ಬೆಲೆ ಸಾರು ಸೊಪ್ಪಿನ ಪಲ್ಯ ತಿಂದು ಬೋರಾಗಿದ್ರೆ ಎರಡನ್ನು ಸೇರಿಸಿ ಒಂದು ಸೂಪರ್ ಸೊಪ್ಪು-ಬೇಳೆ ಪಲ್ಯ ಮಾಡಬಹುದು. ಮೆಂತ್ಯ ಸೊಪ್ಪು, ಸಬ್ಬಸಿಗೆ ಸೊಪ್ಪು ಅಥವಾ ದಂಟಿನ ಸೊಪ್ಪಿನಿಂದಲೂ ಇದನ್ನು ತಯಾರಿಸಬಹುದು.
ಬೇಕಾಗುವ ಪದಾರ್ಥಗಳು
ಸೊಪ್ಪು – 1 ಕಟ್ಟು
ಹೆಸರುಬೇಳೆ – ½ ಕಪ್
ಈರುಳ್ಳಿ – 1
ಹಸಿಮೆಣಸಿನಕಾಯಿ – 2
ಬೆಳ್ಳುಳ್ಳಿ – 4 ಎಸಳು
ಎಣ್ಣೆ – 2 ಚಮಚ
ಸಾಸಿವೆ, ಜೀರಿಗೆ – ತಲಾ ½ ಚಮಚ
ಅರಿಶಿನ – ಚಿಟಿಕೆ
ಉಪ್ಪು – ರುಚಿಗೆ ತಕ್ಕಷ್ಟು
ತೆಂಗಿನಕಾಯಿ ತುರಿ – 3 ಚಮಚ
ಮಾಡುವ ವಿಧಾನ
ಮೊದಲು ಹೆಸರುಬೇಳೆಯನ್ನು ತೊಳೆದು ಸ್ವಲ್ಪ ನೀರು ಹಾಕಿ ಬೇಯಿಸಿಕೊಳ್ಳಿ. ನಂತರ ಬಾಣಲೆಯಲ್ಲಿ ಎಣ್ಣೆ ಬಿಸಿ ಮಾಡಿ ಸಾಸಿವೆ, ಜೀರಿಗೆ ಮತ್ತು ಬೆಳ್ಳುಳ್ಳಿ ಹಾಕಿ ಒಗ್ಗರಣೆ ಮಾಡಿ. ಬಳಿಕ ಹೆಚ್ಚಿದ ಈರುಳ್ಳಿ ಹಾಗೂ ಹಸಿಮೆಣಸಿನಕಾಯಿ ಸೇರಿಸಿ ಚೆನ್ನಾಗಿ ಹುರಿಯಿರಿ.
ಈಗ ತೊಳೆದು ಹೆಚ್ಚಿಟ್ಟ ಸೊಪ್ಪನ್ನು ಹಾಕಿ, ಅರಿಶಿನ ಮತ್ತು ಸ್ವಲ್ಪ ಉಪ್ಪು ಸೇರಿಸಿ ಬಾಡಿಸಿ. ನಂತರ ಬೇಯಿಸಿದ ಬೇಳೆಯನ್ನು ಸೇರಿಸಿ ಎಲ್ಲವನ್ನೂ ಚೆನ್ನಾಗಿ ಮಿಶ್ರಣ ಮಾಡಿ. ಸಣ್ಣ ಉರಿಯಲ್ಲಿ ಕೆಲವು ನಿಮಿಷ ಬೇಯಿಸಿ, ಹೆಚ್ಚುವರಿ ನೀರು ಇಂಗಿದ ಬಳಿಕ ಕೊನೆಯಲ್ಲಿ ತೆಂಗಿನಕಾಯಿ ತುರಿ ಸೇರಿಸಿ ಮಿಶ್ರಣ ಮಾಡಿ.
ಬಿಸಿ ಬಿಸಿ ಅನ್ನ, ರೊಟ್ಟಿ ಅಥವಾ ಚಪಾತಿಯೊಂದಿಗೆ ಸವಿದರೆ ಈ ಸರಳ ಸೊಪ್ಪು-ಬೇಳೆ ಪಲ್ಯ ಇನ್ನಷ್ಟು ರುಚಿಯಾಗಿರುತ್ತದೆ.



