August 29, 2026
Saturday, August 29, 2026
spot_img

ಜಪಾನ್‌ ಆತಿಥ್ಯಕ್ಕೆ ಶಾಕ್: ಆಟಗಾರರ ರೂಮ್ ನೋಡಿ ಬಿಸಿಸಿಐಗೆ ಶುರುವಾಗಿದೆ ಟೆನ್ಷನ್

ಹೊಸದಿಗಂತ ಡಿಜಿಟಲ್ ಡೆಸ್ಕ್:

2026ರ ಏಷ್ಯನ್ ಗೇಮ್ಸ್‌ನಲ್ಲಿ ಕಣಕ್ಕಿಳಿಯಲು ಭರ್ಜರಿ ತಯಾರಿ ನಡೆಸುತ್ತಿರುವ ಭಾರತಕ್ಕೆ ಈಗ ಹೊಸ ತಲೆನೋವು ಶುರುವಾಗಿದೆ. ಜಪಾನ್ ನಲ್ಲಿ ಆಟಗಾರರಿಗೆ ನೀಡಿರುವ ವಸತಿ ವ್ಯವಸ್ಥೆ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತವಾಗಿದೆ.

ಕೊಠಡಿಗಳು ತುಂಬಾ ಚಿಕ್ಕದು

ಆಟಗಾರರು ಹಂಚಿಕೊಳ್ಳಬೇಕಾದ ಡ್ರೆಸ್ಸಿಂಗ್ ರೂಮ್ ತುಂಬಾ ಚಿಕ್ಕದಾಗಿವೆ. ಆಟಗಾರರ ಕಿಟ್‌ಬ್ಯಾಗ್‌, ಲಗೇಜ್‌ ಸೇರಿದಂತೆ ಅಗತ್ಯ ವಸ್ತುಗಳನ್ನು ಇಡೋದಕ್ಕೂ ಕೊಠಡಿಯಲ್ಲಿ ಬೇಕಾದಷ್ಟು ಸ್ಥಳವಿಲ್ಲ ಅನ್ನೋ ವಿಚಾರ ಏಷ್ಯನ್ ಕ್ರಿಕೆಟ್ ಕೌನ್ಸಿಲ್‌ ಸಭೆಯಲ್ಲಿ ಚರ್ಚೆಗೆ ಬಂದಿದೆ.

ಜಪಾನ್ ಗೆ ತೆರಳಿ ಪರಿಶೀಲನೆ ಮಾಡುವ ಸಲಹೆ

ವಸತಿ ವ್ಯವಸ್ಥೆ ಗಳನ್ನು ಪರಿಶೀಲಿಸಲು ಫುಲ್-ಮೆಂಬರ್ ಕ್ರಿಕೆಟ್ ಮಂಡಳಿಗಳ ಪ್ರತಿನಿಧಿಗಳು ತಕ್ಷಣವೇ ಜಪಾನ್‌ಗೆ ತೆರಳಿ ವಸತಿ ಜತೆಗೆ ಇತರ ಸೌಲಭ್ಯಗಳನ್ನು ಖುದ್ದಾಗಿ ಪರಿಶೀಲಿಸುವಂತೆ ಸಲಹೆ ನೀಡಲಾಗಿದೆ.

ಇದನ್ನೂ ಓದಿ:

ಮಾಹಿತಿಗಳ ಪ್ರಕಾರ ಒಂದು ಕೊಠಡಿಯಲ್ಲಿ ಇಬ್ಬರು ಆಟಗಾರರು ಉಳಿದುಕೊಂಡ್ರೆ ಅಲ್ಲಿ ಕಿಟ್‌ಬ್ಯಾಗ್‌ ತೆರೆದು ಸರಿಯಾಗಿ ನಿಲ್ಲೋದಕ್ಕೂ ಜಾಗ ಇಲ್ಲ ಎನ್ನಲಾಗಿದೆ. ಹೀಗಿರುವಾಗ ಆಟಗಾರರು ಸಾಕಷ್ಟು ವಿಶ್ರಾಂತಿ ಪಡೆಯೋದಕ್ಕೂ ಕಿರಿಕಿರಿ ಅನುಭವಿಸುವಂತಾಗಬಹುದು ಅನ್ನೋ ಅನುಮಾನ ಶುರುವಾಗಿದೆ.

B ತಂಡ ಕಳುಹಿಸುವ ಎಚ್ಚರಿಕೆ

ಸರಿಯಾದ ವಸತಿ ಸೌಲಭ್ಯಗಳಿಲ್ಲದೆ ಮುಖ್ಯ ತಂಡವನ್ನು ಕಳುಹಿಸಲು ಬಿಸಿಸಿಐ ಹಿಂದೇಟು ಹಾಕುತ್ತಿದ್ದು ಇದರ ಬದಲಿಗೆ B ತಂಡ ಕಳುಹಿಸುವ ಚರ್ಚೆ ನಡೆದಿದೆ ಎನ್ನಲಾಗಿದೆ. ಇನ್ನು ಫುಲ್-ಮೆಂಬರ್ ಕ್ರಿಕೆಟ್ ಮಂಡಳಿಗಳ ಪ್ರತಿನಿಧಿಗಳು ಜಪಾನ್ ಗೆ ಭೇಟಿ ನೀಡಿ ಅಲ್ಲಿನ ವ್ಯವಸ್ಥೆ ಪರಿಶೀಲಿಸಿದ ಬಳಿಕ ಅವರು ನೀಡುವ ವರದಿಯ ಆಧಾರದ ಮೇಲೆ ತಂಡ ಕಳುಹಿಸುವ ನಿರ್ಧಾರ ಮಾಡಲಾಗಿದೆ.

ಒಟ್ಟಿನಲ್ಲಿ, ಏಷ್ಯನ್ ಗೇಮ್ಸ್‌ ಆರಂಭಕ್ಕೂ ಮುನ್ನವೇ ಜಪಾನ್‌ನ ವಸತಿ ವ್ಯವಸ್ಥೆ ಕ್ರಿಕೆಟ್ ಮಂಡಳಿಗಳಿಗೆ ತಲೆನೋವಾಗಿ ಪರಿಣಮಿಸಿದೆ. ಆಟಗಾರರ ಅನುಕೂಲತೆ ಹಾಗೂ ಅಗತ್ಯ ಸೌಲಭ್ಯಗಳು ಖಚಿತವಾದ ಬಳಿಕವೇ ಪೂರ್ಣ ಸಾಮರ್ಥ್ಯದ ತಂಡಗಳನ್ನು ಕಳುಹಿಸುವ ಬಗ್ಗೆ ಅಂತಿಮ ನಿರ್ಧಾರ ಕೈಗೊಳ್ಳುವ ಸಾಧ್ಯತೆಯಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !