September 8, 2026
Tuesday, September 8, 2026
spot_img

ಎಷ್ಟಾದ್ರೂ ಬಾಡಿ ಶೇಮಿಂಗ್‌ ಮಾಡಿ! ನನ್ನ ದೇಹ ನನಗೆ ಇಷ್ಟ ಎಂದ ನಟಿ ಬಿಪಾಶಾ ಬಸು

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಯಾವ ಸೆಲೆಬ್ರಿಟಿಗಳೇ ಆಗಲಿ, ಗರ್ಭಿಣಿಯಾಗಿ, ಮಗು ಹುಟ್ಟಿದ ನಂತರ ಮತ್ತದೇ ಝೀರೋ ಫಿಗರ್‌ಗೆ ವಾಪಾಸಾಗಿಬಿಡಬೇಕು ಅನ್ನೋದು ಜನರ ನಿರೀಕ್ಷೆ. ಇದೇ ರೀತಿ ಹಲವು ಹೀರೋಯಿನ್‌ಗಳು ನಡೆದುಕೊಳ್ಳುತ್ತಾರೆ. ಆದರೆ ಕೆಲವರು ಮಾತ್ರ ಪ್ರೆಗ್ನೆನ್ಸಿ, ತಾಯ್ತನವನ್ನು ನಿಧಾನವಾಗಿ ಎಂಜಾಯ್‌ ಮಾಡುತ್ತಾರೆ. ಮಕ್ಕಳು ಶಾಲೆಗೆ ಹೋಗುವವರೆಗೂ ಜೀವನವನ್ನು ಅವರಿಗಾಗಿ ಮುಡಿಪಿಟ್ಟು ನಂತರ ಫಿಟ್ನೆಸ್‌ನತ್ತ ಮುಖ ಮಾಡುತ್ತಾರೆ. ಈ ನಟಿಯರಲ್ಲಿ ಬಿಪಾಶಾ ಬಸು ಕೂಡ ಒಬ್ಬರು.

ಬಿಪಾಶಾ ತಮ್ಮ ಪ್ರೈಮ್‌ನಲ್ಲಿದ್ದಾಗ ಅವರ ಫಿಗರ್‌ಗೆ ಮಾರುಹೋಗದವರಿಲ್ಲ. ಇದ್ದರೆ ಬಿಪಾಶಾ ರೀತಿ ಇರಬೇಕು ಎಂದು ಹೇಳಲಾಗುತ್ತಿತ್ತು. ಆದರೆ ಮದುವೆಯಾಗಿ ಮಗಳು ದೇವಿಗೆ ಜನ್ಮ ನೀಡಿದ ನಂತರ ಬಿಪಾಶಾ ದಪ್ಪ ಆದರು. ಆದರೆ ಬೇಜಾರಿನಲ್ಲಿ ಇರಲಿಲ್ಲ. ನನಗೆ ಈ ಹಿಂದೆ ಇದ್ದ ದೇಹಕ್ಕಿಂತ ಈಗಿರುವ ದೇಹವೇ ಇಷ್ಟ ಎಂದು ನಟಿ ಹೇಳಿಕೊಂಡಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಫೋಟೊ ಹಾಕೋದೋ ಬೇಡ್ವೋ ಎಂದು ನೂರು ಬಾರಿ ಯೋಚಿಸಬೇಕಾಗುತ್ತದೆ. ದೇಹದ ಬಗ್ಗೆ ಹಾಕುವ ಕೆಟ್ಟ ಕಮೆಂಟ್‌ಗಳನ್ನು ನೋಡೋಕೆ ಆಗೋದಿಲ್ಲ ಎಂದಿದ್ದಾರೆ.

ನಟಿಯರಷ್ಟೇ ಅಲ್ಲ ಮಾಮೂಲಿಯಾಗಿ ಎಲ್ಲ ಮಹಿಳೆಯರು ಜೀವನದಲ್ಲಿ ಎಂದೋ ಈ ಫೇಸ್‌ ದಾಟಿ ಹೋಗಲೇಬೇಕು. ಒಂಬತ್ತು ತಿಂಗಳ ಮಿರಾಕಲ್‌ನಲ್ಲಿ ದೇಹ ಏನೆಲ್ಲಾ ಸ್ಯಾಕ್ರಿಫೈಸ್‌ ಮಾಡುತ್ತದೆ. ಇದು ದೇವರು ಹೆಣ್ಣುಮಕ್ಕಳಿಗೆ ನೀಡಿರುವ ವರ. ನೀವೊಂದು ಜೀವಕ್ಕೆ ಜನ್ಮ ಕೊಡುವಷ್ಟು ತಾಳ್ಮೆ ಹೊಂದಿದ್ದೀರಿ ಎಂದಾದರೆ ನಿಮ್ಮ ದೇಹದ ಬಗ್ಗೆಯೂ ತಾಳ್ಮೆ ಇಟ್ಟುಕೊಳ್ಳಿ. ಸಮಯ ಕೊಡಿ ಎಲ್ಲವೂ ನಿಮಗೆ ಬೇಕಾದಂತೆ ಆಗುತ್ತದೆ. ಜನರ ಮಾತುಗಳಿಗೆ ಕ್ಯಾರೆ ಅನ್ನದೇ ಮುಂದುವರಿಯಿರಿ ಎಂದು ಹೇಳಿದ್ದಾರೆ.

ಗರ್ಭಿಣಿಯಾಗಿ ಮಗಳನ್ನು ಶಾಲೆಗೆ ಕಳುಹಿಸಲು ಆರು ವರ್ಷಗಳ ಗ್ಯಾಪ್‌ ಆಗಿದೆ. ಈಗ ನನಗೆ ನಾನು ಸಮಯ ಕೊಟ್ಟುಕೊಳ್ಳುತ್ತೇನೆ. ಫಿಟ್ನೆಸ್‌, ಆಕ್ಟಿಂಗ್‌ ಎಲ್ಲವನ್ನೂ ಅಪ್ಪಿಕೊಳ್ಳಲು ದೈಹಿಕವಾಗಿ ಹಾಗೂ ಮಾನಸಿಕವಾಗಿ ತಯಾರಾಗಿದ್ದೀನಿ. ಯಾರೋ ಹೇಳಿದ್ದನ್ನು ಕೇಳಿ ತೂಕ ಇಳಿಸಿಕೊಳ್ಳುವ ಅವಶ್ಯಕತೆ ಇಲ್ಲ. ನಿಮ್ಮ ಮನಸ್ಸಿಗೆ ಬಂದಾಗ ನೀವು ಸಣ್ಣ ಆಗಬಹುದು. ಡೆಡಿಕೇಷನ್‌ ಇದ್ದರೆ ಆಯ್ತು ಎಂದು ನಟಿ ಹೇಳಿದ್ದಾರೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !