Sunday, September 14, 2025

ತೆಪ್ಪ ಮಗುಚಿ ಯುವಕ ನೀರುಪಾಲು: 40 ಅಡಿ ಆಳದಲ್ಲಿ ಮೃತದೇಹ ಪತ್ತೆ, ಇಬ್ಬರು ಯುವಕರು ಪಾರು

ಹೊಸದಿಗಂತ ಡಿಜಿಟಲ್ ಡೆಸ್ಕ್:

ಹೊಳೆ ದಾಟುವಾಗ ತೆಪ್ಪ ಮಗುಚಿ ಯುವಕ ಸಾವನ್ನಪ್ಪಿದ ಘಟನೆ ಹೊಸನಗರದ ಹೊಸೂರು ಗ್ರಾಪಂ ವ್ಯಾಪ್ತಿಯ ಬಂಟೋಡಿ ಎಂಬಲ್ಲಿ ನಡೆದಿದೆ.

ಮೃತನನ್ನು ಪೂರ್ಣೇಶ್ (22) ಎಂದು ಗುರುತಿಸಲಾಗಿದೆ. ಅದೃಷ್ಟವಶಾತ್ ಜೊತೆಯಲ್ಲಿದ್ದ ಶರತ್ ಮತ್ತು ರಂಜನ್ ಎಂಬ ಯುವಕರು ಪ್ರಾಣಾಪಾಯದಿಂದ ಪಾರಾಗಿದ್ದಾರೆ‌. ಮುಳುಗು ತಜ್ಞ ಈ‍ಶ್ವರ್‌ ಮಲ್ಪೆ ನೇತೃತ್ವದ ತಂಡ ಕಾರ್ಯಾಚರಣೆ ನಡೆಸಿ ಪೂರ್ಣೇಶ್ ಮೃತದೇಹವನ್ನು ಪತ್ತೆ ಮಾಡಿದ್ದಾರೆ. 40 ಅಡಿ ಆಳದ ನೀರಿನಲ್ಲಿ ಯುವಕನ ಮೃತದೇಹ ದೊರೆತಿದೆ.

ಈ ಸಂಬಂಧ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