October 31, 2026
Saturday, October 31, 2026
spot_img

ಚರ್ಮದ ಕಾಂತಿ ಮಾಯವಾಗಿದೆಯೇ? ಈ ಸಿಂಪಲ್ ಟಿಪ್ಸ್ ಮೂಲಕ ಸೌಂದರ್ಯ ಕಾಪಾಡಿಕೊಳ್ಳಿ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಇಂದಿನ ಧಾವಂತದ ಜೀವನಶೈಲಿ, ಮಾಲಿನ್ಯ ಮತ್ತು ಕಳಪೆ ಆಹಾರ ಪದ್ಧತಿಯಿಂದಾಗಿ ಹೆಚ್ಚಿನವರು ಮುಖದಲ್ಲಿ ಮೊಡವೆ ಹಾಗೂ ಅತಿ ಹೆಚ್ಚು ಕೂದಲು ಉದುರುವಿಕೆಯ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಆದರೆ, ಸ್ವಲ್ಪ ಎಚ್ಚರಿಕೆ ವಹಿಸಿದರೆ ನಮ್ಮ ಸೌಂದರ್ಯ ಮತ್ತು ಆರೋಗ್ಯವನ್ನು ನೈಸರ್ಗಿಕವಾಗಿಯೇ ಕಾಪಾಡಿಕೊಳ್ಳಬಹುದು.

ಹೈಡ್ರೇಶನ್

ನಮ್ಮ ದೇಹದ ಒಳಭಾಗ ಆರೋಗ್ಯವಾಗಿದ್ದರೆ ಮಾತ್ರ ಹೊರಗಿನ ಸೌಂದರ್ಯ ಮಿನುಗುತ್ತದೆ. ದಿನಕ್ಕೆ ಕನಿಷ್ಠ 7 ರಿಂದ 8 ಲೋಟ ನೀರು ಕುಡಿಯುವುದು ತ್ವಚೆಯಲ್ಲಿರುವ ವಿಷಕಾರಿ ಅಂಶಗಳನ್ನು ಹೊರಹಾಕಲು ಸಹಕಾರಿ. ಇದರೊಂದಿಗೆ ಹಣ್ಣುಗಳು, ತರಕಾರಿಗಳು ಮತ್ತು ಒಮೆಗಾ-3 ಕೊಬ್ಬಿನಾಮ್ಲವಿರುವ ಆಹಾರಗಳನ್ನು ಸೇವಿಸುವುದರಿಂದ ತ್ವಚೆಗೆ ಹೊಳಪು ಬರುತ್ತದೆ ಮತ್ತು ಕೂದಲು ಗಟ್ಟಿಯಾಗುತ್ತದೆ.

ಸರಳ ಮುನ್ನೆಚ್ಚರಿಕೆ

ಮುಖದ ಮೇಲಿನ ಮೊಡವೆಗಳನ್ನು ಪದೇ ಪದೇ ಮುಟ್ಟುವುದು ಅಥವಾ ಒತ್ತುವುದು ಗಾಯದ ಕಲೆಗಳಿಗೆ ದಾರಿ ಮಾಡಿಕೊಡುತ್ತದೆ. ರಾತ್ರಿ ಮಲಗುವ ಮುಂಚೆ ಮೇಕಪ್ ಅನ್ನು ಸಂಪೂರ್ಣವಾಗಿ ತೆಗೆಯುವುದು ಅತ್ಯಗತ್ಯ. ಅಲ್ಲದೆ, ಬಿಸಿಲಿಗೆ ಹೋಗುವಾಗ ಸನ್‌ಸ್ಕ್ರೀನ್ ಬಳಸುವುದರಿಂದ ತ್ವಚೆಯಲ್ಲಿ ಅಕಾಲಿಕ ಸುಕ್ಕುಗಳು ಮೂಡುವುದನ್ನು ತಡೆಯಬಹುದು ಮತ್ತು ಯೌವನವನ್ನು ದೀರ್ಘಕಾಲ ಕಾಪಾಡಿಕೊಳ್ಳಬಹುದು.

ಕೂದಲು ಉದುರುವಿಕೆ

ಮಾನಸಿಕ ಒತ್ತಡ ಮತ್ತು ರಾಸಾಯನಿಕಯುಕ್ತ ಶ್ಯಾಂಪೂಗಳ ಬಳಕೆ ಕೂದಲು ಉದುರಲು ಪ್ರಮುಖ ಕಾರಣ. ವಾರಕ್ಕೊಮ್ಮೆ ನೈಸರ್ಗಿಕ ಎಣ್ಣೆಯಿಂದ ಕೂದಲಿನ ಬುಡಕ್ಕೆ ಮಸಾಜ್ ಮಾಡುವುದು ರಕ್ತ ಸಂಚಲನವನ್ನು ಹೆಚ್ಚಿಸುತ್ತದೆ. ರಾಸಾಯನಿಕ ಮುಕ್ತ ಮೈಲ್ಡ್ ಶ್ಯಾಂಪೂ ಬಳಸಿ ಮತ್ತು ಕೂದಲಿಗೆ ಅತಿ ಹೆಚ್ಚು ಹೀಟ್ ನೀಡುವುದನ್ನು ಕಡಿಮೆ ಮಾಡಿ.

ಒತ್ತಡ ನಿರ್ವಹಣೆ

ದಿನಕ್ಕೆ ಕನಿಷ್ಠ 7-8 ಗಂಟೆಗಳ ಗಾಢ ನಿದ್ರೆ ಅತ್ಯಂತ ಅವಶ್ಯಕ. ನಿದ್ರೆಯ ಕೊರತೆಯಿಂದ ಕಣ್ಣಿನ ಕೆಳಗೆ ಕಪ್ಪು ಕಲೆ ಮತ್ತು ತ್ವಚೆ ಕಾಂತಿಹೀನವಾಗುತ್ತದೆ. ಧ್ಯಾನ ಅಥವಾ ಯೋಗದ ಮೂಲಕ ಒತ್ತಡವನ್ನು ಕಡಿಮೆ ಮಾಡಿಕೊಳ್ಳುವುದರಿಂದ ಆರೋಗ್ಯದ ಜೊತೆಗೆ ತ್ವಚೆ ಹಾಗೂ ಕೂದಲಿನ ಅಂದವೂ ದುಪ್ಪಟ್ಟಾಗುತ್ತದೆ.

ಒಟ್ಟಿನಲ್ಲಿ, ಸೌಂದರ್ಯವೆಂಬುದು ದುಬಾರಿಯಾದ ಕ್ರೀಮ್‌ಗಳಲ್ಲಿದೆ, ಬದಲಿಗೆ ನಮ್ಮ ದೈನಂದಿನ ಆರೋಗ್ಯಕರ ಜೀವನಶೈಲಿಯಲ್ಲಿದೆ ಎಂಬುದನ್ನು ಮರೆಯದಿರಿ.

Must Read

Skip to toolbar