August 24, 2026
Monday, August 24, 2026
spot_img

ಮತದಾರರೇ ಗಮನಿಸಿ, ಇಂದು SIR ಕರಡು ಮತದಾರರ ಪಟ್ಟಿ ಪ್ರಕಟ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಎರಡು ತಿಂಗಳಿನಿಂದ ನಡೆಯುತ್ತಿರುವ ಮತದಾರರ ಪಟ್ಟಿ ಪರಿಷ್ಕರಣೆ ಕಾರ್ಯದ ಮೊದಲ ಹಂತ ಮುಕ್ತಾಯವಾಗಿದ್ದು, ಇಂದು ಎಸ್‌ಐಆರ್‌ ಕರಡು ಮತದಾರರ ಪಟ್ಟಿ ಬಿಡುಗಡೆ ಆಗಲಿದೆ.

ಮತದಾರರ ಪಟ್ಟಿಯಲ್ಲಿ ನಮ್ಮ ಹೆಸರು ಇದೆಯಾ ಇಲ್ಲಾ ಬಿಟ್ಟು ಹೋಗಿದೆಯಾ ಎಂದು ಡ್ರಾಫ್ಟ್‌ನಲ್ಲಿ ನೋಡಬಹುದಾಗಿದೆ. ಈ ಬಾರಿ ಎಸ್‌ಐಆರ್‌ ಪ್ರಕ್ರಿಯೆ ವೇಳೆ ಬರೋಬ್ಬರು ಒಂದು ಕೋಟಿ, ಏಳು ಸಾವಿರ ಜನರ ಹೆಸರು ಡಿಲೀಟ್‌ ಆಗಿದೆ. ಇನ್ನು 43 ಲಕ್ಷ ಜನರ ಐಡಿ ಮ್ಯಾಪಿಂಗ್‌ ಆಗಿಲ್ಲದ ಕಾರಣ ಮತದಾರರಿಗೆ ಬಿಎಲ್‌ಒಗಳು ನೊಟೀಸ್‌ ನೀಡಲಿದ್ದಾರೆ.

43 ಲಕ್ಷ ಮತದಾರರಿಗೆ ನೋಟಿಸ್

ಇಷ್ಟು ದಿನ ಮನೆ ಮನೆಗೆ ತೆರಳಿ ಸಮೀಕ್ಷೆ ಮಾಡಲಾಗಿದ್ದು, ಅದರ ಫಲಿತಾಂಶದ ಮೊದಲು ಭಾಗ ಅಂದರೆ ಡ್ರಾಫ್ಟ್‌ ಪಟ್ಟಿ ಇಂದು ರಿಲೀಸ್‌ ಆಗಲಿದೆ. ರಾಜ್ಯದಲ್ಲಿ 5.55 ಕೋಟಿ ಎನಮ್ಯೂರೇಷನ್ ಫಾರಂ ವಿತರಣೆ ಮಾಡಿ, ಮತದಾರರಿಂದ ಫಾರಂ ಭರ್ತಿ ಮಾಡಿಸಿ ಕರಡು ಮತದಾರರ ಪಟ್ಟಿ ರಿಲೀಸ್ ಮಾಡಲಾಗುತ್ತಿದೆ. ಇದರಲ್ಲಿ ಹೆಸರು ಅಥವಾ ಇನ್ಯಾವುದೇ ಮಾಹಿತಿ ತಪ್ಪಿದ್ದಲ್ಲಿ ಮತ್ತೆ ಸರಿಪಡಿಸಿಕೊಳ್ಳಬಹುದಾಗಿದೆ. ಒಟ್ಟಾರೆ 4.34 ಕೋಟಿ ಮತದಾರರ ಹೆಸರು ಮಾತ್ರ ಡ್ರಾಫ್ಟ್‌ನಲ್ಲಿ ಕಾಣಿಸಲಿದೆ. ಇನ್ನುಳಿದ 1.07 ಕೋಟಿ ಮತದಾರರನ್ನು ಎಎಸ್‌ಡಿಡಿಒ ಎಂದು ಗುರುತು ಮಾಡಲಾಗುತ್ತದೆ. ಇವರ ಹೆಸರು ಪಟ್ಟಿಯಲ್ಲಿ ಇರೋದಿಲ್ಲ. ಇದನ್ನು ಬಿಟ್ಟು ಮ್ಯಾಪಿಂಗ್‌ ಆಗದ 43 ಲಕ್ಷ ಮತದಾರರಿಗೆ ನೋಟಿಸ್ ನೀಡಲಾಗುತ್ತದೆ. ನೋಟಿಸ್ ಜೊತೆಗೆ ಸೂಕ್ತ ದಾಖಲಾತಿಗಳನ್ನ ಸಲ್ಲಿಸಿ ನಾವು ಮತದಾರರು ಅಂತಾ ರುಜುವಾತು ಮಾಡಿಕೊಳ್ಳಬೇಕಿದೆ.

