August 12, 2026
Wednesday, August 12, 2026
spot_img

ಕೌಟುಂಬಿಕ ಕಲಹ: ಪತ್ನಿಯ ಹ*ತ್ಯೆಗೈದು ನೇಣಿಗೆ ಶರಣಾದ ಪತಿ

ಹೊಸದಿಗಂತ ವರದಿ ವಿಜಯಪುರ:

ಕೌಟುಂಬಿಕ ಕಲಹದಿಂದ ಪತಿ ತನ್ನ ಪತ್ನಿಯನ್ನು ಹತ್ಯೆ ಮಾಡಿ, ಬಳಿಕ ತಾನೂ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಕೊಲ್ಹಾರ ಪಟ್ಟಣದಲ್ಲಿ ನಡೆದಿದೆ.

ಇಲ್ಲಿನ ನಜೀರ್ ಬಾಬುಸಾಬ್ ನದಾಫ್ (35) ಹಾಗೂ ಆಸ್ಮಾ ನಜೀರ್ ನದಾಫ್ (30) ಮೃತ ದಂಪತಿ.

ನಜೀರ್ ನಾದಾಫ್ ಹಾಗೂ ಆಸ್ಮಾ ನಾದಾಫ್ ಮಧ್ಯೆ ನಡೆದ ಜಗಳ ವಿಕೋಪಕ್ಕೆ ತಿರುಗಿದ್ದು, ಆಗ ಕೈಗೆ ಸಿಕ್ಕ ಕತ್ತರಿಯಿಂದ ನಜೀರ್ ಮಾರಣಾಂತಿಕ ಹಲ್ಲೆ ಮಾಡಿದ್ದಾರೆ. ತೀವ್ರ ಅಸ್ವಸ್ತಗೊಂಡ ಆಸ್ಮಾನನ್ನು ಆ್ಯಂಬುಲೇನ್ಸ್ ನಲ್ಲಿ ಆಸ್ಪತ್ರೆಗೆ ಸಾಗಿಸುವ ವೇಳೆ ಅಸುನೀಗಿದ್ದಾಳೆ.

ಈ ಘಟನೆ ಬಳಿಕ ನಜೀರ್ ಮನೆಯಲ್ಲಿ ನೇಣು ಬಿಗಿದುಕೊಂಡ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಕೊಲ್ಹಾರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !