August 24, 2026
Monday, August 24, 2026
spot_img

ಯುದ್ಧವಿಮಾನಗಳ ಬಿಡಿಭಾಗಗಳಲ್ಲಿ ಶೇ.97 ಸ್ವದೇಶೀಕರಣ: ಇನ್ಮುಂದೆ ವಿದೇಶಗಳನ್ನು ಅವಲಂಬಿಸೋ ಅವಶ್ಯಕತೆ ಇಲ್ಲ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಭಾರತೀಯ ವಾಯುಪಡೆ ವಿದೇಶಿ ಪೂರೈಕೆ ವ್ಯವಸ್ಥೆಯ ಮೇಲಿನ ಅವಲಂಬನೆಯನ್ನು ಕಡಿಮೆ ಮಾಡುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆ ಇಟ್ಟಿದೆ.

ವಾಯುಪಡೆಗೆ ನಿರಂತರವಾಗಿ ಅಗತ್ಯವಾಗುವ ಕಾರ್ಯಾಚರಣಾ ಯುದ್ಧವಿಮಾನಗಳ ಬಿಡಿಭಾಗಗಳ ಪೈಕಿ ಶೇ.97ರಷ್ಟು ಭಾಗವನ್ನು ದೇಶದಲ್ಲೇ ಉತ್ಪಾದಿಸುವ ಸಾಮರ್ಥ್ಯವನ್ನು ಪಡೆದುಕೊಂಡಿದೆ. ಕಳೆದ ಐದು ವರ್ಷಗಳಲ್ಲಿ ಈ ಕ್ರಮದಿಂದ 582 ಕೋಟಿ ರೂ ಮೌಲ್ಯದ ವಿದೇಶಿ ವಿನಿಮಯ ಉಳಿತಾಯವಾಗಿದೆ ಎಂದು ವರದಿಯಾಗಿದೆ.

62,300ಕ್ಕೂ ಹೆಚ್ಚು ಬಿಡಿಭಾಗಗಳ ದೇಶೀಯ ಉತ್ಪಾದನೆ

ವಾಯುಪಡೆಯ ಮೆಂಟೆನೆನ್ಸ್ ಕಮಾಂಡ್ ನೇತೃತ್ವದಲ್ಲಿ ಸುಮಾರು 62,300 ಬಿಡಿಭಾಗಗಳನ್ನು ಸ್ವದೇಶೀಕರಣಗೊಳಿಸಲಾಗಿದೆ. ಬ್ಯಾಟರಿಗಳು, ಪೈಲಟ್ ಪ್ಯಾರಾಚೂಟ್‌ಗಳು, ಯುದ್ಧವಿಮಾನಗಳ ಟೈರ್‌ಗಳು, ಪವರ್ ಕಾರ್ಟ್‌ಗಳು ಸೇರಿದಂತೆ ಹಲವು ಪ್ರಮುಖ ಉಪಕರಣಗಳು ಇದರಲ್ಲಿ ಸೇರಿವೆ. ಇದರಿಂದ ವಿದೇಶಿ ಕಂಪನಿಗಳು ಮತ್ತು ಪೂರೈಕೆ ಸರಪಳಿಗಳ ಮೇಲಿನ ಅವಲಂಬನೆ ಕಡಿಮೆಯಾಗುತ್ತಿದೆ.

ಇದನ್ನೂ ಓದಿ:

ದೇಶೀಯ ಖರೀದಿಗೂ ಹೆಚ್ಚಿನ ಆದ್ಯತೆ

ಸ್ವದೇಶೀಕರಣದ ಜೊತೆಗೆ ರಕ್ಷಣಾ ಕ್ಷೇತ್ರದಲ್ಲಿ ದೇಶೀಯ ಖರೀದಿಗೆ ವಾಯುಪಡೆ ಹೆಚ್ಚಿನ ಒತ್ತು ನೀಡುತ್ತಿದೆ. ಬಂಡವಾಳ ವೆಚ್ಚದಲ್ಲಿಯೂ ದೇಶೀಯ ಮೂಲಗಳಿಂದಲೇ ಹೆಚ್ಚಿನ ಪ್ರಮಾಣದ ಖರೀದಿ ನಡೆಸುವ ಗುರಿಯನ್ನು ಸಾಧಿಸಿರುವುದಾಗಿ ವರದಿಯಾಗಿದೆ. ಯುದ್ಧ ಸನ್ನದ್ಧತೆಗೆ ಅಗತ್ಯವಾದ ಬಿಡಿಭಾಗಗಳು ದೇಶದಲ್ಲೇ ಲಭ್ಯವಾಗುವಂತೆ ಮಾಡುವ ಮೂಲಕ ಭವಿಷ್ಯದಲ್ಲಿ ಪೂರೈಕೆ ವ್ಯತ್ಯಯದ ಅಪಾಯವನ್ನು ಕಡಿಮೆ ಮಾಡುವ ಪ್ರಯತ್ನ ಇದಾಗಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !