ರಕ್ಷಾ ಬಂಧನ ಅಂದ್ರೆ ಮನೆಲಿ ಅಕ್ಕ-ತಂಗಿ ಕೈಯಿಂದ ರಾಖಿ ಕಟ್ಟಿಸ್ಕೊಂಡು ಸ್ವೀಟ್ ತಿಂದು ಆಚರಿಸೋದು ಮಾಮೂಲಿ. ಆದ್ರೆ ನಮ್ ದೇಶದ ಹುಡುಗ್ರು ಎಲ್ಲೇ ಹೋದ್ರು ‘Bro-zone’ ಆಗೋದ್ರಿಂದ ತಪ್ಪಿಸಿಕೊಳ್ಳೋಕೆ ಆಗಲ್ಲ ಅನ್ನೋದಕ್ಕೆ ಈ ವಿಡಿಯೋನೇ ಸಾಕ್ಷಿ!
ವಿಮಾನದಲ್ಲಿ 30,000 ಅಡಿ ಎತ್ತರದಲ್ಲಿ ಹಾರಾಡ್ತಿದ್ದಾಗ ಏರ್ಹೋಸ್ಟೆಸ್ ಮೇಡಂ ಒಬ್ಬರು ವಿಮಾನದಲ್ಲಿದ್ದ ಸುಧಾಂಶು ಕೌಶಿಕ್ ಅನ್ನೋ ಪ್ಯಾಸೆಂಜರ್ಗೆ ರಾಖಿ ಕಟ್ಟಿ ಬಿಟ್ಟಿದ್ದಾರೆ.ಈ ಫನ್ನಿ ವೀಡಿಯೋನ ಇನ್ಸ್ಟಾಗ್ರಾಮ್ನಲ್ಲಿ ಶೇರ್ ಮಾಡಿದ್ದು, ಸದ್ಯ ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗ್ತಿದೆ.

ಶೇರ್ ಆಗಿರೋ ವೀಡಿಯೋದಲ್ಲಿ ಏರ್ ಏರ್ಹೋಸ್ಟೆಸ್ ಒಬ್ಬರು ಮುಗುಳ್ನಗುತ್ತಾ ಇವರ ಕೈಗೆ ರಾಖಿ ಕಟ್ಟಿದ್ದಾರೆ. ಒಬ್ಬಿಬ್ಬರಲ್ಲ, ಫ್ಲೈಟ್ನಲ್ಲಿದ್ದ ಇಡೀ ಕ್ಯಾಬಿನ್ ಸಿಬ್ಬಂದಿ ಒಂದಾಗಿ ಈ ಸಾಹಸ ಮಾಡಿದ್ದಾರೆ. “ನಮ್ಮ ಫ್ಲೈಟ್ನ ಇಡೀ ಏರ್ಹೋಸ್ಟೆಸ್ ಬಳಗವೇ ಸೇರಿ ನನಗೆ ಬ್ರದರ್ ಝೋನ್ ಮಾಡಿಬಿಡ್ತು!” ಅಂತ ಸೋಶಿಯಲ್ ಮೀಡಿಯಾದಲ್ಲಿ ವಿಡಿಯೋ ಹಾಕಿ ಸುಧಾಂಶು ಗೋಳಾಡಿದ್ದಾರೆ.
https://www.instagram.com/reel/DcjNajHzdQ6/?utm_source=ig_web_button_share_sheet
ರಾಖಿ ಕಟ್ಟಿದ್ದು ಒಂದು ಕಡೆ ಆದ್ರೆ, ಈ ವಿಡಿಯೋ ನೋಡಿ ನೆಟ್ಟಿಗರು ಮಾಡಿರೋ ಕಮೆಂಟ್ ಮತ್ತೊಂದು ಲೆವೆಲ್!
