ಬದುಕಿನಲ್ಲಿ ಪ್ರತಿಯೊಬ್ಬರಿಗೂ ಒಂದಲ್ಲ ಒಂದು ಬಾರಿ ಈ ಥಾಟ್ ಬಂದೇ ಇರುತ್ತೆ “ನಾನು ಯಾರಿಗೂ ಕೆಟ್ಟದ್ದು ಬಯಸಿಲ್ಲ, ನನ್ನ ಕೆಲಸ ನಾನು ನೀಟಾಗಿ ಮಾಡ್ತಿದ್ದೀನಿ, ಆದ್ರೂ ನನಗೆ ಯಾಕೆ ಈ ರೇಂಜ್ ಪರೀಕ್ಷೆ? ನಾನು ರೈಟ್ ಇದ್ದರೂ ಈ ಟೈಮ್ ಯಾಕೆ ನನ್ನ ಜೊತೆ ಇಲ್ಲ? ಅಂತ.
ಬೆಳಗ್ಗೆಯಿಂದ ಸಂಜೆವರೆಗೆ ಕಷ್ಟಪಟ್ಟು ದುಡಿಯೋ ಸಾಮಾನ್ಯ ಮನುಷ್ಯನಿಂದ ಹಿಡಿದು ದೊಡ್ಡ ಮಟ್ಟದ ಕನಸು ಕಾಣೋ ಪ್ರತಿಯೊಬ್ಬರಿಗೂ ಈ ಪ್ರಶ್ನೆ ಕಾಡೋದು ತೀರಾ ಸಹಜ. ಆದರೆ, ಈ ‘ಬ್ಯಾಡ್ ಟೈಮ್’ ಅನ್ನೋದರ ಹಿಂದೆ ನಮಗರಿವಿಲ್ಲದ ಕೆಲವು ಲೈಫ್ ಲೆಸನ್ಸ್ ಅಡಗಿರುತ್ತವೆ.

ನಮ್ಮ ಕೈಯಲ್ಲಿ ಇರೋದು ಪ್ರಯತ್ನ, ರಿಸಲ್ಟ್ ಅಲ್ಲ
ನಾವು ರಸ್ತೆಯಲ್ಲಿ ಎಷ್ಟು ಮುಂಜಾಗ್ರತೆಯಿಂದ, ಟ್ರಾಫಿಕ್ ರೂಲ್ಸ್ ಫಾಲೋ ಮಾಡಿಕೊಂಡು ಗಾಡಿ ಓಡಿಸಿದರೂ, ಎದುರುಗಡೆಯಿಂದ ಬರೋನು ತಪ್ಪು ಮಾಡಿದರೆ ಆಕ್ಸಿಡೆಂಟ್ ಆಗೇ ಆಗುತ್ತೆ ಅಲ್ವಾ? ಬದುಕು ಕೂಡ ಹಾಗೇ. ನಾವು ಸರಿಯಾಗಿ ಇರೋದು ನಮ್ಮ ಕಂಟ್ರೋಲ್ನಲ್ಲಿರೋ ವಿಷಯ. ಆದರೆ ನಮಗಿಷ್ಟ ಬಂದ ತಕ್ಷಣ ರಿಸಲ್ಟ್ ಸಿಗಬೇಕು ಅನ್ನೋದು ನಮ್ಮ ಕೈಯಲ್ಲಿರಲ್ಲ.

