ಹೊಸದಿಗಂತ ಡಿಜಿಟಲ್ ಡೆಸ್ಕ್:
ಪ್ರಧಾನಿ ಮೋದಿಯವರ ಕಾರ್ಯಕರ್ಮದಲ್ಲಿ ಹೈ ಅಲರ್ಟ್ ಇರೋದು ಸರ್ವೇ ಸಾಮಾನ್ಯ ಆದರೆ, ಈ ಭದ್ರತೆಯ ನಡುವೆಯೂ ನಕಲಿ PMO ಐಡಿ, ಗನ್ನೊಂದಿಗೆ ಕಾರ್ಯಕ್ರಮದೊಳಗೆ ಪ್ರವೇಶಿಸಿದ್ದು ಆತಂಕ ಸೃಷ್ಟಿಸಿದೆ.
ಬಾಂದ್ರಾ–ಕುರ್ಳಾ ಕಾಂಪ್ಲೆಕ್ಸ್ನಲ್ಲಿರುವ ಜಿಯೋ ವರ್ಲ್ಡ್ ಪ್ಲಾಜಾ ಹಾಗೂ NMACC ಕಾರ್ಯಕ್ರಮದ ಸ್ಥಳದ ಬಳಿ ಅನುಮಾನಾಸ್ಪದವಾಗಿ ಓಡಾಡುತ್ತಿದ್ದ ಇಬ್ಬರನ್ನು ಮುಂಬೈ ಪೊಲೀಸರು ವಶಕ್ಕೆ ಪಡೆದು ಅವರನ್ನು ಪರಿಶೀಲಿಸಿದಾಗ ಅವರಲ್ಲಿ ಒಬ್ಬನ ಬಳಿ ಗನ್, ಮತ್ತೊಬ್ಬನ ಬಳಿ ನಕಲಿ ಪ್ರಧಾನಮಂತ್ರಿ ಕಚೇರಿ (PMO) ಗುರುತಿನ ಚೀಟಿ ಪತ್ತೆಗಿದೆ.
ಸೋಮವಾರ ತಡರಾತ್ರಿ ಭದ್ರತಾ ಪ್ರೋಟೋಕಾಲ್ ಪರಿಶೀಲನೆ ನಡೆಯುತ್ತಿದ್ದ ವೇಳೆ ಈ ಘಟನೆ ಬೆಳಕಿಗೆ ಬಂದಿದೆ.
ಇದನ್ನೂ ಓದಿ:
ಅನುಮಾನಾಸ್ಪದವಾಗಿ ಓಡಾಡುತ್ತಿದ್ದ 24 ವರ್ಷದ ರೋಹನ್ ಪಾರೇಖ್ ಎಂಬಾತನನ್ನು ಪೊಲೀಸರು ಹಿಡಿದು ವಿಚಾರಣೆಗಾಗಿ ವಶಕ್ಕೆ ಪಡೆದಿದ್ದಾರೆ. ಆತ ತನ್ನನ್ನು PMO ಅಧಿಕಾರಿಯೆಂದು ಪರಿಚಯಿಸಿಕೊಂಡಿದ್ದರೂ, ಪರಿಶೀಲನೆ ವೇಳೆ ಗುರುತಿನ ಚೀಟಿ ನಕಲಿ ಎಂಬುದು ಪತ್ತೆಯಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ರೋಹನ್ ಜೊತೆಗಿದ್ದ ಬಾಡಿಗಾರ್ಡ್ನ ಬಳಿಯೂ ಗನ್ ಪತ್ತೆಯಾಗಿದ್ದು, ಈ ಸಂಬಂಧ ಇಬ್ಬರನ್ನು ಬಂಧಿಸಿ ವಿಚಾರಣೆ ನಡೆಸಲಾಗುತ್ತಿದೆ.



