October 6, 2026
Tuesday, October 6, 2026
spot_img

Yogurt Bar | ಪುಟ್ಟ ಪುಟ್ಟ ಹಸಿವು ತಣಿಸುವ ಸಿಹಿ ಟ್ರೀಟ್‌: ಮನೆಯಲ್ಲೇ ಮಾಡಿ ಟೇಸ್ಟಿ ಯೋಗರ್ಟ್ ಬಾರ್

ಸ್ವೀಟ್ ತಿನ್ಬೇಕು ಅನ್ನೋ ಆಸೆ… ಆದ್ರೆ ಹೆಚ್ಚು ಸಕ್ಕರೆ, ಹೆಚ್ಚು ಕ್ಯಾಲೊರಿ ಹೊಟ್ಟೆಗೆ ಸೇರೋ ಭಯ. ಹಾಗಾದ್ರೆ ಮನೆಯಲ್ಲೇ ಕ್ರೀಮಿ ಯೋಗರ್ಟ್, ತಾಜಾ ಹಣ್ಣುಗಳು ಮತ್ತು ಡ್ರೈಫ್ರುಟ್ಸ್ ಬಳಸಿ ತಯಾರಿಸುವ ಈ ಫ್ರೋಜನ್ ಯೋಗರ್ಟ್ ಬಾರ್ ಒಮ್ಮೆ ಟ್ರೈ ಮಾಡಿ.

ಬೇಕಾಗುವ ಸಾಮಗ್ರಿಗಳು

ಗ್ರೀಕ್ ಯೋಗರ್ಟ್ – 2 ಕಪ್
ಜೇನುತುಪ್ಪ – 2 ಚಮಚ
ಸ್ಟ್ರಾಬೆರಿ – ½ ಕಪ್
ಮಾವಿನಹಣ್ಣು – ½ ಕಪ್
ಬಾದಾಮಿ, ಗೋಡಂಬಿ ಅಥವಾ ಇತರ ಡ್ರೈಫ್ರುಟ್ಸ್ – 2-3 ಚಮಚ

ಮಾಡುವ ವಿಧಾನ

ಒಂದು ಬೌಲ್‌ಗೆ ಗ್ರೀಕ್ ಯೋಗರ್ಟ್ ಮತ್ತು ಜೇನುತುಪ್ಪ ಹಾಕಿ ಚೆನ್ನಾಗಿ ಮಿಶ್ರಣ ಮಾಡಿ.

ಒಂದು ಫ್ಲಾಟ್ ಟ್ರೇಗೆ ಬೇಕಿಂಗ್ ಪೇಪರ್ ಹಾಸಿ, ಅದರ ಮೇಲೆ ಯೋಗರ್ಟ್ ಮಿಶ್ರಣವನ್ನು ಹಾಕಿ ಸಮವಾಗಿ ಹರಡಿ. ಮೇಲೆ ಕತ್ತರಿಸಿದ ಸ್ಟ್ರಾಬೆರಿ, ಮಾವಿನಹಣ್ಣು ಹಾಗೂ ಡ್ರೈಫ್ರುಟ್ಸ್‌ಗಳನ್ನು ಹಾಕಿ ಸ್ವಲ್ಪ ಒತ್ತಿ ಸೆಟ್ ಮಾಡಿ.

ಟ್ರೇಯನ್ನು ಫ್ರೀಜರ್‌ನಲ್ಲಿ ಸುಮಾರು 3–4 ಗಂಟೆಗಳ ಕಾಲ ಅಥವಾ ಯೋಗರ್ಟ್ ಸಂಪೂರ್ಣ ಗಟ್ಟಿಯಾಗುವವರೆಗೆ ಇಡಿ.

ಗಟ್ಟಿಯಾದ ಬಳಿಕ ಹೊರತೆಗೆದು ಕೆಲವು ನಿಮಿಷಗಳ ಕಾಲ ಹಾಗೆ ಇಡಿ. ನಂತರ ಬೇಕಾದ ಆಕಾರದಲ್ಲಿ ಕತ್ತರಿಸಿ ಸವಿಯಿರಿ.

ಒಂದು ಸಣ್ಣ ಟಿಪ್

ಹಣ್ಣುಗಳನ್ನು ನಿಮ್ಮ ಆಯ್ಕೆಗೆ ತಕ್ಕಂತೆ ಬದಲಾಯಿಸಬಹುದು. ಬಾಳೆಹಣ್ಣು, ಬ್ಲೂಬೆರ್ರಿ ಅಥವಾ ದಾಳಿಂಬೆ ಬೀಜಗಳನ್ನೂ ಸೇರಿಸಬಹುದು. ಹೆಚ್ಚು ಸಿಹಿ ಬೇಕಾದರೆ ಮಾತ್ರ ಜೇನುತುಪ್ಪದ ಪ್ರಮಾಣ ಹೆಚ್ಚಿಸಿ.

Must Read