September 9, 2026
Wednesday, September 9, 2026
spot_img

ಐಪಿಎಲ್, ಸೌತ್ ಆಫ್ರಿಕಾ ಆಯ್ತು.. ಈಗ ಆಸೀಸ್ ಅಂಗಳದಲ್ಲೂ ‘ಸೂಪರ್ ಜೈಂಟ್ಸ್’ ಹವಾ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಕ್ರಿಕೆಟ್ ದುನಿಯಾದಲ್ಲಿ ಈಗ ಎಲ್ಲಿ ನೋಡಿದ್ರೂ ಬಿಸಿನೆಸ್, ಐಪಿಎಲ್ ಕ್ರೇಜ್ ಹೆಂಗಿದೆ ಎಂದು ನಮಗೆಲ್ಲ ಗೊತ್ತೇ ಇದೆ. ಈಗ ಅದೇ ಐಪಿಎಲ್ ಮಾದರಿಯ ಬಿಸಿನೆಸ್ ಅನ್ನು ಆಸ್ಟ್ರೇಲಿಯಾದ ಬಿಗ್ ಬ್ಯಾಷ್ ಲೀಗ್‌ಗೂ ತರುವ ಕಾಲ ಹತ್ತಿರ ಬಂದಿದೆ. ಇಷ್ಟು ದಿನ ಆಸ್ಟ್ರೇಲಿಯಾದ ಆಯಾ ರಾಜ್ಯಗಳ ಕ್ರಿಕೆಟ್ ಬೋರ್ಡ್‌ಗಳೇ ಬಿಬಿಎಲ್ ತಂಡಗಳನ್ನು ನಡೆಸುತ್ತಿದ್ದವು. ಆದರೆ ಈಗ ಕ್ರಿಕೆಟ್ ಆಸ್ಟ್ರೇಲಿಯಾ ಒಂದು ಬಿಗ್ ಡಿಸಿಷನ್ ತಗೆದುಕೊಂಡಿದ್ದು, ಟೀಮ್‌ಗಳನ್ನು ಖಾಸಗಿ ಉದ್ಯಮಿಗಳಿಗೆ ಮಾರಾಟ ಮಾಡಲು ಚಿಂತನೆ ನಡೆಸಿದೆ.

ಈ ಆಫರ್ ಸಿಕ್ಕಿದ್ದೇ ತಡ, ಭಾರತದ ಪ್ರಮುಖ ಉದ್ಯಮಿ, ಆರ್‌ಪಿಎಸ್‌ಜಿ ಗ್ರೂಪ್ ಮಾಲೀಕ ಸಂಜೀವ್ ಗೋಯೆಂಕಾ ತಡ ಮಾಡದೇ ಎಂಟ್ರಿ ಕೊಟ್ಟಿದ್ದಾರೆ.

ಖಾಸಗೀಕರಣದ ಮೊದಲ ಭಾಗವಾಗಿ ಮೆಲ್ಬೋರ್ನ್ ರೆನೆಗೇಡ್ಸ್ ತಂಡದ ಶೇಕಡಾ 100 ರಷ್ಟು ಪಾಲನ್ನು ಮಾರಾಟ ಮಾಡಲು ಆಸ್ಟ್ರೇಲಿಯಾ ಮಂಡಳಿ ಗ್ರೀನ್ ಸಿಗ್ನಲ್ ಕೊಟ್ಟಿದೆ. ಈ ಸುದ್ದಿ ಹೊರಬಿದ್ದ ತಕ್ಷಣ ಜಗತ್ತಿನ ಪ್ರಮುಖ ಉದ್ಯಮಿಗಳು ಈ ಟೀಮ್ ಖರೀದಿಸಲು ಕ್ಯೂ ನಿಂತಿದ್ದಾರೆ. ಆದರೆ ಈ ರೇಸ್‌ನಲ್ಲಿ ಮುಂಚೂಣಿಯಲ್ಲಿ ಇರೋದು ಮಾತ್ರ ಸಂಜೀವ್ ಗೋಯೆಂಕಾ ಅವರ ‘ಸೂಪರ್ ಜೈಂಟ್ಸ್’ ಫ್ರಾಂಚೈಸಿ.

ಕ್ರಿಕೆಟ್ ಆಸ್ಟ್ರೇಲಿಯಾದ ಹೊಸ ರೂಲ್ಸ್ ಪ್ರಕಾರ, ಟೀಮ್ ಕೊಂಡುಕೊಳ್ಳುವ ಹೊಸ ಓನರ್‌ಗಳಿಗೆ ತಮ್ಮಿಷ್ಟದಂತೆ ಹೆಸರು ಇಟ್ಟುಕೊಳ್ಳುವ ಫುಲ್ ಫ್ರೀಡಂ ಇರುತ್ತೆ. ಇತ್ತೀಚೆಗೆ ಇಂಗ್ಲೆಂಡ್‌ನ ‘ದಿ ಹಂಡ್ರೆಡ್’ ಲೀಗ್‌ನಲ್ಲಿ ಮ್ಯಾಂಚೆಸ್ಟರ್ ಒರಿಜಿನಲ್ಸ್ ತಂಡವನ್ನು ಖರೀದಿಸಿದ್ದ ಗೋಯೆಂಕಾ, ಅದಕ್ಕೆ ‘ಮ್ಯಾಂಚೆಸ್ಟರ್ ಸೂಪರ್ ಜೈಂಟ್ಸ್’ ಎಂದು ಮರುನಾಮಕರಣ ಮಾಡಿದ್ದರು.

ಅದೇ ಪ್ಲಾನ್ ಇಲ್ಲೂ ವರ್ಕ್ ಆದರೆ, ಬರುವ 2027–28ರ ಬಿಬಿಎಲ್ ಸೀಸನ್‌ನಿಂದ ಮೆಲ್ಬೋರ್ನ್ ರೆನೆಗೇಡ್ಸ್ ಹೆಸರು ಮಾಯವಾಗಿ, ‘ಮೆಲ್ಬೋರ್ನ್ ಸೂಪರ್ ಜೈಂಟ್ಸ್’ ಹೆಸರಿನಲ್ಲಿ ಟೀಮ್ ಅಖಾಡಕ್ಕಿಳಿಯೋದು ಬಹುತೇಕ ಪಕ್ಕಾ ಎನ್ನಲಾಗ್ತಿದೆ.

ಐಪಿಎಲ್‌ನಲ್ಲಿ ‘ಲಕ್ನೋ ಸೂಪರ್ ಜೈಂಟ್ಸ್’, ಸೌತ್ ಆಫ್ರಿಕಾ ಲೀಗ್‌ನಲ್ಲಿ ‘ಡರ್ಬನ್ ಸೂಪರ್ ಜೈಂಟ್ಸ್’ ಎಂದು ಆಲ್ರೆಡಿ ಸೌಂಡ್ ಮಾಡಿರೋ ಗೋಯೆಂಕಾ ಪಡೆ, ಈಗ ಆಸ್ಟ್ರೇಲಿಯಾ ನೆಲದಲ್ಲೂ ತಮ್ಮ ಬ್ರ್ಯಾಂಡ್ ಕಿಚ್ಚನ್ನು ಹಚ್ಚಲು ರೆಡಿಯಾಗಿದೆ. ಬಿಗ್ ಬ್ಯಾಷ್ ಲೀಗ್ ಖಾಸಗಿಯಾಗುತ್ತಿರುವುದು ಕ್ರಿಕೆಟ್ ಜಗತ್ತಿನಲ್ಲಿ ಹೊಸ ಅಧ್ಯಾಯಕ್ಕೆ ನಾಂದಿ ಹಾಡಿದ್ದು, ಭಾರತೀಯ ಉದ್ಯಮಿಗಳ ಈ ಗ್ಲೋಬಲ್ ಗೇಮ್‌ಪ್ಲಾನ್ ಎಲ್ಲರ ಹುಬ್ಬೇರಿಸುವಂತೆ ಮಾಡಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !