ಹೊಸದಿಗಂತ ಡಿಜಿಟಲ್ ಡೆಸ್ಕ್:
ದೋಭಿ ಘಾಟ್, ಲಾಪತಾ ಲೇಡೀಸ್, ಲಸ್ಟ್ ಸ್ಟೋರೀಸ್ನಂತರ ಸಿನಿಮಾಗಳನ್ನು ನಿರ್ದೇಶಿಸಿ, ದಂಗಲ್, ಸೀಕ್ರೆಟ್ ಸೂಪರ್ಸ್ಟಾರ್ನಂತಹ ಸಿನಿಮಾಗಳಿಗೆ ಹಣ ಹಾಕಿರುವ ನಿರ್ದೇಶಕಿ ಕಿರಣ್ ರಾವ್ಗೆ ಕೊರಿಯನ್ ಡ್ರಾಮಾವೊಂದನ್ನು ರೀಮೇಕ್ ಮಾಡುವ ಆಸೆಯಂತೆ!
ಹೌದು, ಕೊರಿಯನ್ನ ಜನಪ್ರಿಯ ಟಿವಿ ಸೀರೀಸ್ ಆಗಿರುವ Reply 1988 ಸೀರೀಸ್ನ್ನು ರೀಮೇಕ್ ಮಾಡುವ ಆಸೆಯನ್ನು ಕಿರಣ್ ವ್ಯಕ್ತಪಡಿಸಿದ್ದಾರೆ. ಇಂಟರ್ವ್ಯೂ ಒಂದರಲ್ಲಿ ಕಿರಣ್ ಇದರ ಬಗ್ಗೆ ಮಾತನಾಡಿದ್ದು, ನಾನು ಕೊರಿಯನ್ ಡ್ರಾಮಾಗಳನ್ನು ನೋಡುತ್ತೇನೆ. ಬಿಗ್ ಫ್ಯಾನ್ ಎಂದು ಹೇಳಿಕೊಂಡಿದ್ದಾರೆ.
ಆಗ ಸಂದರ್ಶನ ಮಾಡುವವರು ನಿಮ್ಮ ಫೇವರೆಟ್ ಕೊರಿಯನ್ ಡ್ರಾಮಾ ಯಾವುದು? ಎಂದು ಪ್ರಶ್ನಿಸಿದ್ದಾರೆ. ಈ ವೇಳೆ ಕಿರಣ್ Reply 1988 ಎನ್ನುವ ಸೀರೀಸ್ ನನಗೆ ತುಂಬಾ ಇಷ್ಟವಾಗಿದೆ. ರೀಮೇಕ್ ಮಾಡಿದ್ರೆ ಇಂತಹ ಸೀರೀಸ್ನ್ನು ರಿಮೇಕ್ ಮಾಡಬೇಕು ಎಂದು ಹೇಳಿಕೊಂಡಿದ್ದಾರೆ.
Reply 1988 ಸೀರೀಸ್ ಕಥೆ ಏನು?
ಈ ಸೀರೀಸ್ ಮಿಲೇನಿಯಲ್ಸ್ ಹಾಗೂ ಅದಕ್ಕೂ ಹಿಂದಿನ ಜನರೇಷನ್ ಅವರದ್ದಾಗಿದೆ. ಒಂದು ವಠಾರದಲ್ಲಿರುವ ನಾಲ್ಕೈದು ಕುಟುಂಬಗಳ ನಡುವೆ ಹಾಗೂ ಅವರ ಮಕ್ಕಳ ನಡುವೆ ನಡೆಯುವ ಕಥೆ ಇದಾಗಿದೆ. ಸ್ನೇಹ, ಪ್ರೀತಿ, ಜೀವನ, ಮೌಲ್ಯ, ಕಥೆ, ತಮಾಷೆ, ಸೆಂಟಿಮೆಂಟ್ಸ್ ಎಲ್ಲವೂ ಜನರ ಮನಮುಟ್ಟುವಂತಿದೆ. ಕೆ ಡ್ರಾಮಾ ಫ್ಯಾನ್ಸ್ ಈ ಸೀರೀಸ್ಗಳನ್ನು ನಾಲ್ಕೈದು ಬಾರಿಯಾದ್ರೂ ನೋಡಿರುತ್ತಾರೆ.



