September 8, 2026
Tuesday, September 8, 2026
spot_img

ದಿನ ಭವಿಷ್ಯ | ಎಚ್ಚರಿಕೆ ನಡೆ ಅಗತ್ಯ: ಮಾತೇ ಶತ್ರುವಾಗಬಹುದು, ವೃತ್ತಿಜೀವನದಲ್ಲಿ ಸವಾಲುಗಳ ದಿನ

ಮೇಷ
ಕೆಣಕು ಮಾತು ಜಗಳಕ್ಕೆ ಕಾರಣವಾದೀತು. ಮಾತಿನ ಮೇಲೆ ಹಿಡಿತ ಇರಲಿ. ವೃತ್ತಿಯಲ್ಲಿ ಅಸಹಕಾರ. ಮೈಕೈ ನೋವಿನಿಂದ ಶಮನ.
ವೃಷಭ
ಕೆಲಸದಲ್ಲಿ ತಪ್ಪಾಗದಂತೆ ನೋಡಿಕೊಳ್ಳಿ. ತಾಳ್ಮೆಯುತ ವರ್ತನೆಯಿಂದ ಬಿಕ್ಕಟ್ಟು ಪರಿಹಾರ. ಜಗಳಕ್ಕೆ ಇಳಿಯಬೇಡಿ. ಆರೋಗ್ಯಕರ ಆಹಾರವಷ್ಟೆ ಸ್ವೀಕರಿಸಿ.
ಮಿಥುನ
ನಿಮ್ಮ ಸುತ್ತಮುತ್ತ ಮಹತ್ವದ ಬೆಳವಣಿಗೆ ಉಂಟಾದೀತು. ನಿಮ್ಮ ಮೇಲೂ ಅದರ ಪರಿಣಾಮ ಆಗಲಿದೆ. ಕೋಪ ನಿಯಂತ್ರಿಸಿ.
ಕಟಕ
ವಿಶ್ವಾಸದಿಂದ ಕಾರ್ಯ ಎಸಗಿ. ಸಣ್ಣ ಹಿನ್ನಡೆಗೆ ಅಂಜದಿರಿ. ನಿಮ್ಮ ಮೆಚ್ಚಿನ ವ್ಯಕ್ತಿಯನ್ನು ಭೇಟಿ ಆಗುವಿರಿ. ಖರೀದಿ ಉತ್ಸಾಹ, ಖರ್ಚು ಅಽಕ.  
ಸಿಂಹ
ಖಾಸಗಿ ಸಮಸ್ಯೆ ಕಿರಿಕಿರಿ ಸೃಷ್ಟಿಸೀತು. ಸಣ್ಣ ವಿಷಯದಲ್ಲೂ ತಪ್ಪು ಹುಡುಕುವ ಅಭ್ಯಾಸ ಬಿಡಿ. ಅದರಿಂದ ಮನೆಯ ಶಾಂತಿ ಕಲಕಬಹುದು      
ಕನ್ಯಾ
ಆಶಾವಾದದಿಂದ ದಿನ ಆರಂಭಿಸಿ. ಇಷ್ಟ ಇಲ್ಲದಿದ್ದರೂ ಕೆಲವರ ಜತೆ ಹೊಂದಾಣಿಕೆ ಸಾಧಿಸಿರಿ. ಲಘುವಾದ ಮಾತು ಸಂಬಂಧ ಕೆಡಿಸಬಹುದು.  
ತುಲಾ
ಎಲ್ಲರ ಸಹಕಾರ ಪಡೆದು ಕೆಲಸ ಮಾಡಲು ಯತ್ನಿಸಿ. ಆದರೂ ಕೆಲವರ ಅಸಮಾಧಾನ ಎದುರಿಸುವಿರಿ. ಉದ್ದಿಮೆ ಪ್ರಗತಿ ತುಸು ಕುಂಠಿತ.
ವೃಶ್ಚಿಕ
ಸಹೋದ್ಯೋಗಿಗಳ ಜತೆ ಸಹಕಾರ ಇರಲಿ. ಇಷ್ಟದ ವ್ಯಕ್ತಿಯ ಜತೆ ಸಂವಾದ. ಸಣ್ಣ ವಿಷಯ ಬೇಸರಕ್ಕೆ ಕಾರಣ ವಾಗಲಿದೆ. ಧನವ್ಯಯ.        
ಧನು
ಸಾಮಾಜಿಕ ಚಟುವಟಿಕೆ ಹೆಚ್ಚು. ಇದರಿಂದ ನಿಮ್ಮ ಮನಸ್ಸು ನಿರಾಳವಾಗಲಿದೆ. ವೃತ್ತಿಯ ಸಮಸ್ಯೆಯೊಂದು ಪರಿಹಾರ ಕಾಣಲಿದೆ.          
ಮಕರ
ನಿಮ್ಮ ವ್ಯವಹಾರ ಸುಸೂತ್ರವಾಗಿ ಸಾಗದು. ಪದೇಪದೇ ಅಡ್ಡಿ. ವಿಳಂಬ. ಕೆಲವರ ಕಿರಿಕಿರಿ ಎದುರಿಸುವಿರಿ. ದೇವರ ಪ್ರಾರ್ಥನೆ ಮಾಡಿ.
ಕುಂಭ
ಪ್ರೀತಿಪಾತ್ರರು ನಿಮ್ಮ ನಿರೀಕ್ಷೆಗೆ ವಿರುದ್ಧವಾಗಿ ವರ್ತಿಸಿಯಾರು. ಅವರನ್ನು ದೂರಬೇಡಿ. ಕಾರಣ ತಿಳಿದು ಪರಿಹಾರ ಕಂಡುಕೊಳ್ಳಿ.      
ಮೀನ
ಹರ್ಷ ತರುವ ವಿಷಯದತ್ತ ಗಮನ ಹರಿಸಿ. ಆರೋಗ್ಯ ಸಮಸ್ಯೆ ಪರಿಹಾರ, ನಿರಾಳತೆ.  ಕೌಟುಂಬಿಕ ಬೇಡಿಕೆ ಈಡೇರಿಸಿರಿ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !