ಹೊಸದಿಗಂತ ಡಿಜಿಟಲ್ ಡೆಸ್ಕ್:
ಬಾಲಿವುಡ್ ಅಂದ್ರೆನೆ ಹಾಗೆ, ಒಂದು ಕಾಲದಲ್ಲಿ ನಟಿಯರು ಮದುವೆಯಾಗಿ ಮಗು ಮಾಡಿಕೊಂಡರೆ ಅವರ ಕೆರಿಯರ್ ಖತಂ ಅಂತಾನೇ ಅಂದ್ಕೊಳ್ತಿದ್ರು. ಮುಖ್ಯ ನಾಯಕಿಯರಾಗಿ ನಟಿಸ್ತಿದ್ದವರು ಮಗು ಆದ್ಮೇಲೆ ಅಕ್ಕ, ಅತ್ತಿಗೆ, ಅಥವಾ ತಾಯಿ ರೋಲ್‌ಗಳಿಗೆ ಶಿಫ್ಟ್ ಆಗಿಬಿಡ್ತಿದ್ರು. ಆದ್ರೆ ಇವತ್ತಿನ ಕಾಲ ಹಂಗಿಲ್ಲ. ಕಾಲ ಬದಲಾಗಿದೆ, ಅದರ ಜೊತೆಗೆ ನಮ್ಮ ಪ್ರೇಕ್ಷಕರ ಯೋಚನೆ ಕೂಡ ಚೇಂಜ್ ಆಗಿದೆ.
ಈ ವಿಷ್ಯವನ್ನ ಸ್ವತಃ ನಟಿ ಪರಿಣೀತಿ ಚೋಪ್ರಾ ಅವರೇ ಹೇಳಿದ್ದಾರೆ. ತಮ್ಮ ಹೊಸ ಓಟಿಟಿ ಸೀರೀಸ್ ‘ಶಕ್: ಟ್ರಸ್ಟ್ ನೋ ಒನ್’ ಟ್ರೇಲರ್ ಲಾಂಚ್ ಇವೆಂಟ್‌ನಲ್ಲಿ ಮಾತನಾಡಿದ ಪರಿಣೀತಿ, ಇವತ್ತಿನ ಸಿನಿಮಾ ಇಂಡಸ್ಟ್ರಿ ಮತ್ತು ಆಡಿಯನ್ಸ್ ಬಗ್ಗೆ ಮನಬಿಚ್ಚಿ ಮಾತನಾಡಿದ್ದಾರೆ.
“ಈಗಿನ ಜನರೇಷನ್ ನಟಿಯರಾದ ಆಲಿಯಾ ಭಟ್, ದೀಪಿಕಾ ಪಡುಕೋಣೆ, ನಮ್ಮ ಅಕ್ಕ ಪ್ರಿಯಾಂಕಾ ಚೋಪ್ರಾ ಎಲ್ಲರನ್ನೂ ನೋಡಿ. ಮಗು ಆದ್ಮೇಲೂ ಅವರೆಲ್ಲ ಸೂಪರ್ ಆಗಿ ಕೆಲಸ ಮಾಡ್ತಿದ್ದಾರೆ. ಇನ್ನು ಹೇಳಬೇಕಂದ್ರೆ, ತಾಯಿಯಾದ ಮೇಲೆ ಅವರು ಮುಂಚೆಗಿಂತಲೂ ಆಫರ್‌ಗಳನ್ನು ಗಿಟ್ಟಿಸಿಕೊಂಡು, ಅದ್ಭುತವಾಗಿ ನಟಿಸ್ತಿದ್ದಾರೆ” ಎಂದು ಹೆಮ್ಮೆಯಿಂದ ಹೇಳಿದ್ದಾರೆ.
ಇಂಡಸ್ಟ್ರಿ ಅಂದ್ರೆ ಬರೀ ನಟ-ನಟಿಯರಲ್ಲ, ಅಲ್ಲಿ ಪ್ರೇಕ್ಷಕರ ಪಾತ್ರವೇ ದೊಡ್ಡದು. “ಜನ ಇವತ್ತು ತಾಯಂದಿರಾದ ನಟಿಯರನ್ನು ‘ಕ್ಯಾನ್ಸಲ್’ ಮಾಡ್ತಿಲ್ಲ. ಪ್ರೇಕ್ಷಕರಿಂದ ಡಿಮ್ಯಾಂಡ್ ಇರೋದ್ರಿಂದಾನೇ ಡೈರೆಕ್ಟರ್‌ಗಳು, ರೈಟರ್‌ಗಳು ಇವತ್ತು ನಮಗೆ ತಕ್ಕಂತೆ ಒಳ್ಳೊಳ್ಳೆ ಕಥೆಗಳನ್ನು ಬರೀತಿದ್ದಾರೆ. ಇದು ನಿಜಕ್ಕೂ ಪಾಸಿಟಿವ್ ವಿಚಾರ,” ಎಂದು ಖುಷಿ ಹಂಚಿಕೊಂಡಿದ್ದಾರೆ.
ಅಂದಹಾಗೆ, ಪರಿಣೀತಿ ಚೋಪ್ರಾ ಡಿಜಿಟಲ್ ಅಖಾಡಕ್ಕೆ ಎಂಟ್ರಿ ಕೊಡ್ತಿರೋ ‘ಶಕ್: ಟ್ರಸ್ಟ್ ನೋ ಒನ್’ ಸೀರೀಸ್ ಅನ್ನು ರೇನ್‌ಸಿಲ್ ಡಿಸಿಲ್ವಾ ಮತ್ತು ಸಿದ್ಧಾರ್ಥ್ ಪಿ. ಮಲ್ಹೋತ್ರಾ ಕ್ರಿಯೇಟ್ ಮಾಡಿದ್ದು, ರೇನ್‌ಸಿಲ್ ಡೈರೆಕ್ಟ್ ಮಾಡಿದ್ದಾರೆ. ಆಲ್ಕೆಮಿ ಫಿಲ್ಮ್ಸ್ ಬ್ಯಾನರ್‌ನಲ್ಲಿ ಮೂಡಿಬರುತ್ತಿರೋ ಈ ಸೀರೀಸ್, ಸಂಶಯ ಮತ್ತು ನಂಬಿಕೆಯ ನಡುವಿನ ರೋಚಕ ಕಥೆಯನ್ನು ಒಳಗೊಂಡಿದೆ.



