ಹೊಸದಿಗಂತ ಡಿಜಿಟಲ್ ಡೆಸ್ಕ್:
ಗೌರಿ-ಗಣೇಶ ಹಬ್ಬಕ್ಕೆ ಇನ್ನೇನು ಕೌಂಟ್ ಡೌನ್ ಶುರುವಾಗಿದ್ದು ಬೆಂಗಳೂರಿನ ಖಾಕಿ ಪಡೆ ಫುಲ್ ಹೈ ಅಲರ್ಟ್ ಆಗಿದೆ. ಜತೆಗೆ ಹಬ್ಬ ಆಚರಿಸೋರಿಗೆ ತುಂಬಾನೇ ಸ್ಟ್ರಿಕ್ಟ್ ರೂಲ್ಸ್ ಜಾರಿ ಮಾಡಿದೆ. ಈ ರೂಲ್ಸ್ ಪ್ರಕಾರ ಹಬ್ಬ ಆಚರಿಸಿದರೆ ಉತ್ತಮ ಎಂದು ಪೊಲೀಸರು ಸ್ಪಷ್ಟಪಡಿಸಿದ್ದಾರೆ.
ಏನೆಲ್ಲಾ ರೂಲ್ಸ್ ಇದೆ
ಗಣೇಶ ಮೂರ್ತಿ ಪ್ರತಿಷ್ಠಾಪನೆ ಮಾಡೋಕು ಮುಂಚೆ ಸಂಬಂಧಪಟ್ಟ ಇಲಾಖೆಯಿಂದ ಅಗತ್ಯ ಅನುಮತಿಗಳನ್ನು ಕಡ್ಡಾಯವಾಗಿ ಪಡೆಯಬೇಕು.
ಪೊಲೀಸ್ ಇಲಾಖೆ ಹಾಗೂ ಗ್ರೇಟರ್ ಬೆಂಗಳೂರು ಪ್ರಾಧಿಕಾರ (GBA) ನೀಡಿರುವ ನಿಯಮಗಳನ್ನು ಆಯೋಜಕರು ಪಾಲಿಸಬೇಕು.
ಸುಪ್ರೀಂಕೋರ್ಟ್ ನೀಡಿರುವ ನಿರ್ದೇಶನಗಳ ಉಲ್ಲಂಘನೆಯಾಗದಂತೆ ಎಚ್ಚರಿಕೆ ವಹಿಸುವಂತೆ ಸೂಚಿಸಲಾಗಿದೆ.
ಮೆರವಣಿಗೆಯ ಸಮಯದಲ್ಲೂ ಕಟ್ಟುನಿಟ್ಟಿನ ನಿಯಮಗಳನ್ನು ಪಾಲಿಸಬೇಕು.
ಅಧಿಕಾರಿಗಳು ಹೇಳಿರುವ ಮಾರ್ಗದಲ್ಲಿಯೇ ಮೆರವಣಿಗೆ ಸಾಗಬೇಕು.
ನಿಗದಿತ ಸಮಯ ಹಾಗೂ ಮಾರ್ಗದಲ್ಲಿ ಯಾವುದೇ ಬದಲಾವಣೆ ಮಾಡುವಂತಿಲ್ಲ
ಧ್ವನಿವರ್ಧಕಗಳನ್ನು ಕಾನೂನುಬದ್ಧವಾಗಿ ನಿಗದಿಪಡಿಸಿರುವ ಡೆಸಿಬಲ್ ಮಿತಿಯೊಳಗೆ ಮಾತ್ರ ಬಳಸಬೇಕು ಎಂದು ಆಯೋಜಕರಿಗೆ ಸೂಚಿಸಲಾಗಿದೆ.
ಕಾರ್ಯನಿರ್ವಹಿಸುವ ಸ್ವಯಂಸೇವಕರ ಸಂಪೂರ್ಣ ಪಟ್ಟಿಯನ್ನು ಪೊಲೀಸರಿಗೆ ನೀಡುವುದು ಕಡ್ಡಾಯ
ಯಾವುದೇ ಸಮಸ್ಯೆ ಎದುರಾದರೆ ತಕ್ಷಣ ಪೊಲೀಸರಿಗೆ ಮಾಹಿತಿ ನೀಡಬೇಕು.
ವಿಸರ್ಜನಾ ಸ್ಥಳಗಳಲ್ಲಿ ಬೆಳಕಿನ ವ್ಯವಸ್ಥೆ, CCTV ಕ್ಯಾಮೆರಾಗಳು, ತರಬೇತಿ ಪಡೆದ ಈಜುಗಾರರು ಹಾಗೂ ಲೈಫ್ ಜಾಕೆಟ್‌ಗಳನ್ನು ಕಡ್ಡಾಯವಾಗಿ ಸಿದ್ಧಪಡಿಸುವಂತೆ ಸೂಚಿಸಲಾಗಿದೆ.
ಇಷ್ಟೆಲ್ಲಾ ರೂಲ್ಸ್ ಫಾಲೋ ಮಾಡಿ ಗಣೇಶ ಹಬ್ಬ ಆಚರಿಸಬೇಕು ಎಂದು ಬೆಂಗಳೂರು ನಗರ ಪೊಲೀಸ್ ಆಯುಕ್ತ ಸೀಮಂತ್ ಕುಮಾರ್ ಸಿಂಗ್ ಸೂಚನೆ ನೀಡಿದ್ದಾರೆ.



