ಹೊಸದಿಗಂತ ವರದಿ ಭಟ್ಕಳ:
ಕಾನೂನು ಬಾಹಿರವಾಗಿ ಮಾದಕ ಪದಾರ್ಥ ಗಾಂಜಾ ಮಾರಾಟ ಮಾಡುತ್ತಿದ್ದ ಸಂದರ್ಭದಲ್ಲಿ ಭಟ್ಕಳ ನಗರ ಠಾಣೆಯ ಪೊಲೀಸರು ದಾಳಿ ನಡೆಸಿ ಮೂವರನ್ನು ಬಂಧಿಸಿದ್ಧಾರೆ.
ಭಟ್ಕಳ ನಿವಾಸಿಗಳಾದ ಮಹಮ್ಮದ್ ಸಿಮ್ರನ್(29) ಮೊಹಮ್ಮದ್ ಅಖೀಲ್(25) ಮಹಮ್ಮದ್ ಇಮ್ರಾನ್(25)ಬಂಧಿತ ಆರೋಪಿಗಳಾಗಿದ್ದಾರೆ.
ಬಂಧಿತರಿಂದ ಸುಮಾರು 10 ಸಾವಿರ ಮೌಲ್ಯದ 146 ಗ್ರಾಂ ಗಾಂಜಾ ಮತ್ತು ಸಾಗಾಟಕ್ಕೆ ಬಳಸಿದ ಹೀರೋ ಹೊಂಡಾ ಪ್ಯಾಶನ್ ಪ್ಲಸ್, ಹೊಂಡಾ 125 ಮತ್ತು ಸುಜುಕಿ ಬೈಕುಗಳನ್ನು ವಶಕ್ಕೆ ಪಡೆದಿದ್ದಾರೆ.
ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು ನ್ಯಾಯಾಂಗ ಬಂಧನ ವಿಧಿಸಲಾಗಿದೆ.



