August 19, 2026
Wednesday, August 19, 2026
spot_img

ಜಮೀನಿನಲ್ಲಿ ಅಕ್ರಮ ಗಾಂಜಾ ಬೆಳೆ: 30.21 ಲಕ್ಷ ರೂ. ಮೌಲ್ಯದ 100 ಗಿಡ ವಶ, ಆರೋಪಿ ಅರೆಸ್ಟ್

ಹೊಸದಿಗಂತ ವರದಿ ಬೀದರ್:

ಖಂಡಿಕೇರಿ ಗ್ರಾಮದಲ್ಲಿ ಜಮೀನಿನಲ್ಲಿ ಅಕ್ರಮವಾಗಿ ಬೆಳೆದಿದ್ದ ಸುಮಾರು 30.21 ಲಕ್ಷ ರೂ ಮೌಲ್ಯದ ಗಾಂಜಾ ಗಿಡಗಳನ್ನು ಔರಾದ್ ಠಾಣೆ ಪೊಲೀಸರು ವಶಪಡಿಸಿಕೊಂಡಿದ್ದು, ಪ್ರಕರಣಕ್ಕೆ ಸಂಬಂಧಿಸಿದಂತೆ ಓರ್ವ ಆರೋಪಿಯನ್ನು ಬಂಧಿಸಿದ್ದಾರೆ.

ಔರಾದ್ ಪೊಲೀಸ್ ಠಾಣೆ ಪಿಎಸ್‌ಐ ವಸೀಮ್ ಪಟೇಲ್ ನೇತೃತ್ವದಲ್ಲಿ ಆ.18ರಂದು ಖಚಿತ ಮಾಹಿತಿ ಮೇರೆಗೆ ಖಂಡಿಕೇರಿ ಗ್ರಾಮದ ವ್ಯಕ್ತಿಯೊಬ್ಬರ ಜಮೀನಿನ ಮೇಲೆ ಪೊಲೀಸರು ದಾಳಿ ನಡೆಸಿದರು. ಈ ವೇಳೆ ಜಮೀನಿನಲ್ಲಿ ಅಕ್ರಮವಾಗಿ ಬೆಳೆದಿದ್ದ 100 ಹಸಿ ಗಾಂಜಾ ಗಿಡಗಳನ್ನು ವಶಕ್ಕೆ ಪಡೆಯಲಾಗಿದೆ.

ವಶಪಡಿಸಿಕೊಂಡ ಗಾಂಜಾ ಗಿಡಗಳ ಒಟ್ಟು ತೂಕ 60 ಕೆಜಿ 430 ಗ್ರಾಂ ಇದ್ದು, ಇದರ ಅಂದಾಜು ಮೌಲ್ಯ 30.21 ಲಕ್ಷ ರೂ ಎಂದು ತಿಳಿದುಬಂದಿದ್ದು ಮುಂದಿನ ತನಿಖೆ ಕೈಗೊಂಡಿದ್ದಾರೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !