಕಲ್ಸ್‌ , ಹೊಟೇಲ್‌, ಬಟ್ಟೆ ಅಂಗಡಿ, ಸರ್ಕಾರಿ ಕಚೇರಿ, ಸ್ಥಳೀಯ ಆಡಳಿತ, ಕೈಗಾರಿಕೆ ಸೌಲಭ್ಯ ಇರುತ್ತದೆ.

ಯಾರ ಬೆಂಬಲ ಇದೆ?

ವಾಟಾಳ್ ನಾಗರಾಜ್ ನೇತೃತ್ವದ ಕನ್ನಡ ಸಂಘಟನೆಗಳ ಒಕ್ಕೂಟ, ರಾಜ್ ಕುಮಾರ್ ಅಭಿಮಾನಿ ಸಂಘ, ಕನ್ನಡ ಸೇನೆ, ಕನ್ನಡ ಜಾಗೃತಿ ವೇದಿಕೆ ಬೆಂಬಲ ಸೂಚಿಸಿದೆ. ಇನ್ನು ಕರವೇ ಶಿವರಾಮೇಗೌಡ ಬಣ ಬಂದ್‌ಗೆ ಬೆಂಬಲ ನೀಡಿಲ್ಲ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !