ಹೊಸದಿಗಂತ ಡಿಜಿಟಲ್ ಡೆಸ್ಕ್:
ಬಾಲಿವುಡ್ನ ‘ಕ್ವೀನ್’ ಕಂಗನಾ ರಣಾವತ್ ಈ ಸಾರಿ ರಕ್ಷಾಬಂಧನ ಹಬ್ಬವನ್ನು ಸಹೋದರ ಅಕ್ಷತ್ ಜೊತೆ ಸಖತ್ ಕ್ಯೂಟ್ ಆಗಿ, ಸಾಂಪ್ರದಾಯಿಕ ಶೈಲಿಯಲ್ಲಿ ಸೆಲೆಬ್ರೇಟ್ ಮಾಡಿದ್ದಾರೆ.

ಬ್ಲೂ ಕಲರ್ ಸೀರೆಯಲ್ಲಿ ಕಂಗೊಳಿಸಿದ ಕಂಗನಾ, ಅಕ್ಷತ್ಗೆ ಪ್ರೀತಿಯಿಂದ ರಾಖಿ ಕಟ್ಟಿ, ಮಂಗಳಾರತಿ ಬೆಳಗಿ ಆಶೀರ್ವದಿಸಿದ್ದಾರೆ. ಪೂಜಾ ತಟ್ಟೆಯಲ್ಲಿ ಲಾಡು, ಹಲ್ವಾ, ರಾಖಿ, ದೀಪ, ಕುಂಕುಮ ಮತ್ತೆ ಅಕ್ಷತೆ ಇಟ್ಟು ಶಾಸ್ತ್ರೋಕ್ತವಾಗಿ ಹಬ್ಬ ಆಚರಿಸಿದ್ದಾರೆ. ಅಕ್ಕ-ತಮ್ಮಂದಿರ ಈ ನಗು, ತಮಾಷೆ ಮತ್ತು ಎಮೋಷನಲ್ ಕ್ಷಣಗಳ ಫೋಟೋಗಳನ್ನು ಕಂಗನಾ ತಮ್ಮ ಇನ್ಸ್ಟಾಗ್ರಾಮ್ನಲ್ಲಿ ಶೇರ್ ಮಾಡಿಕೊಂಡಿದ್ದಾರೆ.

ಫೋಟೋ ಶೇರ್ ಮಾಡಿದ್ದಷ್ಟೇ ಅಲ್ಲದೆ, ಅಕ್ಷತ್ಗೆ ಒಂದು ಎಮೋಷನಲ್ ಮೆಸೇಜ್ ಕೂಡ ಬರೆದಿದ್ದಾರೆ. “ನನ್ನ ಪ್ರೀತಿಯ ಸಹೋದರ, ನಿನ್ನ ಕೈಗೆ ಕಟ್ಟಿರೋ ಈ ಪ್ರೀತಿಯ ದಾರ ನಿನ್ನನ್ನ ಸದಾ ಕಾಯಲಿ. ಅಪ್ಪ-ಅಮ್ಮನ ಸೇವೆ ಮಾಡು, ನಮ್ಮ ಕುಟುಂಬದ ಗೌರವ ಹೆಚ್ಚಿಸು, ಹೆಂಡತಿಯನ್ನು ಚೆನ್ನಾಗಿ ನೋಡ್ಕೋ, ಮಕ್ಕಳನ್ನ ಪ್ರೀತಿಯಿಂದ ಸಾಕು. ನನಗಂತೂ ನಿನ್ನಲ್ಲಿ ನಮ್ಮ ಅಪ್ಪ-ಅಮ್ಮನ ಪ್ರತಿಬಿಂಬವೇ ಕಾಣುತ್ತೆ. ನಿನ್ನ ಪ್ರೀತಿ ಮತ್ತು ರಕ್ಷಣೆ ನನಗೆ ಸದಾ ಸಿಗಲಿ. ದೇಶದ ಎಲ್ಲಾ ಅಣ್ಣ-ತಂಗಿಯರಿಗೆ ರಕ್ಷಾ ಬಂಧನದ ಹಾರ್ದಿಕ ಶುಭಾಶಯಗಳು” ಎಂದು ಬರೆದುಕೊಂಡಿದ್ದಾರೆ.
https://www.instagram.com/p/DckixmZE4IP/?utm_source=ig_web_button_share_sheet
ಇತ್ತೀಚೆಗೆ ಸೋಶಿಯಲ್ ಮೀಡಿಯಾದಲ್ಲಿ ಆಡ್ ಒಂದರ ವಿಚಾರಕ್ಕೆ ಸಖತ್ ಸೌಂಡ್ ಮಾಡ್ತಿದ್ದ ಕಂಗನಾ, ಈಗ ಸಹೋದರನ ಮೇಲಿರೋ ಅಕ್ಕರೆಯನ್ನ ತೋರಿಸಿ ಅಭಿಮಾನಿಗಳ ಮನಸ್ಸು ಗೆದ್ದಿದ್ದಾರೆ. ನಮ್ಮ ಭಾರತೀಯ ಸಂಸ್ಕೃತಿ ಮತ್ತು ಕುಟುಂಬದ ಮೌಲ್ಯಗಳಿಗೆ ಕಂಗನಾ ಕೊಡುವ ಗೌರವವನ್ನು ನೆಟ್ಟಿಗರು ಕೊಂಡಾಡುತ್ತಿದ್ದು, ಈ ಫೋಟೋಗಳು ಹಾಗೂ ಕ್ಯಾಪ್ಷನ್ ಈಗ ಸೋಶಿಯಲ್ ಮೀಡಿಯಾದಲ್ಲಿ ಫುಲ್ ವೈರಲ್ ಆಗಿದೆ!



