August 29, 2026
Saturday, August 29, 2026
spot_img

ಸಿಗರೇಟ್‌ ವಾಸನೆ ತಡೆಯೋಕಾಗದೇ ಲಕ್ಷ ಸಂಬಳ ಬರುವ ಕೆಲಸಕ್ಕೆ ಗುಡ್‌ಬೈ ಹೇಳಿದ ಉದ್ಯೋಗಿ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಬಾಸ್‌ ಸರಿಯಿಲ್ಲ, ಕೆಲಸದ ಹೊರೆ ಹೆಚ್ಚಾಗಿದೆ, ಒತ್ತಡ ಜಾಸ್ತಿಯಾಗಿದೆ, ಹೈಕ್‌ ಸಿಗ್ತಾ ಇಲ್ಲ, ಬೋನಸ್‌ ಕೊಟ್ಟಿಲ್ಲ ಎನ್ನುವ ಕಾರಣಕ್ಕೆ ಉದ್ಯೋಗಿಗಳು ಕೆಲಸಕ್ಕೆ ರಾಜೀನಾಮೆ ನೀಡೋದರ ಬಗ್ಗೆ ಕೇಳಿದ್ದೇವೆ. ಆದರೆ ಇಲ್ಲೊಬ್ಬ ಮಹಿಳಾ ಉದ್ಯೋಗಿ ಸಿಗರೇಟ್‌ ವಾಸನೆ ನನಗೆ ತಡೆಯೋದಕ್ಕೆ ಆಗ್ತಾ ಇಲ್ಲ ಎಂದು ರಾಜೀನಾಮೆ ನೀಡಿದ್ದಾರೆ.

ಹೌದು, ಸಾಮಾಜಿಕ ಜಾಲತಾಣದಲ್ಲಿ ಈ ಪೋಸ್ಟ್‌ ವೈರಲ್‌ ಆಗಿದ್ದು, ಮಹಿಳೆಯ ರಾಜೀನಾಮೆ ಇ-ಮೇಲ್‌ ನೋಡಿ ಜನ ಬಾಯಿ ಮೇಲೆ ಬೆರಳಿಟ್ಟುಕೊಂಡಿದ್ದಾರೆ. ಯಾವುದೋ ಜಾಗದಲ್ಲಿ ಕೆಲ ಎಂಪ್ಲಾಯಿಗಳು ಸಿಗರೇಟ್‌ ಸೇದಿದ್ದಕ್ಕೆ ಯಾರಾದ್ರೂ ರಾಜೀನಾಮೆ ಕೊಡ್ತಾರಾ ಎಂದು ಪ್ರಶ್ನಿಸಿದ್ದಾರೆ. ಆಫೀಸಿನಲ್ಲಿ ಯುವತಿ ಕೂರು ಚೇಂಬರ್‌ಗೆ ತುಸು ದೂರದಲ್ಲೇ ಜನ ಸ್ಮೋಕ್‌ ಮಾಡುತ್ತಿದ್ದು, ನಿತ್ಯವೂ ಗಬ್ಬು ವಾಸನೆಯಿಂದ ಹೈರಾಣಾಗಿದ್ದೇನೆ. ಇಲ್ಲಿ ಇನ್ನು ಕೆಲಸ ಮಾಡಲು ಆಗುವುದಿಲ್ಲ ಎಂದು ಯುವತಿ ಹೇಳಿದ್ದಾರೆ.