ಜನಗಳ ಕಮೆಂಟ್ ಅಂತಿಂಥದ್ದಲ್ಲ. ಒಬ್ಬ ನೆಟ್ಟಿಗ, “ಅಲ್ಲಪ್ಪಾ, ರಾಖಿ ಕಟ್ಟಿಸಿಕೊಂಡಿದ್ದೇನೋ ಸರಿ, ಅಕ್ಕಂಗೆ ಗಿಫ್ಟ್ ಏನಾದ್ರೂ ಕೊಟ್ಟ್ಯಾ ಅಥವಾ ಚಾಕೊಲೇಟ್ ಕೊಟ್ಟು ಎಸ್ಕೇಪ್ ಆದ್ಯಾ?” ಅಂತ ಕಾಲೆಳೆದಿದ್ದಾನೆ.
ಆದ್ರೆ ಅಸಲಿ ಕಾಮಿಡಿ ಇರೋದೇ ವಿಡಿಯೋ ಬ್ಯಾಕ್ಗ್ರೌಂಡ್ನಲ್ಲಿ. ರೈಟ್ ಸೈಡ್ನಲ್ಲಿ ಬಿಳಿ ಟೀ-ಶರ್ಟ್ ಹಾಕೊಂಡಿದ್ದ ಒಬ್ಬ ಮಹಾನುಭಾವ, ಲೋಕದ ಚಿಂತೆಯೇ ಇಲ್ಲದೆ ನಿದ್ದೆ ಹೊಡೀತಿದ್ದ. ಅದನ್ನ ನೋಡಿ ಒಬ್ಬ, “ನೋಡ್ರೋ ಅಲ್ಲಿ, ಆ ಅಣ್ಣ ಹೆಂಗೆ ನಿದ್ದೆ ಮಾಡ್ತಿದ್ದಾನೆ” ಅಂದಿದ್ದಾನೆ. ಇನ್ನೊಬ್ಬ, “ಹಿಂದೆ ಕೂತಿದ್ದವನಿಗೆ ಮ್ಯಾಟರ್ ಅರ್ಥ ಆಗಿದೆ ಗುರು… ಇಂಥಾ ಟೈಮ್ನಲ್ಲಿ ಕಣ್ಣು ಮುಚ್ಕೊಂಡು ನಿದ್ದೆ ಮಾಡೋದೇ ಜಾಣತನ ಅನ್ಕೊಂಡು ಸುಮ್ಮನಾಗಿದ್ದಾನೆ” ಅಂತ ಕಾಮೆಂಟ್ ಹಾಕಿದ್ದಾನೆ.
ಏನೇ ಹೇಳಿ, ರಕ್ಷಾಬಂಧನ ಅಂದ್ರೆ ಬರೀ ಮನೆ ಮೂಲೆಯಲ್ಲೇ ಆಚರಿಸಬೇಕಿಲ್ಲ, ಅತ್ತಿತ್ತ ಹಾರಾಡೋ ಫ್ಲೈಟ್ನಲ್ಲೂ ಪ್ರೀತಿ-ನಗು ಹಂಚಬಹುದು ಅಂತ ಈ ಏರ್ ಇಂಡಿಯಾ ಸಿಬ್ಬಂದಿ ಪ್ರೂವ್ ಮಾಡಿದ್ದಾರೆ. ಕ್ರಶ್ ಅನ್ಕೊಂಡಿದ್ದ ಜಾಗದಲ್ಲಿ ‘ಬ್ರದರ್’ ಪಟ್ಟ ಸಿಕ್ಕಿದ್ದು ಆ ಪ್ರಯಾಣಿಕನಿಗೆ ಸ್ವಲ್ಪ ಶಾಕ್ ಕೊಟ್ಟಿರಬಹುದು, ಆದ್ರೆ ಆಕಾಶದ ಎತ್ತರದಲ್ಲಿ ಸಿಕ್ಕ ಈ ನೆನಪು ಮಾತ್ರ ಲೈಫ್ಲಾಂಗ್ ಡಿಫರೆಂಟ್ ಆಗಿ ಉಳಿಯೋದಂತೂ ಗ್ಯಾರಂಟಿ!



