ಹೊಸದಿಗಂತ ಡಿಜಿಟಲ್ ಡೆಸ್ಕ್:
ಸಾಮಾನ್ಯವಾಗಿ ಯಾವುದೇ ಸಿನಿಮಾ ರಿಲೀಸ್ ಆಗಿ ಐದನೇ ವಾರಕ್ಕೆ ಕಾಲಿಡ್ತು ಅಂದ್ರೆ ಥಿಯೇಟರ್‌ಗಳಲ್ಲಿ ಜನ ಕಮ್ಮಿಯಾಗ್ತಾರೆ, ಬರ್ತಾ ಬರ್ತಾ ಕಲೆಕ್ಷನ್ ಶೇಕಡಾ 15 ರಿಂದ 25 ರಷ್ಟು ಡೌನ್ ಆಗೋದು ಮಾಮೂಲಿ. ಆದ್ರೆ ‘ಹನುಮಾನ್ ಅಂಶ್’ ವಿಷಯದಲ್ಲಿ ಕಥೆನೇ ಬೇರೆ. ಸೋಮವಾರಕ್ಕಿಂತ ಐದನೇ ವಾರದ ಬುಧವಾರ ಈ ಸಿನಿಮಾ ಕಲೆಕ್ಷನ್ ಸಡನ್ ಆಗಿ ಜಾಸ್ತಿಯಾಗಿದೆ. ಒಂದೇ ದಿನಕ್ಕೆ ಬರೋಬ್ಬರಿ 9.75 ಕೋಟಿ ರೂ. ಬಾಚಿಕೊಂಡು ಬಾಕ್ಸ್ ಆಫೀಸ್ ಶೇಕಡಾವಾರು ಲೆಕ್ಕಾಚಾರಗಳನ್ನೇ ತಲೆಕೆಳಗು ಮಾಡಿದೆ.
ಇಂಡಿಯನ್ ಸಿನಿಮಾ ಹಿಸ್ಟರಿಯಲ್ಲೇ ಐದನೇ ವಾರದ ಬುಧವಾರ ಇಷ್ಟೊಂದು ದೊಡ್ಡ ಮಟ್ಟದ ಕಲೆಕ್ಷನ್ ಮಾಡಿದ ಬೇರೆ ಯಾವ ಸಿನಿಮಾನೂ ಇಲ್ಲ. ಹಿಂದೆ ‘ಧುರಂಧರ್’ ಸಿನಿಮಾ 3.50 ಕೋಟಿ ಮಾಡಿ ರೆಕಾರ್ಡ್ ಇಟ್ಟಿತ್ತು. ಆದ್ರೆ ‘ಹನುಮಾನ್ ಅಂಶ್’ ಆ ರೆಕಾರ್ಡ್ ಅನ್ನು ಸಿಂಪಲ್ ಆಗಿ ಬ್ರೇಕ್ ಮಾಡಿ ನಂ.1 ಪಟ್ಟಕ್ಕೇರಿದೆ.
ಈಗಿರೋ ಟ್ರೆಂಡ್ ನೋಡಿದ್ರೆ ‘ಹನುಮಾನ್ ಅಂಶ್’ ಸಿನಿಮಾ ‘ಧುರಂಧರ್’ ಸಿನಿಮಾಗಿಂತ 2.5 ಪಟ್ಟು ಸ್ಪೀಡ್‌ನಲ್ಲಿ ಓಡ್ತಿದೆ. ‘ಧುರಂಧರ್’ ಐದನೇ ವಾರದ ನಂತ್ರ 43 ಕೋಟಿ ಗಳಿಸಿತ್ತು. ಅದೇ ಲೆಕ್ಕದಲ್ಲಿ ನೋಡಿದ್ರೂ ‘ಹನುಮಾನ್ ಅಂಶ್’ 263 ಕೋಟಿ ರೂ. ದಾಟುತ್ತೆ. ಒಂದು ವೇಳೆ ಲೀಡ್ ಹೀಗೇ ಮುಂದುವರಿದ್ರೆ 300 ಕೋಟಿ ರೂ. ಕ್ಲಬ್‌ಗೆ ಸೇರಿದ್ರೂ ಆಶ್ಚರ್ಯವಿಲ್ಲ.
ಈ ಸಿನಿಮಾನ ನಿರ್ಮಾಣ ಮಾಡಿದ್ದು ಬರೀ 2 ಕೋಟಿ ರೂಪಾಯಿಯಲ್ಲಿ. ಆದ್ರೆ ಈಗ ಸಿಗ್ತಿರೋ ಲಾಭ ಮಾತ್ರ ಬರೋಬ್ಬರಿ 100 ಕೋಟಿಗೂ ಹೆಚ್ಚು. ಇಷ್ಟು ಕಮ್ಮಿ ಬಂಡವಾಳ ಹಾಕಿ ಈ ಮಟ್ಟದ ಪ್ರಾಫಿಟ್ ನೋಡಿದ ಸಿನಿಮಾಗಳು ತುಂಬಾ ಅಂದ್ರೆ ತುಂಬಾ ಅಪರೂಪ. ಇದಿನ್ನೂ ಥಿಯೇಟರ್ ಕಲೆಕ್ಷನ್ ಮಾತ್ರ, ಡಿಜಿಟಲ್ ಹಕ್ಕುಗಳು ಇನ್ನು ಸೇಲ್ ಆಗಿಲ್ಲ, ಅಲ್ಲಿಂದನೂ ಕೋಟಿ ಕೋಟಿ ಹಣ ಹರಿದು ಬರಲಿದೆ.



