August 23, 2026
Sunday, August 23, 2026
spot_img

ಶಿರಸಿ-ಕುಮಟ ಹೆದ್ದಾರಿಯಲ್ಲಿ ಧರೆ ಕುಸಿತ: ರಸ್ತೆಗೆ ಬಿದ್ದ ಕಲ್ಲು-ಮಣ್ಣು ತೆರವು ಕಾರ್ಯಾಚರಣೆ

ಹೊಸದಿಗಂತ ವರದಿ ಕಾರವಾರ:

ಉತ್ತರ ಕನ್ನಡ ಜಿಲ್ಲೆಯ ಕುಮಟಾ ತಾಲೂಕಿನ ಶಿರಸಿ-ಕುಮಟ ರಾಷ್ಟ್ರೀಯ ಹೆದ್ದಾರಿಯ ದೇವಿಮನೆ ಘಟ್ಟದಲ್ಲಿ ಧರೆ ಕುಸಿತ ಸಂಭವಿಸಿದೆ.

ಘಟ್ಟ ಪ್ರದೇಶದಲ್ಲಿ ರಾತ್ರಿಯಿಡೀ ನಿರಂತರ ಮಳೆ ಸುರಿದಿದ್ದು, ಧರೆ ಕುಸಿದು ಕಲ್ಲು-ಮಣ್ಣು ರಸ್ತೆಗೆ ಬಿದ್ದಿದೆ. ಆಗಾಗ ಸಣ್ಣ ಪ್ರಮಾಣದಲ್ಲಿ ಮಣ್ಣು ರಸ್ತೆಗೆ ಬೀಳುತ್ತಿದೆ.

ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಮತ್ತು ರಸ್ತೆ ನಿರ್ಮಾಣ ಗುತ್ತಿಗೆ ಕಂಪನಿಯ ಸಿಬ್ಬಂದಿಗಳು ಸ್ಥಳಕ್ಕೆ ಭೇಟಿ ನೀಡಿ, ರಸ್ತೆ ಬದಿಗೆ ಕುಸಿದು ಬಿದ್ದ ಮಣ್ಣು ತೆರವು ಕಾರ್ಯಾಚರಣೆ ನಡೆಸಿದರು.

ಕೆಲವು ತಿಂಗಳ ಹಿಂದೆ ಸಹ ಇದೇ ಭಾಗದಲ್ಲಿ ಧರೆ ಕುಸಿದು ಸಂಚಾರ ಅಸ್ತವ್ಯಸ್ತಗೊಂಡಿತ್ತು. ಇದೀಗ ಮತ್ತೊಮ್ಮೆ ಕುಸಿತ ಸಂಭವಿಸಿದ್ದು, ತೆರವು ಬಳಿಕ ರಸ್ತೆಯಲ್ಲಿ ವಾಹನ ಸಂಚಾರ ಎಂದಿನಂತೆ ನಡೆಯುತ್ತಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !