August 13, 2026
Thursday, August 13, 2026
spot_img

ವಿಐಪಿ ಸೆಲ್‌ನಿಂದ ಪ್ರಜ್ವಲ್‌ ರೇವಣ್ಣ ಎತ್ತಂಗಡಿ : ಜೈಲಿನಲ್ಲಿ ಸಿಕ್ಕ ಫೋನ್‌ ತುಂಬಾ ಪೋರ್ನ್‌!

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಪರಪ್ಪನ ಅಗ್ರಹಾರ ಜೈಲಿನಲ್ಲಿರುವ ಅತ್ಯಾಚಾರ ಪ್ರಕರಣದ ಅಪರಾಧಿ ಪ್ರಜ್ವಲ್‌ ರೇವಣ್ಣ ಸೆಲ್‌ನಲ್ಲಿ ಸಿಕ್ಕ ಫೋನ್‌ನಲ್ಲಿಯೂ ಅಶ್ಲೀಲ ವಿಡಿಯೋಗಳು ಪತ್ತೆಯಾಗಿವೆ.

ವಿಐಪಿ ಸೆಲ್‌ನಲ್ಲಿದ್ದ ಪ್ರಜ್ವಲ್‌ ರೇವಣ್ಣ ರಾಜಾರೋಷವಾಗಿ ಫೋನ್‌ ಬಳಕೆ ಮಾಡುತ್ತಿದ್ದರು. ಫೋನ್‌ ಪತ್ತೆಯಾದ ನಂತರ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗಿದ್ದು, ಸದ್ಯ ವಿವಿಐಪಿ ಸೆಲ್‌ನಿಂದ ಜನರಲ್‌ ಕೈದಿಗಳಿರುವ ಸೆಲ್‌ಗೆ ಎತ್ತಂಗಡಿ ಮಾಡಲಾಗಿದೆ.

90 ಅಶ್ಲೀಲ ವಿಡಿಯೋಗಳು ಪತ್ತೆ

ಇಪ್ಪತ್ತು ಕೈದಿಗಳಿರುವ ಬ್ಯಾರಕ್‌ ಇದಾಗಿದ್ದು, ರೇವಣ್ಣ ಪ್ರತೀ ಹೆಜ್ಜೆಯೂ ಸಿಸಿಟಿವಿಯಲ್ಲಿ ಸೆರೆಯಾಗಲಿದೆ. ರೇವಣ್ಣ ಬಳಿ ಸಿಕ್ಕ ಫೋನ್‌ನಲ್ಲಿ 90 ಅಶ್ಲೀಲ ವಿಡಿಯೋಗಳು ಪತ್ತೆಯಾಗಿವೆ. ಜೊತೆಗೆ ಪರಿಚಿತರೊಂದಿಗೆ ಮಾತನಾಡಿರುವ ಆಡಿಯೋ ರೆಕಾರ್ಡ್‌ ಕೂಡ ಸಿಕ್ಕಿದೆ. ಅತ್ಯಾಚಾರ ಪ್ರಕರಣದ ಅಪರಾಧಿ ಪ್ರಜ್ವಲ್ ರೇವಣ್ಣ ಜೈಲಿನ ಕೊಠಡಿಯೊಳಗೆ ವೈಯಕ್ತಿಕ ಉಡುಪು ಧರಿಸಿ, ಜೈಲು ಸಮವಸ್ತ್ರವಿಲ್ಲದೇ ಆರಾಮವಾಗಿ ಮೊಬೈಲ್ ಫೋನ್‌ನಲ್ಲಿ ಮಾತನಾಡುತ್ತಿರುವುದು ಕಂಡುಬಂದಿದೆ.ಈ ವಿಡಿಯೋ ಯಾವಾಗ ಚಿತ್ರೀಕರಿಸಲಾಗಿದೆ ಎಂಬುದು ನಿಖರವಾಗಿ ತಿಳಿದುಬಂದಿಲ್ಲ. ನಿನ್ನೆ ಸಿಸಿಬಿ ಅಧಿಕಾರಿಗಳು ಜೈಲು ಕೊಠಡಿಯ ಮೇಲೆ ದಾಳಿ ನಡೆಸಿದಾಗ, ಒಂದು ಮೊಬೈಲ್ ಫೋನ್ ಪತ್ತೆಯಾಗಿತ್ತು.

ಯಾರೇ ಆಗಿರಲಿ ಕ್ರಮ ಕೈಗೊಳ್ಳುತ್ತೇವೆ: ಪ್ರಿಯಾಂಕ್‌ ಖರ್ಗೆ

ಯಾವುದೇ ಅಧಿಕಾರಿಯೇ ಹೊಣೆಗಾರನೆಂದು ತನಿಖೆಯಲ್ಲಿ ತಿಳಿದುಬಂದರೆ ಅವರ ಹುದ್ದೆ ಅಥವಾ ಶ್ರೇಣಿ ಪರಿಗಣಿಸದೆ ಕ್ರಮ ಕೈಗೊಳ್ಳಲಾಗುವುದು ಎಂದು ಗೃಹ ಸಚಿವ ಪ್ರಿಯಾಂಕ್ ಖರ್ಗೆ ತಿಳಿಸಿದ್ದಾರೆ. ಜೈಲು ಮತ್ತು ಸುಧಾರಣಾ ಸೇವೆಗಳ ಡಿಜಿಪಿ ಅಲೋಕ್ ಕುಮಾರ್ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಲಾಗಿದೆಯೇ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಖರ್ಗೆ, ತನಿಖೆ ಇನ್ನೂ ನಡೆಯುತ್ತಿದೆ. ಅಧಿಕಾರಿ ಯಾರೇ ಆಗಿರಲಿ, ಅವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು. ಅವರು ಪಿಸಿ ಆಗಿರಲಿ, ಪಿಎಸ್‌ಐ ಆಗಿರಲಿ ಅಥವಾ ಎಡಿಜಿ ಆಗಿರಲಿ, ಯಾವುದೇ ವ್ಯತ್ಯಾಸವಿಲ್ಲ ಎಂದು ಹೇಳಿದರು.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !