ಹೊಸದಿಗಂತ ಡಿಜಿಟಲ್ ಡೆಸ್ಕ್:
ಭಾರತದ ಸ್ಟಾರ್ ಜಾವಲಿನ್ ಆಟಗಾರ, ಒಲಿಂಪಿಕ್ ಪದಕ ವಿಜೇತ ನೀರಜ್ ಚೋಪ್ರಾ ಈಗ ಗಾಯದ ಸಮಸ್ಯೆಯಿಂದ ಬಳಲುತ್ತಿದ್ದು, 2026ರ ಏಷ್ಯನ್ ಗೇಮ್ಸ್ ಸೇರಿದಂತೆ ಪ್ರಮುಖ ಕ್ರೀಡಾ ಕೂಟಗಳಿಂದ ಹಿಂದೆಸರಿದಿದ್ದಾರೆ.
ತರಬೇತಿ ವೇಳೆ ಕಣಕಾಲಿಗೆ ಗಾಯ
ಲೌಸೇನ್ ಡೈಮಂಡ್ ಲೀಗ್‌ನಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿದ್ದ ನೀರಜ್ ನಂತರದ ತರಬೇತಿ ವೇಳೆ ಕಣಕಾಲಿಗೆ ಗಾಯವಾಗಿದ್ದು, ವೈದ್ಯರ ಸಲಹೆಯಂತೆ ವಿಶ್ರಾಂತಿ ಮತ್ತು ಚಿಕಿತ್ಸೆ ಪಡೆಯಲು ನಿರ್ಧರಿಸಿರುವ ಹಿನ್ನೆಲೆಯಲ್ಲಿ ಅವರು ಪ್ರಸಕ್ತ ಅಥ್ಲೆಟಿಕ್ಸ್ ಸೀಸನ್‌ನಿಂದ ದೂರ ಉಳಿದಿದ್ದಾರೆ.
ಮೂರು ಪ್ರಮುಖ ಟೂರ್ನಿಗಳಿಗೆ ಗೈರು
ನೀರಜ್ ಜಪಾನ್‌ನ ಐಚಿ-ನಗೋಯಾದಲ್ಲಿ ನಡೆಯಲಿರುವ 2026ರ ಏಷ್ಯನ್ ಗೇಮ್ಸ್, ಬ್ರಸೆಲ್ಸ್‌ನ ಡೈಮಂಡ್ ಲೀಗ್ ಫೈನಲ್ ಹಾಗೂ ಬುಡಾಪೆಸ್ಟ್‌ನಲ್ಲಿ ನಡೆಯಲಿರುವ ವರ್ಲ್ಡ್ ಅಥ್ಲೆಟಿಕ್ಸ್ ಅಲ್ಟಿಮೇಟ್ ಚಾಂಪಿಯನ್‌ಶಿಪ್ ನಿಂದ ಹೊರಗುಳಿದಿದ್ದಾರೆ.
ಇದನ್ನೂ ಓದಿ:
ರೋಹಿತ್ ಯಾದವ್ ಮೇಲೆ ನಿರೀಕ್ಷೆ
ನೀರಜ್ ನ ಅನುಪಸ್ಥಿತಿಯಲ್ಲಿ ಭಾರತದ ಜಾವೆಲಿನ್ ಪದಕದ ನಿರೀಕ್ಷೆ ರೋಹಿತ್ ಯಾದವ್ ಮೇಲೆ ಹೆಚ್ಚಾಗಿದೆ. ಅವರು ಇತ್ತೀಚೆಗೆ 87.68 ಮೀಟರ್ ದೂರ ಎಸೆದು ವೈಯಕ್ತಿಕ ಸಾಧನೆ ಮಾಡಿದ್ದರು. ರೋಹಿತ್, ಭಾರತದ ಸಾರ್ವಕಾಲಿಕ ಎರಡನೇ ಅತ್ಯುತ್ತಮ ಜಾವೆಲಿನ್ ಎಸೆತಗಾರರಾಗಿ ಗುರುತಿಸಿಕೊಂಡಿದ್ದಾರೆ.



