August 24, 2026
Monday, August 24, 2026
spot_img

ರಾಜ್ಯದ ರೈತರ ನಿದ್ದೆಗೆಡಿಸಿರುವ ಕಾವೇರಿ ನೀರು ಹಂಚಿಕೆ ವಿಚಾರ: ಇಂದು ಸುಪ್ರೀಂ ಕೋರ್ಟ್‌ನಲ್ಲಿ ವಿಚಾರಣೆ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ತಮಿಳುನಾಡಿಗೆ ಕಾವೇರಿ ನೀರು ಹರಿಸುವ ವಿಚಾರಕ್ಕೆ ಸಂಬಂಧಿಸಿದಂತೆ ಇಂದು ಸುಪ್ರೀಂ ಕೋರ್ಟ್‌ನಲ್ಲಿ ಮಹತ್ವದ ವಿಚಾರಣೆ ನಡೆಯಲಿದೆ. ತಮಿಳುನಾಡು ಸರ್ಕಾರ ಅರ್ಜಿ ಸಲ್ಲಿಸಿದ್ದು, ಈ ವಿಚಾರಣೆಯನ್ನು ನ್ಯಾಯಮೂರ್ತಿ ವಿಕ್ರಮನಾಥ್‌ ನೇತೃತ್ವದ ದ್ವಿಸದಸ್ಯ ಪೀಠ ನಡೆಸಲಿದೆ.

ಕಳೆದ ವಿಚಾರಣೆ ಹೈಲೈಟ್ಸ್‌ ಏನು?

ತಮಿಳುನಾಡಿಗೆ ನೀರು ಹರಿಸಲಾಗುತ್ತಿದೆ ಎಂದು ಕರ್ನಾಟಕ ಸರ್ಕಾರ ನ್ಯಾಯಾಲಯಕ್ಕೆ ಮಾಹಿತಿ ನೀಡಿತ್ತು. ತಮಿಳುನಾಡು ನೀರು ಕೊಡುತ್ತಿಲ್ಲ ಎಂದು ಸುಮ್ಮನೆ ಆರೋಪ ಮಾಡಿದೆ ಎಂದು ಹೇಳಿತ್ತು. ತದನಂತರ ಕೋರ್ಟ್‌ ಒಂದು ವಾರದಲ್ಲಿ ಎಷ್ಟು ನೀರು ಹರಿದಿದೆ ಎನ್ನುವ ನಿಖರ ಅಂಕಿ ಅಂಶಗಳನ್ನು ಹಾಜರುಪಡಿಸಿ ಎಂದು ಕರ್ನಾಟಕಕ್ಕೆ ಸೂಚನೆ ನೀಡಿತ್ತು. ಇಂದು ಕರ್ನಾಟಕ ಇಂದು ಸಮಗ್ರ ದಾಖಲೆ ಹಾಗೂ ಅಂಕಿ-ಅಂಶಗಳನ್ನು ನ್ಯಾಯಪೀಠದ ಮುಂದೆ ಮಂಡಿಸಲಿದೆ.

ನಾಳೆ ದೆಹಲಿಯಲ್ಲಿ ಸಭೆ

ಕಾವೇರಿ ನೀರು ನಿಯಂತ್ರಣ ಸಮಿತಿ ನಾಳೆ ದೆಹಲಿಯಲ್ಲಿ ಸಭೆ ನಡೆಸಲಿದ್ದು, ಎಷ್ಟು ನೀರು ಹರಿಸಬೇಕು ಎನ್ನುವ ಬಗ್ಗೆ ಚರ್ಚೆ ನಡೆಯಲಿದೆ. ತಮಿಳುನಾಡಿಗೆ ನಿತ್ಯ 12 ಸಾವಿರ ಕ್ಯೂಸೆಕ್‌ ಬದಲು ಆರು ಸಾವಿರ ಕ್ಯೂಸೆಕ್‌ ನೀರು ಹರಿಸಲು ಅನುಮತಿ ಕೊಡಿ ಎಂದು ಕರ್ನಾಟಕ ಸರ್ಕಾರ ಈಗಾಗಲೇ ಮನವಿ ಮಾಡಿದೆ. ನಾಳಿನ ಸಭೆಯಲ್ಲಿ ಜಲಾಶಯಗಳ ಕೊರತೆ ವಿಚಾರ ಕೂಡ ಬರಲಿದೆ. ರಾಜ್ಯದ ಜಲಾಶಯಗಳ ಹಾಗೂ ಮಳೆಯ ಸ್ಥಿತಿಯನ್ನು ನೋಡಿ ಮನವಿ ಸ್ವೀಕಾರ ಆಗಲಿದೆಯೋ ಇಲ್ಲವೋ ಕಾದುನೋಡಬೇಕಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !