ಮೇಷ
ವೃತ್ತಿ ಗುರಿ ಸಾಧಿತ. ಆರ್ಥಿಕ ಪರಿಸ್ಥಿತಿ ಸುಧಾರಣೆ. ಹಳೆ ಸ್ನೇಹಿತರ ಭೇಟಿ ಸಾಧ್ಯತೆ. ಕೌಟುಂಬಿಕ ಭಿನ್ನಮತ ಪರಿಹಾರ, ನೆಮ್ಮದಿ.
ವೃಷಭ
ಅವಿವಾಹಿತರಿಗೆ ವಿವಾಹ ಬಂಧ. ವೃತ್ತಿ ಕ್ಷೇತ್ರದ ಉದ್ವಿಗ್ನತೆ ಶಮನ. ಒತ್ತಡ ನಿವಾರಣೆ. ಆತ್ಮೀಯರ ಸಂಗದಲ್ಲಿ ಮನಸ್ಸಮಾಧಾನ.
ಮಿಥುನ
ವೃತ್ತಿ ಗುರಿಯನ್ನು ಸಾಧಿಸುವಿರಿ. ಪ್ರೀತಿಯಲ್ಲಿ ಯಶಸ್ಸು. ಇತರರ ಸಹಕಾರದಿಂದ ಆರ್ಥಿಕ ಸ್ಥಿತಿ ಸುಧಾರಣೆ. ಉದ್ಯೋಗ ಅವಕಾಶ.
ಕಟಕ
ನಿಮ್ಮ ಯೋಜನೆಗೆ ಉತ್ತಮ ಪ್ರೋತ್ಸಾಹ ಸಿಗಲಿದೆ. ಕಾರ್ಯ ಪ್ರಗತಿ. ಸ್ವಾಸ್ಥ್ಯ ಸುಧಾರಣೆ. ಕಾಡುತ್ತಿದ್ದ ಸಮಸ್ಯೆಗೆ ಶೀಘ್ರ ಪರಿಹಾರ ಸಾಧ್ಯ.
ಸಿಂಹ
ಮನೆಯವರ ಜತೆ ಹೊರಗೆ ತಿರುಗಾಡಿ. ಇದು ನಿಮ್ಮ ಒತ್ತಡ ಶಮನಕ್ಕೆ ಅವಶ್ಯ. ವೃತ್ತಿ ಒತ್ತಡ ಇಂದು ಬದಿಗಿಡಿ. ಆರ್ಥಿಕ ಬಿಕ್ಕಟ್ಟು ಪರಿಹಾರ.
ಕನ್ಯಾ
ಹಿಡಿದ ಕೆಲಸ ಪದೇಪದೇ ಬದಲಿಸದಿರಿ. ಒಂದೇ ವಿಷಯಕ್ಕೆ ಗಮನ ಕೊಡಿ. ಸುಲಭ ಸಾಧ್ಯ ಗುರಿಯನ್ನು ಇಟ್ಟುಕೊಳ್ಳಿ. ದುಸ್ಸಾಧ್ಯ ಗುರಿ ಬೇಡ.
ತುಲಾ
ವೃತ್ತಿಯ ಒತ್ತಡ ಮರೆತು ಕುಟುಂಬದ ಜತೆ ಕಾಲ ಕಳೆಯಲು ಗಮನ ಕೊಡಿ. ಯಾರ ಜತೆಗೂ ವಾಗ್ವಾದಕ್ಕೆ ಇಳಿಯದಿರಿ. ಆರ್ಥಿಕ ಒತ್ತಡ ಅಽಕ.
ವೃಶ್ಚಿಕ
ಸಡಿಲ ಮಾತು ಬೇಡ. ನಿಮ್ಮ ಕೆಲಸಕ್ಕೆ ಮಾತ್ರ ಗಮನ ಕೊಡಿ. ನಿಮ್ಮ ವಿರುದ್ಧ ಕೆಲವರ ಮಸಲತ್ತು ನಡೆದೀತು. ಎಚ್ಚರದಿಂದಿರಿ.
ಧನು
ಅವಶ್ಯ ಬಿದ್ದಾಗ ನಿಮ್ಮ ಅಭಿಪ್ರಾಯ ವ್ಯಕ್ತಪಡಿಸಲು ಹಿಂಜರಿಕೆ ಬೇಡ. ನಿಮ್ಮ ಮಾತಿಗೆ ಮನ್ನಣೆ ಸಿಗಲಿದೆ. ಕೌಟುಂಬಿಕ ಒತ್ತಡ ಹೆಚ್ಚು. ಆರ್ಥಿಕ ಸಂಕಷ್ಟ.
ಮಕರ
ಉದ್ಯೋಗ ಬದಲಾವಣೆಯ ಅವಕಾಶ ಸಿಗಲಿದೆ. ಯೋಚಿಸಿ ನಿರ್ಧಾರ ತಾಳಿ. ಖಾಸಗಿ ಬದುಕಲ್ಲಿ ವ್ಯತ್ಯಯ. ಒತ್ತಡ ಹೆಚ್ಚಲಿದೆ.
ಕುಂಭ
ಅಗತ್ಯ ವಿಚಾರಕ್ಕೆ ಮಾತ್ರ ಗಮನ ಕೊಡಿ. ಕ್ಷುಲ್ಲಕ ವಿಚಾರಗಳಿಗೆ ತಲೆಬಿಸಿ ಮಾಡಬೇಡಿ. ಸಮಸ್ಯೆ ಸೃಷ್ಟಿಸುವವರು ಸೋಲು ಕಾಣುತ್ತಾರೆ.
ಮೀನ
ನಿಮ್ಮ ಸಾಮರ್ಥ್ಯದ ಮೇಲೆ ವಿಶ್ವಾಸವಿಡಿ. ಸಾಮಾಜಿಕ ಕಾರ್ಯದಲ್ಲಿ ಆಸಕ್ತಿ ಮೂಡಬಹುದು. ಚಾಲನೆಯಲ್ಲಿ ಎಚ್ಚರ ಇರಲಿ. ಖರ್ಚು ಹೆಚ್ಚಳ.