ನಾವು ಸ್ಟ್ರಾಂಗ್ ಆಗೋಕೆ ಸಿಗೋ ಬ್ರೇಕ್
ನಿಮ್ಮ ಜೀವನದಲ್ಲಿ ಎಲ್ಲವೂ ಸ್ಮೂತ್ ಆಗಿ ಹೋಗ್ತಿದ್ದರೆ ನಿಮಗೆ ನಿಮ್ಮ ನಿಜವಾದ ಕೆಪಾಸಿಟಿ ಗೊತ್ತಾಗಲ್ಲ. ಟೈಮ್ ನಮಗೆ ಸಾಥ್ ಕೊಡ್ತಿಲ್ಲ ಅಂದಾಗ ನಮಗೆ ಕೋಪ, ಬೇಸರ ಬರುತ್ತೆ, ಆದರೆ ಇವೆಲ್ಲವೂ ನಮ್ಮನ್ನು ಒಳಗಿನಿಂದ ಗಟ್ಟಿ ಮಾಡುತ್ತವೆ. ಕೆಟ್ಟ ಸಮಯ ಅನ್ನೋದು ನಮ್ಮನ್ನು ಹಾಳು ಮಾಡೋಕೆ ಬರಲ್ಲ, ಬದಲಿಗೆ ನಮ್ಮಲ್ಲೊಬ್ಬ ಗ್ರೇಟ್ ಲೀಡರ್ನನ್ನು ಹೊರಗೆ ತೆಗೆಯೋಕೆ ಬರುತ್ತೆ.
ಟೈಮ್ ಲೆಕ್ಕಾಚಾರ ಬೇರೆ, ನಮ್ ಲೆಕ್ಕಾಚಾರ ಬೇರೆ
ನಾವು ಅಂದುಕೊಂಡ ತಕ್ಷಣ ಎಲ್ಲವೂ ಆಗಿಬಿಡಬೇಕು ಅಂತ ಆಸೆಪಡ್ತೀವಿ. ಆದರೆ ಪ್ರಕೃತಿಗೆ ತನ್ನದೇ ಆದ ಒಂದು ಟೈಮಿಂಗ್ ಇರುತ್ತೆ. ಮಾವಿನ ಮರ ನೆಟ್ಟ ತಕ್ಷಣ ಮರುದಿನವೇ ಹಣ್ಣು ಸಿಗಲ್ಲವಲ್ಲ? ಅದಕ್ಕೆ ತನ್ನದೇ ಆದ ಸೀಸನ್ ಬರಬೇಕು. ನೀವು ಬಿತ್ತಿರೋ ಒಳ್ಳೆತನ, ಕಷ್ಟಪಡೋ ಗುಣಕ್ಕೆ ಖಂಡಿತ ಫಲ ಸಿಗುತ್ತೆ, ಆದರೆ ಅದು ಆ ಸೀಸನ್ ಬಂದಾಗ ಮಾತ್ರ.

ಫೈನಲ್ ಆಗಿ ರೈಟ್ ಟ್ರ್ಯಾಕ್ಗೆ ಹೋಗೋದು
ಕೆಲವೊಮ್ಮೆ ಟೈಮ್ ನಮಗೆ ಸಾಥ್ ಕೊಡ್ತಿಲ್ಲ ಅಂದರೆ, ನಾವು ಹೋಗ್ತಿರೋ ದಾರಿ ನಮಗೆ ಒಳ್ಳೆಯದಲ್ಲ ಅಂತ ಅರ್ಥ. ನಮಗೆ ಆ ಕ್ಷಣಕ್ಕೆ ಅದು ಸರಿ ಅನಿಸಬಹುದು, ಆದರೆ ಲಾಂಗ್ ಟರ್ಮ್ನಲ್ಲಿ ಅದು ನಮಗೆ ತೊಂದರೆ ಕೊಡಬಹುದು. ಆದ್ದರಿಂದಲೇ ಟೈಮ್ ಬ್ರೇಕ್ ಹಾಕಿ, ನಮ್ಮನ್ನು ಬೇರೆ ದಾರಿಗೆ ತಿರುಗಿಸುತ್ತೆ. ಇದನ್ನು ‘ಬ್ಯಾಡ್ ಲಕ್’ ಅನ್ನೋ ಬದಲು ‘ರಿಡೈರೆಕ್ಷನ್’ ಅಂತ ನೋಡೋಕೆ ಶುರು ಮಾಡಿ.
ನೆನಪಿರಲಿ.. ರಾತ್ರಿ ಎಷ್ಟು ಕತ್ತಲಾಗಿದೆಯೋ, ಬೆಳಗಿನ ಬೆಳಕು ಅಷ್ಟೇ ಹತ್ತಿರದಲ್ಲಿದೆ ಅಂತ ಅರ್ಥ. ನೀವು ಸರಿಯಾಗಿದ್ದರೆ, ನಿಮ್ಮ ಪ್ರಾಮಾಣಿಕತೆ ನಿಜವಾಗಿದ್ದರೆ, ಈ ‘ಬ್ಯಾಡ್ ಟೈಮ್’ ಖಂಡಿತ ಶಾಶ್ವತ ಅಲ್ಲ. ಇವತ್ತು ಟೈಮ್ ನಿಮ್ಮ ಜೊತೆ ಇಲ್ಲದಿರಬಹುದು, ಆದರೆ ನೀವು ಪ್ರಯತ್ನ ಬಿಡದೆ ನಿಂತರೆ, ನಾಳೆ ಅದೇ ಟೈಮ್ ನಿಮ್ಮ ಹಿಂದೆ ಸಾಲಾಗಿ ನಿಲ್ಲುತ್ತೆ!