ಬೆಂಗಳೂರಿನ ಉದ್ಯೋಗಿ ಜಾಹ್ನವಿ ಚಾವಡಾ ಎನ್ನುವವರು ರಾಜೀನಾಮೆ ನೀಡಿರುವ ಉದ್ಯೋಗಿ ಎನ್ನಲಾಗಿದೆ. ಪ್ಯಾಂಟ್ರಿಯಲ್ಲಿ ಯುವಕರು ನಿತ್ಯವೂ ಎರಡು ಮೂರು ಸಿಗರೇಟ್‌ ಸೇದುತ್ತಿದ್ದು, ಸೆಕೆಂಡ್‌ ಹ್ಯಾಂಡ್‌ ಸ್ಮೋಕಿಂಗ್‌ನಿಂದ ಕಿರಿಕಿರಿ ಆಗುತ್ತಿರುವುದಾಗಿ ಎಚ್‌ಆರ್‌ಗೆ ಹೇಳಿದ್ದಾರೆ ಎನ್ನಲಾಗಿದೆ. ಆದರೆ ಯಾವುದೇ ಕ್ರಮಗಳನ್ನು ಕೈಗೊಳ್ಳದ ಕಾರಣ ಸಂಬಳಕ್ಕಿಂತ ಆರೋಗ್ಯವೇ ಮುಖ್ಯವೆಂದು ಯುವತಿ ರಾಜೀನಾಮೆ ನೀಡಿದ್ದಾರೆ.

https://www.instagram.com/p/DcnZyVfFIeI/?img_index=2&igsi=bmhibnVyMTYwMmto

ಇ-ಮೇಲ್‌ನಲ್ಲಿ ಏನಿದೆ?

ನನ್ನ ರಾಜೀನಾಮೆಯನ್ನು ಸ್ವೀಕರಿಸಿ. ಇದೇ ತಿಂಗಳಿನಲ್ಲಿ ನಾನು ಕೆಲಸ ಮಾಡುವುದನ್ನು ನಿಲ್ಲಿಸುತ್ತೇನೆ. ಈ ಆಫೀಸಿನಲ್ಲಿ ನನಗೆ ಸಿಗರೇಟ್‌ ವಾಸನೆಯನ್ನು ತಡೆಯೋದಕ್ಕೆ ಆಗುತ್ತಿಲ್ಲ. ಎಷ್ಟೋ ಬಾರಿ ಅಡ್ಜಸ್ಟ್‌ ಮಾಡಿಕೊಳ್ಳಲು ಪ್ರಯತ್ನಿಸಿದೆ. ಆದರೆ ನನ್ನಿಂದ ಸೆಕೆಂಡ್‌ ಹ್ಯಾಂಡ್‌ ಸ್ಮೋಕಿಂಗ್‌ ತಡೆಯಲು ಆಗುತ್ತಿಲ್ಲ. ನನ್ನ ರಾಜೀನಾಮೆಯನ್ನು ಅಕ್ಸೆಪ್ಟ್‌ ಮಾಡಿ. ಹೇಗೆ ನೋಡಿದರೂ ಬದಲಾವಣೆ ಬೇಕಿರೋದು ನನಗಲ್ಲ. ಯಾರಿಗೆ ಎಂದು ಎಲ್ಲರಿಗೂ ಗೊತ್ತಿದೆ. ಧನ್ಯವಾದಗಳು ಎಂದು ಬರೆದಿದ್ದಾರೆ.

ಕಮೆಂಟ್‌ಗಳೇನು?

ಯಾವ ಆಫೀಸ್‌ಗೆ ಹೋದ್ರೂ ಸಿಗರೇಟ್‌ ವಾಸನೆ ಇದ್ದದ್ದೇ, ನಿಮ್ಮ ಜಾಗ ಬದಲಿಸೋಕೆ ಹೇಳಬೇಕಿತ್ತು. ಅದನ್ನು ಬಿಟ್ಟು ಒಳ್ಳೆಯ ಸಂಬಳ ಬರುವ ಕೆಲಸವನ್ನು ಬಿಟ್ರೆ ಹೇಗೆ? ಎಂದಿದ್ದಾರೆ. ಇನ್ನೂ ಕೆಲವರು ಒಳ್ಳೆ ಕೆಲಸ ಮಾಡಿದ್ರಿ. ನಿಮ್ಮ ಕಾರಣ ಎಲ್ಲರಿಗೂ ಅರ್ಥವಾಗುವಂಥದ್ದು, ನಿಮ್ಮನ್ನು ಗೌರವಿಸುತ್ತೇವೆ, ಕಾರ್ಪೋರೇಟ್‌ಗಳಲ್ಲಿ ಸ್ಮೋಕಿಂಗ್‌ ಬ್ಯಾನ್‌ ಆಗಬೇಕು ಎಂದಿದ್ದಾರೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !