ಹೊಸದಿಗಂತ ವರದಿ ಹುಬ್ಬಳ್ಳಿ:
ಕಬ್ಬಿಗೆ ಕನಿಷ್ಠ ₹5,500 ಬೆಂಬಲ ಬೆಲೆ ನೀಡಬೇಕು ಹಾಗೂ ವಿವಿಧ ಬೇಡಿಕೆ ಈಡೇರಿಸಲು ಆಗ್ರಹಿಸಿ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಸಂಘಟನೆಯಿಂದ ಬಂದ್ ಕರೆ ನೀಡಿದ ಹಿನ್ನೆಲೆ ಜಂಗ್ಲಿಪೇಟೆಯ ಬಸವೇಶ್ವರ ಸೇವಾ ಸಮಿತಿ ರೈತ ಸಂಘಟನೆ ಸದಸ್ಯರು ನಗರದಲ್ಲಿ ಪ್ರತಿಭಟನೆ ನಡೆಸಿದರು.
ಶನಿವಾರ ಇಲ್ಲಿಯ ಹಳೆ ಹುಬ್ಬಳ್ಳಿ ಸಮಾವೇಶಗೊಂಡ ರೈತರು ಅಂಗಡಿ ಮುಗ್ಗಟ್ಟಗಳ ಮುಚ್ಚಿಸಿ ಆಕ್ರೋಶ ವ್ಯಕ್ತಪಡಿಸಿದರು. ಹಳೇಹುಬ್ಬಳ್ಳಿ ದುರ್ಗದಬೈಲ್, ಇಂಡಿಪಂಪ್ ವೃತ್ತದಲ್ಲಿ ಪ್ರತಿಭಟನೆ ನಡೆಸಿದರು. ರಾಜ್ಯ ಸರ್ಕಾರ ಹಾಗೂ ಕೇಂದ್ರ ಸರ್ಕಾರದ ವಿರುದ್ಧ ಘೋಷಣೆ ಕೂಗಿದಿದರು.
ಹಳೇಹುಬ್ಬಳ್ಳಿ ಚನ್ನಪೇಟೆ, ಗೌಳಿಗಲ್ಲಿ, ಹಿರೇಪೇಟೆ, ದುರ್ಗದಬೈಲ್ ವೃತ್ತ, ಇಂಡಿಪಂಪ್ ವೃತ್ತದ ಸುತ್ತಮುತ್ತಲಿನ ಅಂಗಡಿಗಳನ್ನು ಬಲವಂತವಾಗಿ ಮುಚ್ಚಿಸಿದರು. ರೈತ ಪ್ರತಿಭಟನೆಗೆ ಸಹಕಾರ ನೀಡುವಂತೆ ವಿನಂತಿಸಿದರು. ವಾಹನಗಳ ಸಂಚಾರ ತಡೆದು ಧರಣಿ ಆರಂಭಿಸಿದ್ದಾರೆ. ಕೆಲವು ರೈತರು ಪ್ರಮುಖ ಬೀದಿಗಳಲ್ಲಿ ಪ್ರತಿಭಟನಾ ಮೆರವಣಿಗೆ ನಡೆಸುತ್ತಿದ್ದಾರೆ.
ಇದನ್ನೂ ಓದಿ;
ರಾಷ್ಟ್ರೀಯ ಹೆದ್ದಾರಿ ಅದರಗುಂಚಿ ಕ್ರಾಸ್‌ನ ಗಣೇಶ ಹೋಟೆಲ್ ಬಳಿ ಹಾಗೂ ಗಬ್ಬೂರ ಕ್ರಾಸ್‌ನಲ್ಲಿ ಪ್ರತಿಭಟನೆಗೆ ನಿಷೇಧಾಜ್ಞೆ ಇರುವ ಹಿನ್ನೆಲೆಯಲ್ಲಿ, ನಗರ ಪ್ರದೇಶದಲ್ಲಿ ಪ್ರತಿಭಟನೆ ಹಮ್ಮಿಕೊಂಡಿದ್ದಾರೆ.
ಶಿವಾನಂದ ಹೊಸೂರು, ಚನ್ನಪ್ಪ ಅಂಗಡಿ, ವಿರೂಪಾಕ್ಷಪ್ಪ, ಬಸವರಾಜ ಮಾವನೂರ, ಸಿದ್ದಪ್ಪ ಕಂಬಳಿ ಸೇರಿದಂತೆ 50 ಕ್ಕೂ ಹೆಚ್ಚು ರೈತರು ಇದ್ದಾರೆ.



