ಹೊಸದಿಗಂತ ಡಿಜಿಟಲ್ ಡೆಸ್ಕ್:
ನೇಪಾಳದ ಬೆನ್ನಲ್ಲೇ ಈಗ ನೈಋತ್ಯ ಚೀನಾದ ಕ್ಸಿಜಾಂಗ್ (ಟಿಬೆಟ್)ನ ಗೈರಾಂಗ್ ಭೂ ಬಂದರು ಪ್ರದೇಶದಲ್ಲಿ ಸಂಭವಿಸಿದ ಭೀಕರ ಮಣ್ಣು ಕುಸಿತದಿಂದ 16 ಮಂದಿ ಸಾವನ್ನಪ್ಪಿದ್ದು, ಇಲ್ಲಿಯವರೆಗೆ ಒಟ್ಟು 546 ಜನ ಕಾಣೆಯಾಗಿದ್ದಾರೆ ಎಂದು ಚೀನಾದ ಸರ್ಕಾರಿ ಮಾಧ್ಯಮವೊಂದು ವರದಿ ಮಾಡಿದೆ.
ನಾಪತ್ತೆಯಾದವರಲ್ಲಿ ವಿದೇಶಿಗರೇ ಹೆಚ್ಚು
ಒಟ್ಟು 546 ಮಂದಿ ನಾಪತ್ತೆಯಾಗಿದ್ದು, ಇವರಲ್ಲಿ 261 ಮಂದಿ ವಿದೇಶಿ ಪ್ರಜೆಗಳಾಗಿದ್ದರೆ. ನೇಪಾಳದ 104, ಭಾರತದ 49 ಮಂದಿ, ಲಾಟ್ವಿಯಾದ 33 ಜನ ಹಾಗೂ ಅಮೆರಿಕಾದ 18 ಜನ ಸೇರಿದ್ದಾರೆ. ನಾಪತ್ತೆಯಾದವರ ಕುರಿತು ಚೀನಾ ಈಗಾಗಲೇ ಸಂಬಂಧಿತ ದೇಶದ ರಾಯಭಾರ ಕಚೇರಿಗಳಿಗೆ ಮಾಹಿತಿ ನೀಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಗೈರಾಂಗ್‌ನಲ್ಲಿ ವಿದೇಶಿ ಪ್ರವಾಸಿಗರಿಲ್ಲ
ಟಿಬೆಟ್‌ನ ಗೈರಾಂಗ್ ಕೌಂಟಿಯಲ್ಲಿ ಭೂ ಕುಸಿತ ಸಂಭವಿಸಿದ್ದು, ವ್ಯಾಪಕ ಶೋಧ ಹಾಗೂ ಪರಿಶೀಲನೆ ಬಳಿಕ ಯಾವುದೇ ವಿದೇಶಿ ಪ್ರವಾಸಿಗರು ಸಿಲುಕಿಕೊಂಡಿಲ್ಲ ಎಂದು ಚೀನಾದ ಸರ್ಕಾರಿ ಮಾಧ್ಯಮ ತಿಳಿಸಿದೆ.
ಇದನ್ನೂ ಓದಿ:
ಹಿಮನದಿ ಬಿರುಕು ಬಿಟ್ಟದ್ದೇ ಕಾರಣ
ಚೀನಾದ ತಜ್ಞರ ಪ್ರಕಾರ, ಆಗಸ್ಟ್ 26ರಂದು ನೇಪಾಳದ ಲಿರುಂಗ್ ಶಿಖರದ ದಕ್ಷಿಣ ಇಳಿಜಾರಿನಲ್ಲಿದ್ದ ಹಿಮನದಿಯಲ್ಲಿ ಬಿರುಕು ಉಂಟಾಗಿದ್ದು, ಇದರಿಂದ ದುರಂತ ಸಂಭವಿಸಿದೆ ಎಂದು ಚೀನಾದ ಖಾಸಗಿ ಮಾಧ್ಯಮಗಳು ವರದಿ ಮಾಡಿದೆ.
ಪರಿಹಾರ ಸಾಮಗ್ರಿ, ರಕ್ಷಣಾ ತಂಡ ರವಾನೆ
ಈ ಪ್ರಕೃತಿ ವಿಕೋಪದಿಂದಾಗಿ ಚೀನಾ ಕೂಡ ಸಾಕಷ್ಟು ಸಾವು ನೋವುಗಳನ್ನು ಅನುಭವಿಸುತ್ತಿದ್ದು, ರಕ್ಷಣಾ ಕಾರ್ಯಾಚರಣೆ ಭರದಿಂದ ನಡೆಯುತ್ತಿದೆ. ಪ್ರವಾಹ ಪೀಡಿತ ಪ್ರದೇಶಗಳಿಗೆ ಚೀನಾ ತನ್ನ ರಕ್ಷಣಾ ತಂಡವನ್ನು ರವಾನಿಸಿದ್ದು ಜತೆಗೆ ನಾಲ್ವರು ಸುರಂಗ ರಕ್ಷಣಾ ತಜ್ಞರೊಂದಿಗೆ ಆಹಾರ, ವೈದ್ಯಕೀಯ ಸಾಮಗ್ರಿಗಳನ್ನು ಕಳುಹಿಸಿಕೊಟ್ಟಿದೆ.



