ಹೊಸದಿಗಂತ ಡಿಜಿಟಲ್ ಡೆಸ್ಕ್:
ಬಾಲಿವುಡ್ನಲ್ಲಿ ಸೈಫ್ ಅಲಿ ಖಾನ್ ಮತ್ತು ಅಕ್ಷಯ್ ಕುಮಾರ್ ಜೋಡಿ ಒಂದಾಗ್ತಾರೆ ಅಂದ್ರೇನೆ ಅಲ್ಲೊಂದು ರೇಂಜ್ಗೆ ಕ್ರೇಜ್ ಹುಟ್ಟಿಕೊಳ್ಳುತ್ತೆ. ಅಂಥದ್ರಲ್ಲಿ, ಕಾಮಿಡಿ ಜೊತೆಗೆ ಕಂಟೆಂಟ್ ಕೊಡುವ ಸೀನಿಯರ್ ಡೈರೆಕ್ಟರ್ ಪ್ರಿಯದರ್ಶನ್ ಈ ಇಬ್ಬರನ್ನೂ ಇಟ್ಟುಕೊಂಡು ‘ಹೈವಾನ್’ ಅನ್ನೋ ಪಕ್ಕಾ ಥ್ರಿಲ್ಲರ್ ಸಿನಿಮಾ ಇವತ್ತು ಗ್ರ್ಯಾಂಡ್ ಆಗಿ ರಿಲೀಸ್ ಆಗಿದ್ದು, ಫಸ್ಟ್ ಡೇ ಫಸ್ಟ್ ಶೋ ನೋಡಿದ ಜನ ಅಂತೂ ದಿಲ್ ಖುಷ್ ಆಗಿ ಆಚೆ ಬರ್ತಿದ್ದಾರೆ.. ಸಿನಿಮಾ ನೋಡಿ ಹೊರಗೆ ಬಂದ ಪ್ರೇಕ್ಷಕರು ಮಾತ್ರ “ಅಬ್ಬಾ.. ಏನ್ ಸಿನಿಮಾ!” ಎಂದು ಸಂತೋಷ ವ್ಯಕ್ತಪಡಿಸುತ್ತಿದ್ದಾರೆ.
ಇಡೀ ಸಿನಿಮಾದಲ್ಲಿ ಪ್ರಿಯದರ್ಶನ್ ಸಸ್ಪೆನ್ಸ್ ಮತ್ತು ಟೆನ್ಶನ್ ಅನ್ನು ಎಲ್ಲಿಯೂ ಡೌನ್ ಆಗೋಕೆ ಬಿಟ್ಟಿಲ್ಲ. ಅದ್ರಲ್ಲೂ ಸೆಕೆಂಡ್ ಆಫ್ ಅಂತೂ ಸೀಟ್ ತುದಿಯಲ್ಲಿ ಕೂತು ನೋಡುವಂತಿದೆ. ಬ್ಯಾಕ್ಗ್ರೌಂಡ್ ಮ್ಯೂಸಿಕ್ ಮತ್ತು ಅದ್ಭುತ ಕ್ಯಾಮೆರಾ ವರ್ಕ್ ಸಿನಿಮಾಗೆ ದೊಡ್ಡ ಪ್ಲಸ್ ಪಾಯಿಂಟ್.
ಇನ್ನು ಕ್ಲೈಮ್ಯಾಕ್ಸ್ನಲ್ಲಿ ಬರೋ ಆ ಸಡನ್ ಟ್ವಿಸ್ಟ್ ಇದೆಯಲ್ಲ, ಅದನ್ನಂತೂ ಯಾರೂ ಊಹೆ ಮಾಡೋಕೂ ಆಗಲ್ಲ. ಆ ಸರ್ಪ್ರೈಸ್ ಎಲಿಮೆಂಟ್ ನಿಂದಾಗಿ ಥಿಯೇಟರ್ನಲ್ಲಿ ಎಲ್ಲರೂ ಶಾಕ್ ಆಗಿ ಕ್ಲ್ಯಾಪ್ಸ್ ಹೊಡೆಯೋದು ಗ್ಯಾರಂಟಿ.
ಇನ್ನು ನಟನೆಯ ವಿಷಯಕ್ಕೆ ಬಂದ್ರೆ, ಅಕ್ಷಯ್ ಕುಮಾರ್ ಅವರ ರೇಂಜ್ ಈ ಸಿನಿಮಾದಲ್ಲಿ ಬೇರೆನೇ ಇದೆ. ಅವರ ಮಾಸ್ ಲುಕ್, ಆಟಿಟ್ಯೂಡ್ ಮತ್ತು ಸ್ಕ್ರೀನ್ ಪ್ರೆಸೆಂಸ್ ನೋಡಿ ಫ್ಯಾನ್ಸ್ ಫುಲ್ ಫಿದಾ ಆಗಿದ್ದಾರೆ. ಇತ್ತೀಚೆಗೆ ಈ ಥರ ಮಾಸ್ ಮತ್ತು ಇಂಟೆನ್ಸ್ ಲುಕ್ನಲ್ಲಿ ಅಕ್ಷಯ್ ಅವರನ್ನು ನೋಡಿರಲಿಲ್ಲ. ಅಕ್ಷಯ್ ಇಡೀ ಸಿನಿಮಾನ ತಮ್ಮ ಹೆಗಲ ಮೇಲೆ ಎತ್ಕೊಂಡು ಹೋಗಿದ್ದಾರೆ ಅಂದ್ರೆ ತಪ್ಪಾಗಲ್ಲ. ಹಾಗಂತ ಸೈಫ್ ಅಲಿ ಖಾನ್ ಏನು ಕಮ್ಮಿ ಇಲ್ಲ. ತಮ್ಮ ಪವರ್ಫುಲ್ ಆಕ್ಟಿಂಗ್ನಿಂದ ಸೈಫ್ ಕೂಡ ಅಷ್ಟೇ ಸ್ಟ್ರಾಂಗ್ ಆಗಿ ಸಾಥ್ ಕೊಟ್ಟಿದ್ದಾರೆ. ಇಬ್ಬರ ಜುಗಲ್ಬಂದಿ ನೋಡೋಕೆ ಎರಡು ಕಣ್ಣು ಸಾಲದು.



