August 27, 2026
Thursday, August 27, 2026
spot_img

ನೇಪಾಳ-ಟಿಬೆಟ್ ಭೀಕರ ಪ್ರವಾಹ: ಉಡುಪಿ ನಿವಾಸಿಗಳ ಸುರಕ್ಷತೆಗಾಗಿ ಹೆಲ್ಪ್‌ಲೈನ್ ಆರಂಭಿಸಿದ ಜಿಲ್ಲಾಡಳಿತ

ಹೊಸದಿಗಂತ ಡಿಜಿಟಲ್ ಡೆಸ್ಕ್:

ನೇಪಾಳ ಮತ್ತು ಟಿಬೆಟ್ ಗಡಿಭಾಗದಲ್ಲಿ ಸಂಭವಿಸಿರುವ ಭೀಕರ ಜಲಪ್ರಳಯ ಹಾಗೂ ಭೂಕುಸಿತದ ಹಿನ್ನೆಲೆಯಲ್ಲಿ, ಅಲ್ಲಿ ಪ್ರವಾಸ ಅಥವಾ ಯಾತ್ರೆಗೆ ತೆರಳಿ ಸಂಕಷ್ಟಕ್ಕೆ ಸಿಲುಕಿರುವ ಉಡುಪಿ ಜಿಲ್ಲೆಯ ನಿವಾಸಿಗಳ ಸುರಕ್ಷತೆಗಾಗಿ ಜಿಲ್ಲಾಡಳಿತ ಶುಲ್ಕ ರಹಿತ ಹೆಲ್ಪ್‌ಲೈನ್ ಆರಂಭಿಸಿದ್ದು, ತುರ್ತು ಕ್ರಮ ಕೈಗೊಂಡಿದೆ.

ನೇಪಾಳದಲ್ಲಿ ಸಿಲುಕಿರುವ ಉಡುಪಿ ಜಿಲ್ಲೆಯ ನಿವಾಸಿಗಳ ಕುಟುಂಬಸ್ಥರ ಅನುಕೂಲಕ್ಕಾಗಿ ಜಿಲ್ಲಾ ಮಟ್ಟದಲ್ಲಿ ತುರ್ತು ಸಹಾಯವಾಣಿ ತೆರೆಯಲಾಗಿದ್ದು, ಸಂತ್ರಸ್ತರ ವಿವರಗಳನ್ನು ತಕ್ಷಣವೇ ನೀಡುವಂತೆ ಜಿಲ್ಲಾಡಳಿತ ಸೂಚಿಸಿದೆ.

ಮಾಹಿತಿ ಒದಗಿಸುವ ವಿಧಾನ ಹೇಗೆ?

ಸಂಕಷ್ಟದಲ್ಲಿರುವವರ ಹೆಸರು, ವಿಳಾಸ, ಪ್ರಸ್ತುತ ಇರುವ ನಿಖರವಾದ ಸ್ಥಳ, ಮೊಬೈಲ್ ಸಂಖ್ಯೆ ಹಾಗೂ ಇನ್ನಿತರ ತುರ್ತು ಅಗತ್ಯಗಳ ವಿವರಗಳನ್ನು ಶುಲ್ಕ ರಹಿತ ಸಂಖ್ಯೆ: 1077, ದೂ.ಸಂಖ್ಯೆ: 0820&2574802 ಅಥವಾ ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರದ ಮೂಲಕ ಬಿಡುಗಡೆ ಮಾಡಲಾದ ಗೂಗಲ್ ಫಾರ್ಮ್ ಲಿಂಕ್ https://docs.google.com/forms/d/1gnw8B8vaYknr0Y2Lkn_fpWubPnKI6a8C4Em7co1Shbk/edit ನಲ್ಲಿಯೂ ವಿವರಗಳನ್ನು ದಾಖಲಿಸಬಹುದಾಗಿದೆ ಎಂದು ಜಿಲ್ಲಾಧಿಕಾರಿಗಳ ಕಚೇರಿ ಪ್ರಕಟಣೆ ತಿಳಿಸಿದೆ.

ನೇಪಾಳ-ಟಿಬೆಟ್ ಗಡಿಭಾಗದ ಪ್ರವಾಹ ಪರಿಸ್ಥಿತಿ ಅತ್ಯಂತ ಗಂಭೀರವಾಗಿದ್ದು, ರಕ್ಷಣಾ ಕಾರ್ಯಾಚರಣೆಗಳಿಗೆ ಹಾನಿಗೊಳಗಾದ ರಸ್ತೆಗಳು ಮತ್ತು ಸೇತುವೆಗಳು ಅಡ್ಡಿಯಾಗಿವೆ. ಹಲವೆಡೆ ಹೆಲಿಕಾಪ್ಟರ್‌ಗಳ ಮೂಲಕವೇ ರಕ್ಷಣಾ ಕಾರ್ಯಾಚರಣೆ ನಡೆಸಲಾಗುತ್ತಿದೆ. ನೇಪಾಳ ಅಥವಾ ಟಿಬೆಟ್‌ಗೆ ತೆರಳಿರುವ ಉಡುಪಿ ಜಿಲ್ಲೆಯವರು ಸಂಪರ್ಕಕ್ಕೆ ಸಿಗದಿದ್ದರೆ ಕುಟುಂಬಸ್ಥರು ಆತಂಕಪಡದೆ ಕೂಡಲೇ ಜಿಲ್ಲಾಡಳಿತದ ತುರ್ತು ಸಹಾಯವಾಣಿಯನ್ನು ಸಂಪರ್ಕಿಸಿ ಮಾಹಿತಿ ನೀಡುವಂತೆ ಮನವಿ ಮಾಡಲಾಗಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !