ನೋಡೋದಕ್ಕೆ ಕೆಂಪು ಬಣ್ಣ, ರುಚಿನೂ ಸೂಪರ್, ಆರೋಗ್ಯಕ್ಕೂ ಬೆಸ್ಟ್ ಆಗಿರೋ ಒಂದು ಟೀ ಅಂದ್ರೆ ಅದು ದಾಸವಾಳದ ಟೀ. ಆ್ಯಂಟಿಆಕ್ಸಿಡೆಂಟ್ಗಳಿಂದ ಸಮೃದ್ಧವಾಗಿರುವ ಈ ಟೀ ಹೃದಯದ ಆರೋಗ್ಯ, ರಕ್ತದೊತ್ತಡ ಹಾಗೂ ದೇಹದ ಒಟ್ಟಾರೆ ಆರೋಗ್ಯಕ್ಕೆ ಬೆಸ್ಟ್.
ಬೇಕಾಗುವ ಸಾಮಗ್ರಿಗಳು
ಒಣಗಿಸಿದ ದಾಸವಾಳದ ಹೂವು: 1–2 ಟೀ ಸ್ಪೂನ್ ಗಾಢವಾದ ಟೀ ಬೇಕಿದ್ದರೆ 1–2 ಟೇಬಲ್ ಸ್ಪೂನ್ ಹಾಕಬಹುದು.
ನೀರು: 1 ಕಪ್
ನಿಮಗೆ ಸಿಹಿಯಾಗಿರಬೇಕು ಅಂದ್ರೆ ರುಚಿಗೆ ತಕ್ಕಷ್ಟು ಜೇನುತುಪ್ಪ, ಸಕ್ಕರೆ ಹಾಕಿಕೊಳ್ಳಿ
ರುಚಿಗಾಗಿ: ಸ್ವಲ್ಪ ನಿಂಬೆ ರಸ, ಅಥವಾ ದಾಲ್ಚಿನ್ನಿ ಪುಡಿ
ಮಾಡೋದು ಹೇಗೆ?
ಒಂದು ಕಪ್ ಟೀ ಬೇಕಿದ್ರೆ ಒಂದು ಪಾತ್ರೆಯಲ್ಲಿ ಒಂದು ಕಪ್ ನೀರು ಹಾಕಿ ಕುದಿಸಿ, ಅದಕ್ಕೆ 1–2 ಟೀ ಸ್ಪೂನ್ ಒಣಗಿಸಿದ ದಾಸವಾಳದ ಹೂವುಗಳನ್ನು ಹಾಕಿ ಸ್ಟೌವ್ ಆಫ್ ಮಾಡಿ, ಪಾತ್ರೆಯನ್ನು ಮುಚ್ಚಿ ಸುಮಾರು 5–10 ನಿಮಿಷ ಬಿಡಿ.
ಈಗ ಟೀಯನ್ನು ಸೋಸಿ ಸ್ವಲ್ಪ ನಿಂಬೆ ರಸ ಅಥವಾ ದಾಲ್ಚಿನ್ನಿ ಸೇರಿಸಿ. ಸಿಹಿ ಬೇಕಿದ್ದರೆ ಸ್ವಲ್ಪ ಜೇನುತುಪ್ಪ ಸೇರಿಸಿ. ಬಿಸಿಯಾಗಿಯೇ ಕುಡಿಯಬಹುದು ಅಥವಾ ತಣ್ಣಗಾಗಿಸಿ ಐಸ್ ಸೇರಿಸಿ iced hibiscus tea ಆಗಿಯೂ ಕುಡಿಯಬಹುದು.
ಆರೋಗ್ಯಕ್ಕೆ ಏನ್ ಲಾಭ
ಈ ಟೀ ಕುಡಿಯೋದ್ರಿಂದ ಕೆಲವು ಜನರಲ್ಲಿ ರಕ್ತದೊತ್ತಡವನ್ನು ಸ್ವಲ್ಪ ಮಟ್ಟಿಗೆ ಕಡಿಮೆ ಮಾಡಲು ಸಹಾಯ ಮಾಡಬಹುದು.
ಸಕ್ಕರೆ ಅಥವಾ ಜೇನುತುಪ್ಪ ಹಾಕದೆ ಕುಡಿದರೆ ಇದೊಂದು ಬೆಸ್ಟ್ ಕಡಿಮೆ ಕ್ಯಾಲೊರಿಯ ಪಾನೀಯವಾಗಬಹುದು.
ಇದರಲ್ಲಿರುವ ಆ್ಯಂಟಿಆಕ್ಸಿಡೆಂಟ್ಗಳು ದೇಹದ ಕೋಶಗಳನ್ನು ಒತ್ತಡದಿಂದ ರಕ್ಷಿಸಲು ಸಹಾಯ ಮಾಡುತ್ತೆ.



