ಹೊಸದಿಗಂತ ಡಿಜಿಟಲ್ ಡೆಸ್ಕ್:
ಪಂಜಾಬ್ನ ಕರಡು ಮತದಾರರ ಪಟ್ಟಿಯಲ್ಲಿ ರಾಜ್ಯಸಭಾ ಸಂಸದ ರಾಘವ್ ಚಡ್ಡಾ ಹೆಸರು ಡಿಲೀಟ್ ಆಗಿದೆ.
ಹೌದು, ಚುನಾವಣಾ ಆಯೋಗದ ವಿಶೇಷ ತೀವ್ರ ಪರಿಷ್ಕರಣೆ ಅಡಿಯಲ್ಲಿ ಸಿದ್ಧವಾಗಿರುವ ಪಂಜಾಬ್ ಕರಡು ಮತದಾರರ ಪಟ್ಟಿಯಿಂದ ರಾಘವ್ ಚಡ್ಡಾ ಅವರ ಹೆಸರನ್ನು ಕೈಬಿಡಲಾಗಿದೆ. ಇದಕ್ಕೆ ರಾಘವ್ ಚಡ್ಡಾ ಪ್ರತಿಕ್ರಿಯೆ ನೀಡಿದ್ದು, ತೀರಾ ಈ ಮಟ್ಟಕ್ಕೆ ಇಳಿಯಬಾರದು. ಇದು ಎಎಪಿಯ ರಾಜಕೀಯ ಸೇಡು ಎಂದಿದ್ದಾರೆ.
ಮತದಾರರ ಪಟ್ಟಿಯಲ್ಲಿ ರಾಘವ್ ಚಡ್ಡಾ ಪರ್ಮನೆಂಟ್ಲಿ ಶಿಫ್ಟೆಡ್ ಎಂದು ಮಾರ್ಕ್ ಮಾಡಿದ್ದು, ಶಾಶ್ವತವಾಗಿ ಶಿಫ್ಟ್ ಆಗಿದ್ದಾರೆ ಎಂದು ಗುರುತಿಸಲಾಗಿದೆ. ಈ ಕೆಲಸವನ್ನು ಎಎಪಿ ಮಾಡಿದೆ. ನಾನು 2022ರಲ್ಲಿ ಪಂಜಾಬ್ನಿಂದ ಎಎಪಿ ರಾಜ್ಯಸಭಾ ಸಂಸದರಾಗಿ ಆಯ್ಕೆಯಾಗಿದ್ದೆ. ಇತ್ತೀಚೆಗಷ್ಟೇ ಬಿಜೆಪಿ ಸೇರ್ಪಡೆ ಆಗಿದ್ದೆ. ಹೀಗಾಗಿ ರಾಜಕೀಯ ದ್ವೇಷದಿಂದ ಎಎಪಿ ನನ್ನ ಹೆಸರನ್ನು ಡಿಲೀಟ್ ಮಾಡಿಸಿದೆ ಎಂದು ಹೇಳಿದ್ದಾರೆ.
ಈ ಬೆಳವಣಿಗೆಗೆ ಪ್ರತಿಕ್ರಿಯಿಸಿದ ಚಡ್ಡಾ, ತಮ್ಮ ಮತದಾರರ ಗುರುತಿನ ಚೀಟಿಯನ್ನು ಮೊಹಾಲಿಯಲ್ಲಿ ನೋಂದಾಯಿಸಲಾಗಿದೆ. ತಮ್ಮನ್ನು ‘ಸ್ಥಳಾಂತರಿಸಲಾಗಿದೆ’ ಎಂದು ಏಕೆ ವರ್ಗೀಕರಿಸಲಾಗಿದೆ? ಇದು ಕೇವಲ ಗುಮಾಸ್ತರ ತಪ್ಪಿನಂತೆ ಕಾಣುತ್ತಿಲ್ಲ. ಇದು ರಾಜಕೀಯ ಸೇಡಿನಿಂದ ಕೂಡಿದೆ. ಪಕ್ಷವನ್ನು ತೊರೆದವರ ವಿರುದ್ಧ ಎಎಪಿ ಸರ್ಕಾರ ಅಧಿಕಾರಿಗಳನ್ನು ಬಳಸಿ ಹೆಸರು ಡಿಲೀಟ್ ಮಾಡಿದೆ ಎಂದಿದ್ದಾರೆ.