ನೊಟೀಸ್‌ ಬಂದರೆ ಏನು ಮಾಡಬೇಕು?

ನೀವು ಮತದಾರ ಎಂದು ಪ್ರೂವ್‌ ಆಗುವಂತಹ ದಾಖಲೆಗಳನ್ನು ಸಲ್ಲಿಕೆ ಮಾಡಬೇಕಾಗುತ್ತದೆ. ನೊಟೀಸ್‌ ಪಡೆದ ಮತದಾರರು ತಮ್ಮ ದಾಖಲೆಗಳನ್ನು ನೀಡಿದರೆ ಮತದಾರರ ಪಟ್ಟಿಯಲ್ಲಿ ಮತ್ತೆ ಹೆಸರು ಬರುವ ಸಾಧ್ಯತೆ ಇದೆ. ಮೊದಲು ಮ್ಯಾಪಿಂಗ್‌ ಆಗದಿರುವವರಿಗೆ ನೊಟೀಸ್‌ ಹೋಗಲಿದೆ. ಆನಂತರ ಬಿಆರ್‌ಒಗಳು ತನಿಖೆ ಮಾಡುತ್ತಾರೆ. ಮತದಾರ ಪ್ರೂವ್‌ ಮಾಡಿಕೊಳ್ಳುವಂತಹ ದಾಖಲೆಗಳನ್ನು ಸಲ್ಲಿಕೆ ಮಾಡಬೇಕು. ನೊಟೀಸ್‌ ಪಡೆದ ಏಳು ದಿನದಲ್ಲಿ ಉತ್ತರ ನೀಡಬೇಕು. ಆನಂತರ ಇನ್ನೊಂದು ಪಟ್ಟಿ ರಿಲೀಸ್‌ ಆಗುತ್ತದೆ. ಅದರಲ್ಲಿ ತಮ್ಮ ಹೆಸರು ಇದೆಯಾ ಇಲ್ಲವಾ ಖಾತ್ರಿಪಡಿಸಿಕೊಳ್ಳಬೇಕು.

ಫೈನಲ್‌ ಪಟ್ಟಿ ರಿಲೀಸ್‌ ಯಾವಾಗ?

ಮತದಾರರ ಪಟ್ಟಿಯಲ್ಲಿ ಹೆಸರು ಇನ್ನಿತರ ದೋಷ ಇದ್ರೆ ಹಕ್ಕು ಮತ್ತು ಆಕ್ಷೇಪಣೆ ಸಲ್ಲಿಕೆಗೆ ಆಗಸ್ಟ್ 24 ರಿಂದ ಸೆಪ್ಟೆಂಬರ್ 23ರವರೆಗೆ ಕಾಲಾವಕಾಶ ಇದೆ. ಅಂತಿಮ ಮತದಾರರ ಪಟ್ಟಿ ಪ್ರಕಟ ಅಕ್ಟೋಬರ್ 10ನೇ ತಾರೀಖು ರಿಲೀಸ್ ಆಗಲಿದೆ. ಫಾರಂ 6 ಅಡಿ ಕೂಡ ಹೊಸದಾಗಿ ಮತದಾರರು ಸೇರ್ಪಡೆ ಆಗಬಹುದು.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !