ಅಬ್ಬಬ್ಬಾ! ಕಷ್ಟಪಟ್ಟು ದುಡ್ಡು ಕೊಟ್ಟು, ಆರಾಮಾಗಿ ಫ್ಲೈಟಲ್ಲಿ ಕುಳಿತು ಒಂದು ಒಳ್ಳೆ ಜರ್ನಿ ಮಾಡೋಣ ಅಥವಾ ಕಾಫಿ ಸಿಪ್ ಮಾಡ್ತಾ ವಿಂಡೋದಿಂದ ಮೋಡ ನೋಡ್ಬೇಕು ಅಂದ್ಕೊಳ್ತೀವಿ. ಬೋರ್ಡಿಂಗ್ ಆಗಿ ಸೀಟಲ್ಲಿ ಕೂತ್ಕೊಳೋ ಅಷ್ಟರಲ್ಲಿ, ಎಲ್ಲೋ ಹಿಂದಿನ ಸೀಟಿಂದ ಅಥವಾ ಪಕ್ಕದ ಸೀಟಿಂದ ‘ಊಆಆಆಆ…’ ಅಂತ ಸೌಂಡ್ ಸ್ಟಾರ್ಟ್ ಆಗುತ್ತೆ!

ಅಷ್ಟೇ, ಆ ಸೌಂಡ್ ಗೆ ನಮ್ ಮೂಡ್ ಪೂರ್ತಿ ಔಟ್. ‘ಅಯ್ಯೋ ದೇವ್ರೇ, ಇಡೀ ಜರ್ನಿ ಮುಗಿಯೋವರೆಗೂ ಈ ಮಗು ಹೀಗೇ ಅಳುತ್ತಾ? ನನ್ನ ನಿದ್ದೆ ಕಥೆ ಮುಗೀತಾ?’ ಅಂತ ನಮಗೆ ಒಳಗೊಳಗೇ ಕಿರಿಕಿರಿ ಶುರುವಾಗುತ್ತೆ. ಆದ್ರೆ, ಸ್ವಲ್ಪ ಕೂಲ್ ಆಗಿ ಥಿಂಕ್ ಮಾಡಿ. ಅಳೋ ಮಗುವಿನ ಜೊತೆ ಫ್ಲೈಟಲ್ಲಿ ಸಿಕ್ಕಾಬಿದ್ದಾಗ ಆ ಸಿಚುವೇಷನ್ ಹೇಗೆ ಹ್ಯಾಂಡಲ್ ಮಾಡೋದು ಅಂತ ಮೊದ್ಲು ತಿಳ್ಕೊಳ್ಳಿ..
ಸ್ವಲ್ಪ ತಾಳ್ಮೆ ಇರ್ಲಿ
ಯೋಚನೆ ಮಾಡಿ, ಫ್ಲೈಟ್ ಟೇಕಾಫ್ ಆಗುವಾಗ ಅಥವಾ ಲ್ಯಾಂಡಿಂಗ್ ಆಗುವಾಗ ನಮಗೇ ಕಿವಿ ಪಟಪಟ ಅಂತ ಮುಚ್ಚಿಕೊಳ್ಳುತ್ತೆ, ನಮಗೇ ಕಿರಿಕಿರಿ ಅನಿಸುತ್ತೆ. ಇನ್ನು ಪುಟ್ಟ ಮಗುವಿಗೆ ಆ ಗಾಳಿಯ ಪ್ರೆಷರ್ ತಡೆದುಕೊಳ್ಳೋಕೆ ಆಗುತ್ತಾ? ಅದಕ್ಕೆ ಕಿವಿಯಲ್ಲಿ ನೋವು ಬಂದು ಅಳುತ್ತಿರುತ್ತೆ ಹೊರತು, ನಿಮ್ಗೆ ಕಾಟ ಕೊಡ್ಬೇಕು ಅಂತ ಅಲ್ಲ. ಅದೂ ಅಲ್ಲದೆ, ಆ ಮಗುವಿನ ಅಮ್ಮ-ಅಪ್ಪನಿಗಂತೂ ನಿಮಗಿಂತ ಹತ್ತು ಪಟ್ಟು ಜಾಸ್ತಿ ಮುಜುಗರ ಮತ್ತೆ ಟೆನ್ಷನ್ ಇರುತ್ತೆ. ‘ಅಯ್ಯೋ, ಸುತ್ತಮುತ್ತ ಇರೋರೆಲ್ಲ ನಮ್ಮನ್ನೇ ನೋಡ್ತಿದ್ದಾರಲ್ಲ’ ಅಂತ ಅನ್ಕೋತಿರ್ತಾರೆ. ಸೋ, ಫಸ್ಟ್ ಅವ್ರ ಕಡೆ ಕೋಪದ ಲುಕ್ ಕೊಡೋದನ್ನ ಸ್ಟಾಪ್ ಮಾಡಿ.

