Monday, October 13, 2025

ದಿನಭವಿಷ್ಯ: ವೃತ್ತಿಯಲ್ಲಿ ಭಿನ್ನಾಭಿಪ್ರಾಯ ಉಂಟಾಗುತ್ತದೆ, ಹೊಂದಾಣಿಕೆ ಅಗತ್ಯ

ಮೇಷ
ವೃತ್ತಿಯಲ್ಲಿ  ಭಿನ್ನಾಭಿಪ್ರಾಯ ಉಂಟಾದರೆ ಅದನ್ನು ಹೊಂದಾಣಿಕೆಯಿಂದ ನಿವಾರಿಸಿಕೊಳ್ಳಿ.  ದ್ವೇಷ ಸಾಧನೆಗೆ ಹೊರಡದಿರಿ.          ವೃಷಭ
ಸಹೋದ್ಯೋಗಿ ಕಿರುಕುಳ. ಅವರ ಟೀಕೆ ಕಡೆಗಣಿಸಿ. ಕೌಟುಂಬಿಕ ಸಾಮರಸ್ಯ ಕಾಯಲು ಆದ್ಯತೆ ಕೊಡಿ. ಶಾಂತವಾಗಿ ವ್ಯವಹರಿಸಿ.  ಮಿಥುನ
 ಅನಪೇಕ್ಷಿತ ಬೆಳವಣಿಗೆ ಚಿಂತೆಗೆ ಕಾರಣವಾಗಲಿದೆ. ಸುಲಭ ಪರಿಹಾರ ಗೋಚರಿಸದು. ತಾಳ್ಮೆಯಿಂದ ಕಾದರೆ ದಾರಿ ತೋರಬಹುದು.    
ಕಟಕ
ವ್ಯವಹಾರದಲ್ಲಿ  ಆತುರ, ದುಡುಕು ಬೇಡ. ಯೋಚಿಸಿ ಕಾರ್ಯ ಎಸಗಿ. ಕುಟುಂಬಸ್ಥರ ಭಾವನೆ ಗೌರವಿಸಿ.  ಹೊಂದಾಣಿಕೆಯೆ ಒಳಿತು.  
ಸಿಂಹ
ಕೆಲವಾರು ಕಾರಣಗಳಿಂದ ಅಶಾಂತಿ ಕಾಡಲಿದೆ.  ಸಮಸ್ಯೆ ಪರಿಹಾರಕ್ಕೆ ತಕ್ಷಣ ಮುಂದಾಗಿರಿ. ವಿಳಂಬ ಧೋರಣೆ ತರವಲ್ಲ.  
ಕನ್ಯಾ
ಆಪ್ತರೊಡನೆ  ಮನಸ್ತಾಪ  ಸಂಭವ. ಕಾರಣವಿಲ್ಲದೆ ಆರೋಪ ಹೊರಿಸದಿರಿ. ಅರಿತು ವ್ಯವಹರಿಸುವುದು ಮುಖ್ಯ. ಧನವ್ಯಯ.    
ತುಲಾ
ಕೆಲಸದ ಒತ್ತಡ ಹೆಚ್ಚು. ಆದರೂ ಕುಟುಂಬ ಸದಸ್ಯರ ಜತೆ  ಆತ್ಮೀಯ ಕಾಲಕ್ಷೇಪಕ್ಕೆ ಅವಕಾಶ. ವ್ಯವಹಾರ ತುಸು ಕುಂಠಿತ. ಬಂಧು ಸಹಕಾರ.  
ವೃಶ್ಚಿಕ
 ವೃತ್ತಿಯ ಒತ್ತಡ ಮನೆಯ ನೆಮ್ಮದಿ  ಕಲಕದಿರಲಿ. ಅವೆರಡರ ಮಧ್ಯೆ ಸಮನ್ವಯ ಸಾಽಸಿ. ಧನಾಗಮ ಸುಗಮ. ವಸ್ತು ಖರೀದಿ ಸಂಭವ.
ಧನು
 ಕೌಟುಂಬಿಕ ತೊಡಕಿನಿಂದ ಇಂದು ನಿರಾಳತೆ ಸಿಗುವುದು. ವಿರೋಧ ಮುಗಿದು ಸಮರಸ. ಕಠೋರ ಮಾತು ಆಡದಿರಿ.          
ಮಕರ
ಯಾವುದೋ ಕೊರಗು ಕಳೆಯಲಿದೆ. ಅಸಹನೆ ನೀಗಲಿದೆ.  ಇತ್ತೀಚಿನ ಕೆಲ ಬೆಳವಣಿಗೆಗಳು ಇದಕ್ಕೆ ಕಾರಣ.  ಧನಲಾಭ.
ಕುಂಭ
ಭವಿಷ್ಯದ ಕುರಿತಂತೆ ಆತಂಕ. ಮನಸ್ಸಿಗೆ ವ್ಯಾಕುಲ.  ಆಪ್ತರೊಬ್ಬರ ವರ್ತನೆ ಅಸಮಾಧಾನ ಮೂಡಿಸಲಿದೆ. ತಾಳ್ಮೆಯಿಂದ ವ್ಯವಹರಿಸಿ.  
 ಮೀನ
ಎಲ್ಲರ ಜತೆ ಹೊಂದಾಣಿಕೆ ಸಾಽಸಿ. ನಿಮ್ಮ ನಿಲುವಿನಲ್ಲಿ ಕಠಿಣ ಧೋರಣೆ ಬಿಡಿ. ಇತರರ ಮಾತು ಆಲಿಸುವ ವ್ಯವಧಾನವಿರಲಿ.

error: Content is protected !!