August 31, 2026
Monday, August 31, 2026
spot_img

‘ಭೂ ಗ್ಯಾರಂಟಿ’ಗೆ ರಾಜ್ಯವ್ಯಾಪಿ ವಿಸ್ತರಣೆ: ಭೂಮಾಲೀಕರಿಗೆ ಸಿಎಂ ಡಿಕೆಶಿ ಭರವಸೆ

ಹೊಸದಿಗಂತ ಡಿಜಿಟಲ್ ಡೆಸ್ಕ್:

ರಾಜ್ಯ ಸರ್ಕಾರದ ಆರನೇ ಗ್ಯಾರಂಟಿ ‘ಭೂ ಗ್ಯಾರಂಟಿ’ ಯೋಜನೆಯನ್ನು ಇಡೀ ರಾಜ್ಯಕ್ಕೆ ವಿಸ್ತರಿಸುವುದಾಗಿ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹೇಳಿದ್ದಾರೆ.

ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷರೊಂದಿಗೆ ಸಭೆ ನಡೆಸಿದ ಬಳಿಕ ಮಾತನಾಡಿದ ಅವರು, ರಾಜ್ಯದ ಅಭಿವೃದ್ಧಿಗೆ ಭೂಮಿ ನೀಡುವ ಭೂಮಾಲೀಕರ ಹಿತಕಾಪಾಡುವುದೇ ಸರ್ಕಾರದ ಮುಖ್ಯ ಆದ್ಯತೆಯಾಗಿದೆ ಎಂದು ಹೇಳಿದರು.

ಕಾನೂನುಬದ್ಧವಾಗಿ ಪರಿವರ್ತನೆ

ಭೂಮಾಲೀಕರ ಆಸ್ತಿ ಪೋಡಿ, ‘ಬಿ’ ಖಾತಾದಿಂದ ಕಾನೂನುಬದ್ಧವಾಗಿ ‘ಎ’ ಖಾತಾಗೆ ವರ್ಗಾವಣೆ ಹಾಗೂ ಅಧಿಕೃತ ದಾಖಲೆ ನೀಡುವ ಪ್ರಕ್ರಿಯೆಗೆ ಆದ್ಯತೆ ನೀಡಲಾಗುವುದು ಎಂದರು. ಯಾವುದೇ ಬೋಗಸ್ ನೋಂದಣಿಗೆ ಅವಕಾಶ ಇಲ್ಲಿ ಇಲ್ಲ ಎಂದು ಸ್ಪಷ್ಟಪಡಿಸಿದರು.

ಕೆಪಿಎಸ್‌ಸಿ ತನಿಖೆಯಲ್ಲಿ ಹಸ್ತಕ್ಷೇಪವಿಲ್ಲ

ಕೆಪಿಎಸ್‌ಸಿ ಬಂಧನದ ಕುರಿತು ಮಾತನಾಡಿ, ಈ ತನಿಖೆಯಲ್ಲಿ ಸರ್ಕಾರ ಯಾವುದೇ ಹಸ್ತಕ್ಷೇಪ ಮಾಡುವುದಿಲ್ಲ ಎಂದ ಅವರು, ಸಂಪೂರ್ಣ ವರದಿ ಬರುವವರೆಗೆ ಹೆಚ್ಚಿನ ಮಾಹಿತಿ ಬಹಿರಂಗಪಡಿಸಲು ಸಾಧ್ಯವಿಲ್ಲ ಎಂದು ಹೇಳಿದರು.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !
Skip to toolbar