ನಾಯ್ಸ್ ಕ್ಯಾನ್ಸಲೇಶನ್ ಇಯರ್ಫೋನ್ಸ್
ಫ್ಲೈಟ್ನಲ್ಲಿ ಟ್ರಾವೆಲ್ ಮಾಡೋವಾಗ ಯಾವಾಗಲೂ ನಿಮ್ ಹತ್ರ ಒಂದು ಒಳ್ಳೆ ನಾಯ್ಸ್ ಕ್ಯಾನ್ಸಲೇಶನ್ ಹೆಡ್ಫೋನ್ ಅಥವಾ ಕೇವಲ ಇಯರ್ಪ್ಲಗ್ಸ್ ಇಟ್ಕೊಳ್ಳಿ. ಮಗು ಅಳೋಕೆ ಶುರು ಮಾಡಿದ ತಕ್ಷಣ ಸೌಂಡ್ ಪ್ರೂಫ್ ಮೋಡ್ ಆನ್ ಮಾಡಿ, ನಿಮಗಿಷ್ಟವಾದ ಪಾಡ್ಕ್ಯಾಸ್ಟ್ ಅಥವಾ ಒಳ್ಳೆ ಮ್ಯೂಸಿಕ್ ಹಾಕೊಂಡು ಕಣ್ಣು ಮುಚ್ಚಿಬಿಡಿ. ಮಗು ಅಳೋದನ್ನ ನಿಲ್ಲಿಸೋಕೆ ನಿಮ್ ಕೈಯಲ್ಲಿ ಆಗಲ್ಲ, ಆದ್ರೆ ಆ ಸೌಂಡ್ ನಿಮ್ಮ ಕಿವಿಗೆ ಬೀಳದಂತೆ ಮಾಡ್ಕೊಳ್ಳೋಕೆ ಖಂಡಿತ ಸಾಧ್ಯ.

ಒಂದ್ ಸ್ಮೈಲ್ ಕೊಡಿ
ಆ ಮಗುವಿನ ಪೋಷಕರನ್ನ ಒಮ್ಮೆ ನೋಡಿ ಸಿಂಪಲ್ ಆಗಿ ಒಂದು ಸ್ಮೈಲ್ ಕೊಡಿ. ‘ಇಟ್ಸ್ ಓಕೆ, ನನಗೇನು ತೊಂದರೆ ಇಲ್ಲ’ ಅನ್ನೋ ತರ ಒಂದು ಸೈನ್ ಕೊಡಿ. ನಿಮ್ಮ ಆ ಒಂದು ಸಣ್ಣ ನಗೆ ಅವರ ತಲೆಯಲ್ಲಿರೋ ಬೆಟ್ಟದಷ್ಟು ಪ್ರೆಷರ್ ಕಮ್ಮಿ ಮಾಡುತ್ತೆ. ಕೆಲವೊಮ್ಮೆ, ಮಗು ನಿಮ್ ಕಡೆ ನೋಡ್ತಿದ್ರೆ, ಏನಾದ್ರೂ ಫನ್ನಿ ಫೇಸ್ ಮಾಡಿ ಮಗು ಗಮನ ಬೇರೆ ಕಡೆ ಸೆಳೆಯೋಕೆ ಟ್ರೈ ಮಾಡಿ. ಮಗು ನಕ್ಕರೆ ನಿಮ್ ಜರ್ನಿಯೇ ಸೂಪರ್.

ಕ್ಯಾಬಿನ್ ಕ್ರೂ ಹೆಲ್ಪ್
ತೀರಾ ತಡೆದುಕೊಳ್ಳೋಕೆ ಆಗ್ತಿಲ್ವಾ? ಗಾಬರಿ ಬೇಡ. ಕ್ಯಾಬಿನ್ ಕ್ರೂ ಹತ್ರ ಹೋಗಿ ವಿಷಯ ಹೇಳಿ. ಖಾಲಿ ಸೀಟ್ ಏನಾದ್ರೂ ಬೇರೆ ಕಡೆ ಇದ್ರೆ, ಬೇರೆ ಸೀಟ್ಗೆ ಶಿಫ್ಟ್ ಮಾಡ್ತೀರಾ? ಅಂತ ಕೇಳಿ. ಖಂಡಿತ ಹೆಲ್ಪ್ ಮಾಡ್ತಾರೆ. ಅದನ್ನ ಬಿಟ್ಟು ಅಲ್ಲೇ ಕೂತು ಗೊಣಗೋದು, ಪೋಷಕರ ಜೊತೆ ಜಗಳಕ್ಕೆ ಹೋಗೋದು ಸರಿ ಬರಲ್ಲ.

ಮೈಂಡ್ ಡೈವರ್ಟ್
ಫೋನ್ನಲ್ಲಿ ಯಾವುದಾದರೂ ಒಳ್ಳೆ ಸಿನಿಮಾ ಡೌನ್ಲೋಡ್ ಮಾಡಿಟ್ಟುಕೊಂಡಿದ್ದರೆ ನೋಡೋಕೆ ಶುರು ಮಾಡಿ. ಇಲ್ಲವೇ ಯಾವುದಾದರೂ ಪುಸ್ತಕ ಓದಿ, ಗೇಮ್ಸ್ ಆಡಿ. ತಲೆಯನ್ನು ಬೇರೆ ಕಡೆ ಡೈವರ್ಟ್ ಮಾಡಿದರೆ ಆ ಸೌಂಡ್ ನಿಮ್ಮನ್ನು ಅಷ್ಟಾಗಿ ಡಿಸ್ಟರ್ಬ್ ಮಾಡಲ್ಲ.
ಒಟ್ಟಿನಲ್ಲಿ, ವಿಮಾನದ ಪ್ರಯಾಣ ಅಂದ್ಮೇಲೆ ಎಲ್ಲವೂ ನಮ್ ಇಷ್ಟದಂತೆಯೇ ಇರೋಕೆ ಸಾಧ್ಯವಿಲ್ಲ. ಸಣ್ಣಪುಟ್ಟ ಕಿರಿಕಿರಿಗಳನ್ನ ಲೈಟಾಗಿ ತಗೊಂಡು, ಕೂಲ್ ಆಗಿದ್ರೆ ಜರ್ನಿ ಸೂಪರ್ ಆಗಿರುತ್ತೆ!



