September 11, 2026
Friday, September 11, 2026
spot_img

ಇಂಡೈರೆಕ್ಟ್‌ ಆಗಿ ಬಾಲಿವುಡ್‌ ಸಿಂಗರ್‌ ಬಾದ್‌ಶಾರನ್ನು ʼಪ್ಲೇಬಾಯ್‌ ʼಎಂದು ಕರೆದ ಎಕ್ಸ್‌ ವೈಫ್‌ ಇಶಾ ರಿಖಿ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಬಾಲಿವುಡ್‌ ಗಾಯಕ ಬಾದ್‌ಶಾ ಹಾಗೂ ಪಂಜಾಬಿ ನಟಿ ಇಶಾ ರಿಖಿ ದಾಂಪತ್ಯ ಇತ್ತೀಚೆಗಷ್ಟೇ ಮುರಿದುಬಿದ್ದಿದೆ. ಇದಾದ ನಂತರ ಇಶಾ ಬಿಗ್‌ಬಾಸ್‌ ಮನೆಯೊಳಕ್ಕೆ ಕಾಲಿಟ್ಟಿದ್ದು, ಇಲ್ಲಿ ಇಂಡೈರೆಕ್ಟ್‌ ಆಗಿ ತಮ್ಮ ಮಾಜಿ ಪತಿ ಬಗ್ಗೆ ಮಾತನಾಡಿದ್ದಾರೆ.

ಬಿಗ್‌ಬಾಸ್‌ ಮನೆಯಲ್ಲಿರುವ ಸ್ಪರ್ಧಿ ಗುಲ್ಲು ಇಶಾಗೆ ನೀವು ರೆಡ್‌ಫ್ಲಾಗ್‌ ಎಂದು ಕರೆದಿದ್ದಾರೆ. ಆಗ ಮಾತನಾಡಿದ ಇಶಾ ನಾನು ರೆಡ್‌ಫ್ಲಾಗ್‌ ಅಲ್ವೇ ಅಲ್ಲ. ನನ್ನ ಜೀವನದಲ್ಲಿ ರೆಡ್‌ಫ್ಲಾಗ್‌ಗಳನ್ನು ಅತ್ಯಂತ ಹತ್ತಿರದಿಂದ ನೋಡಿದ್ದೇನೆ. ಇತರರಿಗೆ ಮೋಸ ಮಾಡುವ ವ್ಯಕ್ತಿಗಳಿಗೆ ಪಶ್ಚಾತ್ತಾಪ ಕಾಡೋದಿಲ್ವಾ? ಪ್ಲೇಬಾಯ್‌ ರೀತಿ ಹುಡುಗರಿಗೆ ತಾವು ಮಾಡ್ತಿರೋದು ತಪ್ಪು ಎಂದು ಅನಿಸೋದಿಲ್ವಾ ಎಂದು ಮಾತನಾಡಿದ್ದಾರೆ.

ಸೋಷಿಯಲ್ ಮೀಡಿಯಾದಲ್ಲಿ ಈ ವಿಡಿಯೋ ಹರಿದಾಡುತ್ತಿದ್ದಂತೆ, ಇಶಾ ರಿಖಿ ಪರೋಕ್ಷವಾಗಿ ಬಾದ್‌ಶಾ ಅವರನ್ನೇ ಪ್ಲೇಬಾಯ್ ಎಂದು ಕರೆದಿದ್ದಾರೆ ಹಾಗೂ ಬಾದ್‌ಶಾ ಮೋಸ ಮಾಡಿದ್ದರಿಂದಲೇ ಈ ಸಂಬಂಧ ಮುರಿದುಬಿದ್ದಿದೆ ಎಂದು ನೆಟ್ಟಿಗರು ಕಮೆಂಟ್ ಮಾಡುತ್ತಿದ್ದಾರೆ.

2026ರ ಮಾರ್ಚ್‌ನಲ್ಲಿ ಬಾದ್‌ಶಾ ಹಾಗೂ ಇಶಾ ರಿಖಿ ಅವರ ರಹಸ್ಯ ಮದುವೆಯ ಫೋಟೋಗಳು ವೈರಲ್ ಆಗಿದ್ದವು. ಆದರೆ, ಈ ಮದುವೆ ಹೆಚ್ಚು ದಿನ ಬಾಳಲಿಲ್ಲ. ಇದೀಗ ಇಶಾ ರಿಖಿ ಅವರ ಈ ಹೇಳಿಕೆಗಳು ಬಾಲಿವುಡ್ ಹಾಗೂ ಪಂಜಾಬಿ ಚಿತ್ರರಂಗದಲ್ಲಿ ಭಾರಿ ಚರ್ಚೆಗೆ ಗ್ರಾಸವಾಗಿವೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !