ಮೇಷ
ನಿಮ್ಮ ಸುತ್ತಲಿನ ಬದಲಾವಣೆಗಳಿಗೆ ಹೊಂದಿಕೊಳ್ಳಿ. ನಿಮ್ಮ ಧೋರಣೆಗೇ ಹಠಹಿಡಿದು ಕೂರದಿರಿ.ವೃತ್ತಿಯಲ್ಲಿ ಯಶಸ್ಸು. ಆರ್ಥಿಕ ಲಾಭ.
ವೃಷಭ
ವೃತ್ತಿಯಲ್ಲಿ ಅದೃಷ್ಟ ನಂಬಿ ಕೂರಬೇಡಿ. ಬದಲಾಗಿ ನಿಮ್ಮ ಸಾಮರ್ಥ್ಯ ನಂಬಿರಿ.ಕೆಲಸದ ಗುಣಮಟ್ಟದಲ್ಲಿ ರಾಜಿ ಮಾಡಬೇಡಿ.ಆರ್ಥಿಕ ಸುಸ್ಥಿತಿ.
ಮಿಥುನ
ವೃತ್ತಿಯ ಒತ್ತಡದಿಂದ ಹೊರಗೆ ಬರಲು ಪ್ರಯತ್ನಿಸುವಿರಿ.ಆದರೆ ಮತ್ತಷ್ಟು ಕೆಲಸದ ಹೊರೆ ಹೆಗಲೇರುವುದು. ಕೌಟುಂಬಿಕ ಅಸಮಾಧಾನ.
ಕಟಕ
ಮನೆಯಲ್ಲಿ ನಿಮ್ಮ ನೆರವಿನ ಹಸ್ತವನ್ನೂ ಚಾಚಿರಿ. ಅದರಿಂದ ಕೌಟುಂಬಿಕ ನೆಮ್ಮದಿ. ವೃತ್ತಿಯ ಒತ್ತಡ ಕಳೆಯಲೂ ಇದು ನೆರವಾಗಬಹುದು.
ಸಿಂಹ
ಒಂದೆಡೆಯಿಂದ ವೃತ್ತಿಯ ಒತ್ತಡ, ಮತ್ತೊಂದೆಡೆಯಿಂದ ಪ್ರೀತಿಯ ಆಕರ್ಷಣೆ.ಇದು ನಿಮ್ಮ ದಿನವನ್ನು ಮಿಶ್ರಭಾವದಿಂದ ತುಂಬಬಹುದು.
ಕನ್ಯಾ
ವಿವಾಹಿತರ ಮಧ್ಯೆ ಅಭಿಪ್ರಾಯ ಭೇದ ಉಂಟಾದೀತು. ಅದನ್ನು ಕೂಡಲೇ ಶಮನಗೊಳಿಸಲು ಪ್ರಯತ್ನ ಸಾಗಲಿ.ಬಂಧುಗಳ ಸಹಕಾರ.
ತುಲಾ
ಕೆಲವು ವಿಷಯ ನಿಮಗೆ ಪೂರಕವಾಗಿ ಸಾಗದು.ಅದರಿಂದ ಧೃತಿಗೆಡದಿರಿ.ಎಲ್ಲರ ಜತೆ ಉತ್ತಮ ಸಂಪರ್ಕ ಸಾಧಿಸಿರಿ. ವೃಥಾ ಆರೋಪ ಮಾಡದಿರಿ.
ವೃಶ್ಚಿಕ
ಪ್ರತಿಕೂಲ ಸ್ಥಿತಿಯಲ್ಲೂ ನಿಮ್ಮ ಭಾವನೆ ನಿಯಂತ್ರಿಸಿ. ರೋಷಾವೇಷದಿಂದ ಯಾವುದೇ ಫಲವಿಲ್ಲ. ಹಣದ ವಿಚಾರದಲ್ಲಿ ಬಿಕ್ಕಟ್ಟು ಸೃಷ್ಟಿ.
ಧನು
ಆಹಾರ ಸೇವನೆಯಲ್ಲಿ ಎಚ್ಚರ ವಹಿಸಿ. ಅನಿಯಂತ್ರಿತ ಆಹಾರ ಸೇವನೆಯಿಂದ ಆರೋಗ್ಯಕೆಟ್ಟೀತು. ವೃತ್ತಿಯಲ್ಲಿ ವಿರೋಧ ಎದುರಿಸುವಿರಿ.
ಮಕರ
ನಿಮ್ಮ ಕಠಿಣ ನಿಲುವು ಮನೆಯ ಸೌಹಾರ್ದ ವಾತಾವರಣ ಕೆಡಿಸಬಹುದು.ಕೆಲವು ವಿಷಯಗಳಲ್ಲಿ ನಿಮ್ಮ ನಿಲುವು ಸಡಿಲಿಸುವುದು ಒಳ್ಳೆಯದು.
ಕುಂಭ
ಮನೆಯ ಸಮಸ್ಯೆ ನಿಮ್ಮ ವೃತ್ತಿಯ ಮೇಲೂ ಪರಿಣಾಮ ಬೀರದಂತೆ ನೋಡಿಕೊಳ್ಳಿ.ಕೆಲವು ವಿಷಯಗಳು ನಿಮ್ಮ ಮನಶ್ಯಾಂತಿ ಹಾಳು ಮಾಡುತ್ತವೆ.
ಮೀನ
ಇತರರಿಗೆ ನೆರವಿನ ಹಸ್ತ ಚಾಚುವಿರಿ. ನಿಮ್ಮ ಚಿಂತನೆಯಲ್ಲಿ ಬದಲಾವಣೆ ಆದೀತು. ಅದರಿಂದ ನಿಮಗೇ ಆಂತರಿಕ ತೃಪ್ತಿ ದೊರಕುವುದು.