October 23, 2026
Friday, October 23, 2026
spot_img

Dinner Special | ಅನ್ನ ಸಾರು ಜೊತೆಗೆ ಈ ಸಿಲ್ವರ್ ಫಿಶ್ ಫ್ರೈ ಇದ್ರೆ ಸೂಪರ್ ಕಾಂಬಿನೇಷನ್

ಊಟಕ್ಕೆ ರುಚಿಕರವಾದ ಮತ್ತು ಸುಲಭವಾಗಿ ತಯಾರಿಸಬಹುದಾದ ಸೈಡ್ ಡಿಶ್ ಇದ್ರೆ ಸಾಕು ಅನ್ನೋರು ಈ ರವಾ ಸಿಲ್ವರ್ ಫಿಶ್ ಫ್ರೈ ಟ್ರೈ ಮಾಡಿ. ಬಿಸಿ ಅನ್ನ ಮತ್ತು ಸಾರು ಜೊತೆ ಇದು ರುಚಿಕರವಾಗಿರುತ್ತದೆ.

ಬೇಕಾಗುವ ಸಾಮಗ್ರಿಗಳು

ಸಿಲ್ವರ್ ಫಿಶ್, ½ ಕಪ್ ರವೆ, 1–2 ಟೀಸ್ಪೂನ್ ಕಾಶ್ಮೀರಿ ಮೆಣಸಿನ ಪುಡಿ, ½ ಟೀಸ್ಪೂನ್ ಅರಿಶಿನ, 1 ಟೀಸ್ಪೂನ್ ಧನಿಯಾ ಪುಡಿ, ಶುಂಠಿ-ಬೆಳ್ಳುಳ್ಳಿ ಪೇಸ್ಟ್, ನಿಂಬೆ ರಸ, ಉಪ್ಪು ಮತ್ತು ಎಣ್ಣೆ.

ಮಾಡುವ ವಿಧಾನ

ಮೊದಲು ಮೀನನ್ನು ಸ್ವಚ್ಛಗೊಳಿಸಿ. ಪಾತ್ರೆಯಲ್ಲಿ ಮೆಣಸಿನ ಪುಡಿ, ಅರಿಶಿನ, ಧನಿಯಾ ಪುಡಿ, ಶುಂಠಿ-ಬೆಳ್ಳುಳ್ಳಿ ಪೇಸ್ಟ್, ನಿಂಬೆ ರಸ ಮತ್ತು ಉಪ್ಪು ಸೇರಿಸಿ ಈ ಮಸಾಲೆಯನ್ನು ಮೀನಿಗೆ ಹಚ್ಚಿ 15–30 ನಿಮಿಷ ಬಿಡಿ. ನಂತರ ರವೆಯಲ್ಲಿ ಮೀನನ್ನು ಹೊರಳಿಸಿ, ಬಿಸಿ ಎಣ್ಣೆಯಲ್ಲಿ ಮಧ್ಯಮ ಉರಿಯಲ್ಲಿ ಎರಡೂ ಬದಿಗಳನ್ನು 3–4 ನಿಮಿಷ ಅಥವಾ ಮೀನು ಚೆನ್ನಾಗಿ ಬೆಂದು ಗರಿಗರಿಯಾಗುವವರೆಗೆ ಹುರಿಯಿರಿ.

Must Read