September 1, 2026
Tuesday, September 1, 2026
spot_img

ಬಿಜೆಪಿ ಪಾದಯಾತ್ರೆ ಚುನಾವಣೆಗಲ್ಲ, ಸರ್ಕಾರದ ಭ್ರಷ್ಟಾಚಾರದ ವಿರುದ್ಧ: ಎನ್.ರವಿಕುಮಾರ್

ಹೊಸದಿಗಂತ ವರದಿ ರಾಯಚೂರು:

ಭಾರತೀಯ ಜನತಾ ಪಕ್ಷ ಕೈಗೊಂಡಿರುವ ಪಾದಯಾತ್ರೆ ಮುಂಬರುವ ಚುನಾವಣೆ ದೃಷ್ಟಿಯಿಂದ ಅಲ್ಲ. ಬದಲಿಗೆ ಈ ಸರ್ಕಾರದ ಭ್ರಷ್ಟಾಚಾರ, ಆಡಲಿತ ವೈಫಲ್ಯ ಜನತೆಗೆ ತಿಳಿಸುವುದಾಗಿದೆ ಎಂದು ವಿ.ಪ ಸದಸ್ಯ ಎನ್.ರವಿಕುಮಾರ ಹೇಳಿದರು.

 ಮಂಗಳವಾರ ಜಿಲ್ಲೆಯ ಲಿಂಗಸುಗೂರು ಪಟ್ಟಣದಿಂದ ಬಳ್ಳಾರಿಗೆ ಆಯೋಜಿಸಿದ್ದ ಪಾದಯಾತ್ರೆಯ ಉದ್ಘಾಟನಾ ಕಾರ್ಯಕ್ರಮದಲ್ಲಿ ಮಾತನಾಡಿ. ಈ ಸರ್ಕಾರ ಆಡಳಿತವನ್ನು ಹೇಗೆ ಮಾಡುತ್ತಿದೆ ಎನ್ನುವುದು ಯಾರಿಗೂ ತಿಳಿಯುತ್ತಿಲ್ಲ. ಆದರೆ ಚನ್ನಾಗಿ ತಿನ್ನುತ್ತಿದೆ ಎನ್ನುವುದು ಜನತೆಗೆ ಗೊತ್ತಾಗುತ್ತಿದೆ ಎಂದರು.

ಇದನ್ನೂ ಓದಿ:

 ಈ ಸರ್ಕಾರ ಕಸದ ಮೇಲೆ, ಕಾರ್ ಹೊರಗಡೆ ನಿಲ್ಲಿಸಿದರೂ ಟ್ಯಾಕ್ಸ್ ಹಾಕುತ್ತಿದೆ. ಮಹಿಳಾ ವಿರೋಧಿ ಸರ್ಕಾರ. ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದರೆ ಮಳೆ ಬರುತ್ತಿತ್ತು. ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದಾಗ ಬರಗಾಲ. ಪ್ರಸಕ್ತ ಇಡೀ ರಾಜ್ಯದಲ್ಲಿ ಬರಗಾಲವಿದೆ, ಬೆಳಗಾವಿ, ಹಾವೇರಿ, ಯಾದಗಿರಿ ಜಿಲ್ಲೆಗಳಲ್ಲಿ ಬರವಿಲ್ಲ ಎಂದು ಸರ್ಕಾರ ಹೇಳಿದೆ. ಗದಗ ಜಿಲ್ಲೆಯಲ್ಲಿ ಒಂದು ತಾಲೂಕನ್ನು ಹೊರತುಪಡಿಸಿ ಬೇರೆ ತಾಲೂಕಿನಲ್ಲಿ ಬರವಿಲ್ಲವಂತೆ. ಧಾರವಾಡ, ಬಳ್ಳಾರಿ ಜಿಲ್ಲೆಯಲ್ಲಿ ಬಹುತೇಕ ತಾಲೂಕುಗಳಲ್ಲಿ ಬರ ಇಲ್ಲ ಎಂದು ಹೇಳುತ್ತಿದೆ ಈ ಸರ್ಕಾರ. ಇದು ನಾಚಿಕೆಗೇಡಿ ಹೇಳಿಕೆಯಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಆದರೆ, ಈ ಎಲ್ಲ ಬಹುತೇಕ ಜಿಲ್ಲೆಗಳಲ್ಲಿನ ಜನತೆಯು ಬದುಕು ಸಾಗಿಸುವುದು ದುಸ್ತರವಾಗಿರುವ ಹಿಲ್ಲೆಯಲ್ಲಿ ಬದುಕು ಕಟ್ಟಿಕೊಳ್ಳಲು ಕೆಲಸ ಅರಸುತ್ತ ಗುಳೆ ಹೊರಟಿದ್ದಾರೆ ಆದರೂ ಸರ್ಕಾರ ಈ ಬಡ ಜನತೆಯ ಕುರಿತು ಕಿಂಚಿತ್ತೂ ಕರುಣೆ ತೋರಿಸುತ್ತಿಲ್ಲ ಎಂದು ಹೇಳಿದರು.

 ವೇದಿಕೆಯಲ್ಲಿ ಬಿಜೆಪಿ ರಾಜ್ಯಾಧ್ಯಜ್ಷ ಬಿ.ವೈ.ವಿಜಯೇಂದ್ರ, ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ರಾಜ್ಯ ಉಸ್ತುವಾರಿ ಸುಧಾಕರ ರಡ್ಡಿ, ಮಾಜಿ ಮುಖ್ಯಮಂತ್ರಿಗಳಾದ ಬಸವರಾಜ ಬೊಮ್ಮಾಯಿ, ಜಗದೀಶ ಶೆಟ್ಟರ, ಬಿ.ಸಿ.ಪಾಟೀಲ ಸೇರಿದಂತೆ ಅನೇಕರಿದ್ದರು.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !