August 22, 2026
Saturday, August 22, 2026
spot_img

ಉರುಳಿಗೆ ಸಿಕ್ಕು ಮೃತಪಟ್ಟಿದ್ದ ಚಿರತೆಯನ್ನು ಸುಟ್ಟು ವಿಡಿಯೋ ಅಪ್‌ಲೋಡ್‌ ಮಾಡಿದ ಯುವಕರು, ಮೂವರು ಅಂದರ್‌!

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಉರುಳಿಗೆ ಸಿಕ್ಕು ಮೃತಪಟ್ಟಿದ್ದ ಚಿರತೆಯೊಂದನ್ನು ಅರಣ್ಯಾಧಿಕಾರಿಗಳಿಗೆ ತಿಳಿಸದೇ ಗ್ರಾಮಸ್ಥರು ಸುಟ್ಟು ಹಾಕಿದ ಘಟನೆ ತುಮಕೂರಿನಲ್ಲಿ ನಡೆದಿದ್ದು, ಮೂವರನ್ನು ಅರಣ್ಯಾಧಿಕಾರಿಗಳು ಬಂಧಿಸಿದ್ದಾರೆ.

ಗೌರಗೊಂಡನಹಳ್ಳಿಯ ಗೇಟ್‌ ಬಳಿ ಘಟನೆ ನಡೆದಿದೆ. ಚಿರತೆಯನ್ನು ಜಿ.ಡಿ. ಶಿವಕುಮಾರ್‌, ನಾರಾಯಣಪ್ಪ ಹಾಗೂ ಚಂದ್ರಶೇಖರ್‌ ಎನ್ನುವವರು ಸುಟ್ಟು ಹಾಕಿದ್ದು, ವಿಡಿಯೋ ಮಾಡಿ ಸೋಶಿಯಲ್‌ ಮೀಡಿಯಾದಲ್ಲಿ ಹರಿಬಿಟ್ಟಿದ್ದರು. ಈ ವಿಡಿಯೋ ವೈರಲ್‌ ಆದ ಹಿನ್ನೆಲೆ ಅರಣ್ಯಾಧಿಕಾರಿಗಳನ್ನು ಬಂಧಿಸಿದ್ದಾರೆ.

ನಾರಾಯಣಪ್ಪನ ಹೊಲಕ್ಕೆ ಕಾಡು ಪ್ರಾಣಿಗಳು ಪದೇ ಪದೆ ಬರುತ್ತಿದ್ದವು. ಈ ಹಿನ್ನೆಲೆ ಉರುಳು ಹಾಕಲಾಗಿತ್ತು. ಆದರೆ ಈ ಉರುಳಿಗೆ ಚಿರತೆ ಸಿಕ್ಕು ಮೃತಪಟ್ಟಿತ್ತು. ನಂತರ ಗ್ರಾಮದವರೆಲ್ಲ ಮಾತನಾಡಿ ಚಿರತೆಯನ್ನು ಸುಟ್ಟುಬಿಡುವ ತೀರ್ಮಾನಕ್ಕೆ ಬಂದಿದ್ದರು. ಅಂತೆಯೇ ಚಿರತೆಯನ್ನು ಸುಟ್ಟ ವಿಡಿಯೋಗಳನ್ನು ಅಪ್‌ಲೋಡ್‌ ಮಾಡಲಾಗಿತ್ತು.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !