ಹೊಸದಿಗಂತ ವರದಿ ಸಿದ್ದಾಪುರ:
ತಾಲೂಕಿನ ಹಾರ್ಸಿಕಟ್ಟಾ-ಪಿನಾಲಗುಡ್ಡ ಸಮೀಪದ ಕಲ್ಲಬ್ಬೆ-ಕುಂಬಾರಕುಳಿ ಕ್ರಾಸ್‌ನಲ್ಲಿ ಮಂಗಳವಾರ ರಾತ್ರಿ ಚಿಟ್ಟೆ ಚಿರತೆಯೊಂದು ವಾಹನ ಸವಾರರಿಗೆ ಕಾಣಿಸಿಕೊಂಡಿದ್ದು ಸುತ್ತಮುತ್ತಲಿನ ಜನತೆ ಆತಂಕಪಡುವಂತಾಗಿದೆ.
ಕಳೆದ ಮೂರು ನಾಲ್ಕು ತಿಂಗಳ ಹಿಂದೆ ಹಾರ್ಸಿಕಟ್ಟಾ ಹಾಗೂ ಬಿದ್ರಕಾನ ಗ್ರಾಪಂ ವ್ಯಾಪ್ತಿಯ ಸುತ್ತಮುತ್ತ ಹಲವೆಡೆ ಚಿರತೆ ಕಾಣಿಸಿಕೊಂಡು ಆತಂಕ ಮೂಡಿಸಿತ್ತು. ಈಗ ಪುನಃ ಚಿರತೆ ಕಾಣಿಸಿಕೊಂಡಿದ್ದರಿಂದ ಜನತೆ ಮತ್ತಷ್ಟು ಆತಂಕಕ್ಕೆ ಒಳಗಾಗಿದ್ದಾರೆ.
ಇದನ್ನೂ ಓದಿ:
ನಿತ್ಯ ಶಾಲಾ-ಕಾಲೇಜು ವಿದ್ಯಾರ್ಥಿಗಳು, ಕೂಲಿಕಾರ್ಮಿಕರು ಈ ಭಾಗದಲ್ಲಿ ಓಡಾಡುತ್ತಾರೆ. ಪೇಟೆ-ಪಟ್ಟಣಕ್ಕೆ ಹೋಗಿಬರುವುದಕ್ಕೂ ಭಯ ಉಂಟಾಗಿದೆ ಎಂದು ಜನರು ಮಾತನಾಡಿಕೊಳ್ಳುತ್ತಿದ್ದಾರೆ. ಅರಣ್ಯ ಇಲಾಖೆ ಅಕಾರಿಗಳು ಸೂಕ್ತ ಕ್ರಮ ಕೈಗೊಂಡು ಜನರಲ್ಲಿ ಆವರಿಸಿರುವ ಭಯವನ್ನು ಹೋಗಲಾಡಿಸುವಂತೆ ನಾಗರಿಕರು ಆಗ್ರಹಿಸಿದ್ದಾರೆ.



