September 4, 2026
Friday, September 4, 2026
spot_img

Soup | ಚಳಿ ಚಳಿ ವಾತಾವರಣಕ್ಕೆ ಬಿಸಿ ಬಿಸಿ ಕ್ಯಾಪ್ಸಿಕಂ ಸೂಪ್: ಒಮ್ಮೆ ಟೇಸ್ಟ್ ಮಾಡ್ಲೇಬೇಕು

ರಾತ್ರಿಯ ಊಟ ಎಷ್ಟು ಲೈಟ್ ಆಗಿರುತ್ತೋ ಅಷ್ಟು ಒಳ್ಳೆದು ಅನ್ನೋ ಕ್ಯಾಟಗರಿಯವರು ನಿವಾಗಿದ್ರೆ ಈ ರೆಸಿಪಿ ನಿಮಗೆ ಹೇಳಿ ಮಾಡಿಸಿದ್ದು. ಯಾಕೆ ಅಂದ್ರೆ ಇವತ್ತಿನ ರೆಸಿಪಿ ಇರೋದೇ ಕ್ಯಾಪ್ಸಿಕಂ ಸೂಪ್. ರುಚಿ, ಕಲರ್, ಅರೋಗ್ಯ ಎಲ್ಲದ್ರಲ್ಲೂ ಬೆಸ್ಟ್ ಈ ಸೂಪ್.

ಏನೆಲ್ಲಾ ಬೇಕು?

ಕ್ಯಾಪ್ಸಿಕಂ–1, ಈರುಳ್ಳಿ–1, ಬೆಳ್ಳುಳ್ಳಿ–2 ಎಸಳು, ಟೊಮೆಟೊ–ಅರ್ಧ, ಬೆಣ್ಣೆ ಅಥವಾ ಆಲಿವ್ ಎಣ್ಣೆ–2 ಚಮಚ, ನೀರು–2 ಕಪ್, ಉಪ್ಪು–ರುಚಿಗೆ ತಕ್ಕಷ್ಟು ಹಾಗೂ ಕಾಳುಮೆಣಸಿನ ಪುಡಿ–ಅಗತ್ಯವಿರುವಷ್ಟು.

ಮಾಡುವ ವಿಧಾನ

ಮೊದಲು ಬಾಣಲೆಯಲ್ಲಿ ಬೆಣ್ಣೆ ಅಥವಾ ಎಣ್ಣೆಯನ್ನು ಬಿಸಿ ಮಾಡಿ. ಅದಕ್ಕೆ ಜಜ್ಜಿದ ಬೆಳ್ಳುಳ್ಳಿ ಹಾಗೂ ಸಣ್ಣಗೆ ಹೆಚ್ಚಿದ ಈರುಳ್ಳಿ ಹಾಕಿ ಸಣ್ಣ ಉರಿಯಲ್ಲಿ ಚೆನ್ನಾಗಿ ಬಾಡಿಸಿಕೊಳ್ಳಿ. ನಂತರ ಕತ್ತರಿಸಿದ ಟೊಮೆಟೊ ಮತ್ತು ಕ್ಯಾಪ್ಸಿಕಂ ಸೇರಿಸಿ ಕೆಲವು ನಿಮಿಷಗಳ ಕಾಲ ಹುರಿಯಿರಿ.

ತರಕಾರಿಗಳು ಮೆತ್ತಗಾದ ಬಳಿಕ 2 ಕಪ್ ನೀರು ಹಾಗೂ ರುಚಿಗೆ ತಕ್ಕಷ್ಟು ಉಪ್ಪು ಸೇರಿಸಿ ಕುದಿಯಲು ಬಿಡಿ. ಬಾಣಲೆಯನ್ನು ಮುಚ್ಚಿ ಸುಮಾರು 10 ನಿಮಿಷಗಳ ಕಾಲ ತರಕಾರಿಗಳು ಸಂಪೂರ್ಣವಾಗಿ ಮೆತ್ತಗಾಗುವವರೆಗೆ ಬೇಯಿಸಿ.

ತರಕಾರಿಗಳು ಚೆನ್ನಾಗಿ ಬೆಂದ ಬಳಿಕ ಮಿಶ್ರಣವನ್ನು ಸ್ವಲ್ಪ ತಣ್ಣಗಾಗಲು ಬಿಡಿ. ನಂತರ ಮಿಕ್ಸಿಗೆ ಹಾಕಿ ನುಣ್ಣಗೆ ರುಬ್ಬಿಕೊಳ್ಳಿ. ರುಬ್ಬಿದ ಮಿಶ್ರಣವನ್ನು ಮತ್ತೆ ಬಾಣಲೆಗೆ ಹಾಕಿ ಅಗತ್ಯವಿದ್ದಷ್ಟು ಬಿಸಿ ಮಾಡಿ. ಕೊನೆಯಲ್ಲಿ ಕಾಳುಮೆಣಸಿನ ಪುಡಿ ಸೇರಿಸಿ ಚೆನ್ನಾಗಿ ಕಲಸಿ ಉರಿ ಆಫ್ ಮಾಡಿ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !